ವೆಂಟ್ರಿ ಲೋಕ್ವಿಸ್ಟ್ ಇಂದು ಶ್ರೀ ರವೀಂದ್ರ 
ವಿಶೇಷ

ಲೋಕದ ಡಿಂಕು!

ಈ ಬಾರಿಯ ಸಂಕ್ರಾಂತಿಗೆ ಅಮೆರಿಕ ಕನ್ನಡಿಗರ ಮನೆಗಳಲ್ಲಿ ಎಳ್ಳು ಬೀರಲಿಕ್ಕೆ ಬೆಂಗಳೂರಿನಿಂದ...

ವಾಷಿಂಗ್ಟನ್ ಡಿಸಿಯ 'ಕಾವೇರಿ' ಕನ್ನಡ ಸಂಘ, ಪಿಟ್ಸ್‌ಬರ್ಗ್‌ನ 'ಸಂಗಮ' ಕನ್ನಡ ಸಂಘ, ಶಿಕಾಗೋದಲ್ಲಿರುವ 'ವಿದ್ಯಾರಣ್ಯ' ಕನ್ನಡಕೂಟ, ಮತ್ತು ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟಗಳ ಹೊಸ ಕಾರ್ಯಕಾರಿ ಸಮಿತಿಗಳ ಉತ್ಸುಕ ಸದಸ್ಯರು ಸೇರಿಕೊಂಡು ಇಂದು ಶ್ರೀಯವರನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಿವೆ...

ಈ ಬಾರಿಯ ಸಂಕ್ರಾಂತಿಗೆ ಅಮೆರಿಕ ಕನ್ನಡಿಗರ ಮನೆಗಳಲ್ಲಿ ಎಳ್ಳು ಬೀರಲಿಕ್ಕೆ ಬೆಂಗಳೂರಿನಿಂದ ಖ್ಯಾತ ಧ್ವನಿ ಮಾಯೆ ಕಲಾವಿದೆ (ವೆಂಟ್ರಿ ಲೋಕ್ವಿಸ್ಟ್) ಇಂದು ಶ್ರೀ ರವೀಂದ್ರ ಮತ್ತು ಅವರ ಮಾತಾಡುವ ಗೊಂಬೆಗಳ ಬಳಗ ಬರುತ್ತಿದೆ!

ವಾಷಿಂಗ್ಟನ್ ಡಿಸಿ, ಪಿಟ್ಸ್‌ಬರ್ಗ್, ಶಿಕಾಗೋ, ಮತ್ತು ಸ್ಯಾನ್ ಫ್ರಾನ್ಸಿಸ್ಕೋ-ಹೀಗೆ ಅಮೆರಿಕದ ನಾಲ್ಕು ಬೇರೆ ಬೇರೆ ನಗರಗಳಲ್ಲಿರುವ ಕನ್ನಡ ಸಂಘಗಳು ಸಂಕ್ರಾಂತಿ ಪ್ರಯುಕ್ತ ಸಾಂಸ್ಕೃತಿಕ ಉತ್ಸವಗಳಲ್ಲಿ ಇಂದು ಶ್ರೀ ಅವರಿಂದ ಧ್ವನಿಮಾಯೆ ಪ್ರದರ್ಶನಗಳನ್ನು ಏರ್ಪಡಿಸಿವೆ.

ಇಂದು ಶ್ರೀ ಅವರು ತಮ್ಮ ಜನಪ್ರಿಯ ಗೊಂಬೆಗಳಾದ 'ಡಿಂಕು', 'ಅಜ್ಜಿ' ಮತ್ತು 'ತಾತ'- ಇವುಗಳನ್ನು ಕರೆದುಕೊಂಡು ಬರಲಿದ್ದಾರೆ. ವಾಷಿಂಗ್ಟನ್ ಡಿಸಿಯ 'ಕಾವೇರಿ' ಕನ್ನಡ ಸಂಘ, ಪಿಟ್ಸ್‌ಬರ್ಗ್‌ನ 'ಸಂಗಮ' ಕನ್ನಡ ಸಂಘ, ಶಿಕಾಗೋದಲ್ಲಿರುವ 'ವಿದ್ಯಾರಣ್ಯ' ಕನ್ನಡಕೂಟ, ಮತ್ತು ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟಗಳ ಹೊಸ ಕಾರ್ಯಕಾರಿ ಸಮಿತಿಗಳ ಉತ್ಸುಕ ಸದಸ್ಯರು ಸೇರಿಕೊಂಡು ಇಂದು ಶ್ರೀಯವರನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಿವೆ.

ಧ್ವನಿಮಾಯೆಯಲ್ಲಿ ಭಾರತದ ಪ್ರಪ್ರಥಮ ಮಹಿಳಾ ಕಲಾವಿದೆ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿರುವ ಇಂದು ಶ್ರೀ, ಸೋನಿ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ತೀರ್ಪುಗಾರ ಅನುಮಲಿಕ್ ಅವರಿಂದ ಭಾರತದ ಅತ್ಯುತ್ತಮ ಧ್ವನಿಮಾಯೆ ಕಲಾವಿದೆ ಎಂದು ಶಹಭಾಶ್ ಗಿರಿ ಪಡೆದವರು. ಬೇರೆ ಬೇರೆ ಟಿವಿ ವಾಹಿನಿಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಧ್ವನಿಮಾಯೆ ಪ್ರದರ್ಶನ ಕಾರ್ಯಕ್ರಮಗಳನ್ನು ನೀಡಿದವರು.

ಮೈಸೂರು ದಸರಾ ಉತ್ಸವದಲ್ಲಿ ಮೂರು ಬಾರಿ ಭಾಗವಹಿಸಿ ಪ್ರೇಕ್ಷಕರ ಮನ ಗೆದ್ದವರು. ಏಕಕಾಲಕ್ಕೆ ಮೂರು ಗೊಂಬೆಗಳ ಧ್ವನಿಯನ್ನು ಅನುಕರಿಸುವ ಕೌಶಲವನ್ನು ಇಂದು ಶ್ರೀ ಪ್ರದರ್ಶಿಸುತ್ತಾರೆ. ಅವರ ಕಾರ್ಯಕ್ರಮಗಳೆಂದರೆ ಏಕಪಾತ್ರಾಭಿನಯ, ಸ್ಟಾಂಡ್‌ಅಪ್ ಕಾಮೆಡಿ, ಹಾಸ್ಯ ನಾಟಕ ಮುಂತಾದ ಎಲ್ಲ ಪ್ರಕಾರಗಳೂ ಒಂದಾಗಿ ಕಳೆಯೇರುತ್ತದೆ. ಮಕ್ಕಳಿಂದ ಮುದುಕರವರೆಗೂ ಮನೆಮಂದಿಗೆಲ್ಲ ಭರಪೂರ ಮನರಂಜನೆ ಸಿಗುತ್ತದೆ.

ಇಂದು ಶ್ರೀ ರವೀಂದ್ರ ಈ ಮೊದಲೂ ಅಮೆರಿಕ ಪರ್ಯಟನೆ ಮಾಡಿದ್ದಾರೆ. ಇಲ್ಲಿ ವಿವಿಧ ನಗರಗಳಲ್ಲಿ ಧ್ವನಿಮಾಯೆ ಪ್ರದರ್ಶನಗಳನ್ನು ನಡೆಸಿ ಪ್ರೇಕ್ಷಕರಿಂದ 'ಎದ್ದು ನಿಂತು ಚಪ್ಪಾಳೆ' ಗಿಟ್ಟಿಸಿಕೊಂಡಿದ್ದಾರೆ. ಕೆಂಟಕಿ ನಗರದಲ್ಲಿ ಧ್ವನಿಮಾಯೆ ಕಲಾವಿದರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದಲ್ಲದೇ ಅವರು ಬಹರೈನ್, ಸಿಂಗಾಪುರ ಮತ್ತು ಥೈಲ್ಯಾಂಡ್‌ನಲ್ಲೂ ಭರ್ಜರಿ ಪ್ರದರ್ಶನಗಳನ್ನು ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT