ಮಿನಿ ಸ್ಕೈ ಸಿಟಿ ಗಗನಚುಂಬಿ ಕಟ್ಟಡದ ಒಂದು ದೃಶ್ಯ 
ವಿಶೇಷ

೧೯ ದಿನಗಳಲ್ಲಿ ೫೭ ಅಂತಸ್ತಿನ ಗಗನಚುಂಬಿ ಕಟ್ಟಡ ನಿರ್ಮಿಸಿದ ಚೈನಾ ಸಂಸ್ಥೆ

ಚೈನಾ ಕೇಂದ್ರ ಪ್ರದೇಶದಲ್ಲಿ ೧೯ ದಿನಗಳಲ್ಲಿ ೫೭ ಅಂತಸ್ತಿನ ಗಗನಚುಂಬಿ ಕಟ್ಟಡ ಏರಿಸಿ ವಿಶ್ವದ ಅತಿ ವೇಗದ ಕಟ್ಟಡ ನಿರ್ಮಾಣ ಸಂಸ್ಥೆ

ಚಾಂಗ್ಶ: ಚೈನಾ ಕೇಂದ್ರ ಪ್ರದೇಶದಲ್ಲಿ ೧೯ ದಿನಗಳಲ್ಲಿ ೫೭ ಅಂತಸ್ತಿನ ಗಗನಚುಂಬಿ ಕಟ್ಟಡ ಏರಿಸಿ ವಿಶ್ವದ ಅತಿ ವೇಗದ ಕಟ್ಟಡ ನಿರ್ಮಾಣ ಸಂಸ್ಥೆ ಎಂದು ಚೈನಾ ನಿರ್ಮಾಣ ಸಂಸ್ಥೆಯೊಂದು ಹೇಳಿಕೊಂಡಿದೆ.

ಚಾಂಗ್ಶಾದ ಹನನ್ ಪ್ರಾವಿಂಶಿಯಲ್ ರಾಜಧಾನಿಯಲ್ಲಿ ಮಾಡ್ಯುಲಾರ್ ವಿಧಾನದಿಂದ, ಗಾಜು ಮತ್ತು ಉಕ್ಕು ಬಳಸಿ ದಿನಕೆ ಮೂರು ಅಂತಸ್ತುಗಳನ್ನು ಏರಿಸಿ ಈ ಸಾಧನೆ ಮಾಡಿದೆ ಎಂದು 'ದ ಬೋರ್ಡ್ ಸಸ್ಟೇನೇಬಲ್ ಬ್ಯುಲ್ಡಿಂಗ್ ಕಂಪನಿ' ಉಪಾಧ್ಯಕ್ಷ ಕ್ಸಿಯೋ ಚಂಗ್ಗೆಂಗ್ ತಿಳಿಸಿದ್ದಾರೆ. ಈ ಕಟ್ಟಡ ಹೆಸರು 'ಮಿನಿ ಸ್ಕೈ ಸಿಟಿ' (ಸಣ್ಣ ಆಕಾಶ ನಗರ).

ವಿಶ್ವದ ಅತಿ ದೊಡ್ಡ ಕಟ್ಟಡ ಅಂದರೆ ೨೨೦ ಅಂತಸ್ತುಗಳ ಕಟ್ಟಡವನ್ನು ಮೂರು ತಿಂಗಳುಗಳಲ್ಲಿ ಕಟ್ಟುವ ಗುರಿ ಇಟ್ಟುಕೊಂಡಿರುವ ಈ ಸಂಸ್ಥೆ ಈ ಕಟ್ಟಡ ಕಟ್ಟುವ ವಿಧಾನದ  ವಿಡಿಯೋ ಯುಟ್ಯೂಬ್ ನಲ್ಲಿ ಅತಿ ಹೆಚ್ಚಿನ ಜನಪ್ರಿಯತೆ ಗಳಿಸಿದೆ.

"ಶಾಸ್ತ್ರೀಯ ವಿಧಾನದಲ್ಲಿ ಅತಿ ಎತ್ತರದ ಗಗನಚುಂಬಿ ಕಟ್ಟಡಗಳನ್ನು ಇಟ್ಟಿಗೆಯ ಮೇಲೆ ಇಟ್ಟಿಗೆ ಇಟ್ಟು ಕಟ್ಟುತ್ತಾರೆ ಆದರೆ ನಮ್ಮ ವಿಧಾನದಲ್ಲಿ ಬ್ಲಾಕ್ ಗಳನ್ನು ಜೋಡಿಸುವ ಮೂಲಕ ಕಟ್ಟುತ್ತೇವೆ" ಎಂದು ಸಂಸ್ಥೆಯ ಎಂಜಿನಿಯರ್ ಕ್ಸಿಯಂಗ್ವೈನ್ ಹೇಳಿದ್ದಾರೆ.

ಚಾಂಗ್ಶಾದಲ್ಲೆ ೨೨೦ ಅಂತಸ್ತುಗಳ ಕಟ್ಟಡ ಕಟ್ಟಲು ಪರವಾನಗಿಗಾಗಿ ಸಂಸ್ಥೆ ಕಾಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!