ವಿಶೇಷ

ಆಕೆಯ ಚಿತ್ರ

ಸೆಕೆಂಡ್ ಸೆಟಪ್ ಅರ್ಥಾತ್ ಎರಡನೇ ಸಂಬಂಧ ಹೊಂದಿರುವ ವ್ಯಕ್ತಿಗಳು ಇಂದೋ ನಾಳೆಯೋ ಸಿಕ್ಕಿ ಬಿದ್ದೇಬೀಳುತ್ತಾರೆ...

ಸೆಕೆಂಡ್ ಸೆಟಪ್ ಅರ್ಥಾತ್ ಎರಡನೇ ಸಂಬಂಧ ಹೊಂದಿರುವ ವ್ಯಕ್ತಿಗಳು ಇಂದೋ ನಾಳೆಯೋ ಸಿಕ್ಕಿ ಬಿದ್ದೇಬೀಳುತ್ತಾರೆ. ಅವರು ತಮ್ಮನಲ್ಲೆಯರ ಕೈಗೆ ಸಿಕ್ಕಿ ಬಿದ್ದರಂತೂ ಪರಿಸ್ಥಿತಿ ದಾರುಣವಾಗಿರುತ್ತದೆ. ಆಧುನಿಕ ಸಿನಿಮಾಗಳ ಕಾಮಿಡಿ ಆಫ್ ಎರರ್ಸ್ ಥರವೇ ಕಾಣಿಸುವ ಈ ಪ್ರಸಂಗವನ್ನು ಓದಿ

ಪುರಸ್ತನ್ವಾಯ ಗೋತ್ರಸ್ಖಲನಚಕಿತೋಹಂ ನತಮುಖಃ
ಪ್ರವೃತ್ತೋ ವೈಲಾಕ್ಷ್ಯತ್ಕಿಮಪಿ ಲಿಖಿತುಂ ದೈವಹತಕಃ
ಸ್ಫಟೋ ರೇಖಾನ್ಯಾಸಃ ಕಥಮಪಿ ಸ ತಾದೃಕ್ ಪರಿಣತೋ
ಗತಾಯೇನ ವ್ಯಕ್ತಿಂ ಪುನರವಯವೈಃ ಸೈವ ತರುಣೀ
ತತಶ್ಚಾಭಿಜ್ಞಾಯ ಸ್ಪುರದರುಣಗಂಡಸ್ಥಲರುಚಾ
ಮನಸ್ವಿನ್ಯಾ  ರೂಢಪ್ರಣಯ ಸಹಸೋದ್ಗದ್ಗದ್ಗಿರಾ
ಅಹೋಂ ಚಿತ್ರ ಚಿತ್ರಂ ಸ್ಫುಟಮಿತಿನಿಗಧಾಶ್ರುಕಲುಷಂ

ಆತ ತನ್ನ ನಲ್ಲೆಯ ಬಳಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ತಪ್ಪಿ ಇನ್ನೊಬ್ಬಳು ಪ್ರೇಯಸಿಯ ಹೆಸರಿನ ಮೂಲಕ ಆಕೆಯನ್ನು ಸಂಬೋಧಿಸಿಬಿಟ್ಟ!. ಇದು ನಲ್ಲೆಗೆ ಗೊತ್ತಾಗಿ ಆಕೆ ಕೆಂಗಣ್ಣು ಬೀರತೊಡಗಿದಳು. ಆತೆ ಇನ್ನಷ್ಟು ಸಿಟ್ಟುಗೊಳ್ಳಬಾರದೆಂದು ತಲೆ ತಗ್ಗಿಸಿ ಕೈಗೆ ಸಿಕ್ಕಿದ ಸುಣ್ಣದ ಚೂರಿನಿಂದ ನೆಲದಲ್ಲಿ ಆಕೆಯ ಚಿತ್ರ ಬರೆದು ಮುದಗೊಳಿಸಲು ಹೊರಟ. ಆದ್ರೆ  ಆತನ ದುರ್ದೈವ , ಆ ಚಿತ್ರ ಆತನಿಗರಿವಿಲ್ಲದೇ ಇನ್ನೊಬ್ಬಳು ಪ್ರೇಯಸಿಯ ರೂಪವನ್ನು ತನ್ನಿಂತಾನೇ ಪಡೆದುಕೊಂಡುಬಿಟ್ಟಿತು!. ಇದನ್ನು ನೋಡಿ ಆ ನಲ್ಲೆ , ಅಯ್ಯಯ್ಯೋ  ಆ ಮನೆಹಾಳಿಯ ಚಿತ್ರವನ್ನೇ ನನ್ನ ಮುಂದೆ ಎಷ್ಟು ಸ್ಪಷ್ಟವಾಗಿ ಬರೆದುಬಿಟ್ಟನಲ್ಲಾ. ಈತನ ಮನಸ್ಸಲ್ಲಿ ನಾನಿಲ್ಲ, ಆಕೆಯೇ ಇದ್ದಾಳಲ್ಲಾ' ಎಂದು ಬಾಯಿ ಬಡಿದುಕೊಳ್ಳತೊಡಗಿದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT