ಆರ್.ಕೆ ಲಕ್ಷ್ಮಣ್ 
ವಿಶೇಷ

'ಲಕ್ಷ್ಮಣ್' ರೇಖೆ

ಬರೀ ರೇಖೆಗಳ ಮೂಲಕ ಸಾಮಾನ್ಯ ಮನುಷ್ಯನೊಬ್ಬನ ದನಿಯಾದವರು ಆರ್.ಕೆ ಲಕ್ಷ್ಮಣ್. ಶ್ರೀಸಾಮಾನ್ಯನ ಆತಂಕ, ನಿರೀಕ್ಷೆ , ಸಮಸ್ಯೆಗಳನ್ನೆಲ್ಲಾ....

ಬರೀ ರೇಖೆಗಳ ಮೂಲಕ ಸಾಮಾನ್ಯ ಮನುಷ್ಯನೊಬ್ಬನ ದನಿಯಾದವರು ಆರ್.ಕೆ ಲಕ್ಷ್ಮಣ್.  ಶ್ರೀಸಾಮಾನ್ಯನ ಆತಂಕ, ನಿರೀಕ್ಷೆ , ಸಮಸ್ಯೆಗಳನ್ನೆಲ್ಲಾ ವ್ಯಂಗ್ಯಚಿತ್ರದ ಮೂಲಕವೇ ಬಿಂಬಿಸಿ 'ಕಾಮನ್ ಮ್ಯಾನ್' ಗಳ ನಡುವೆ ಶ್ರೀಸಾಮಾನ್ಯರೆನಿಸಿಕೊಂಡ ವ್ಯಂಗ್ಯ ಚಿತ್ರಗಳ ಚಕ್ರವರ್ತಿ ಇನ್ನು ನೆನಪುಗಳು ಮಾತ್ರ. ಲೋಕದ ಅಂಕುಡೊಂಕುಗಳನ್ನು ಗೆರೆಗಳಲ್ಲಿ ಬೊಟ್ಟು ಮಾಡಿ ತೋರಿಸಿದಾಗ ಅದಕ್ಕೆ ಪ್ರಶಂಸೆ ಜತೆ ಟೀಕೆಗಳೂ ವ್ಯಕ್ತವಾಗುತ್ತಿದ್ದವು. ಆದರೆ ಲಕ್ಷ್ಮಣ್ ಜನಸಾಮಾನ್ಯರ ನಡುವೆ ಸಾಮಾನ್ಯರಾಗಿ ಉಳಿದು ಚಿತ್ರಗಳ ಮೂಲಕವೇ ಕೋಟ್ಯಂತರ ಮಂದಿಯ ಹೃದಯ ಗೆದ್ದುಕೊಂಡಿದ್ದರು.

 1921 ಅಕ್ಟೋಬರ್ 24 ರಂದು ಮೈಸೂರಿನಲ್ಲಿ ಜನಿಸಿದ ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಎಂಬ ಆರ್.ಕೆ ಲಕ್ಷ್ಮಣ್ ಕಾರ್ಟೂನಿಸ್ಟ್, ಇಲ್ಯುಸ್ಟ್ರೇಟರ್ ಆಗಿ ಜನಮನ್ನಣೆ ಗಳಿಸಿದವರು. ಹೇಳಬೇಕಾದ ಸಂದೇಶವನ್ನು ಮೊನಚಾಗಿ ಹೇಳಿ, ವಿಡಂಬನಾತ್ಮಕ ರೇಖಾಚಿತ್ರಗಳ ಮೂಲಕ ಟಾಂಟ್ ನೀಡಿದರೆ, ಕೆಲವೊಂದು ವಿಷಯಗಳನ್ನು ಹಾಸ್ಯದ ಮೂಲಕ ಹೇಳಿ ನಗೆಯುಕ್ಕಿಸಿದವರು.


ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ 'You Said It' ಎಂಬ ಪಾಕೆಟ್ ಕಾರ್ಟೂನ್ ಮೂಲಕ ಲಕ್ಷ್ಮಣ್ ಭಾರತೀಯರಿಗೆ 'ಕಾಮನ್ ಮ್ಯಾನ್' ಪರಿಚಯಿಸಿದ್ದು. ಆರ್ಥಿಕ, ಸಾಮಾಜಿಕ ಅಥವಾ ಇನ್ಯಾವುದೇ ಸಮಸ್ಯೆಗಳಿರಲಿ ಎಲ್ಲವನ್ನೂ ಕಾರ್ಟೂನ್ಗಳಲ್ಲಿ ಚಿತ್ರಿಸಿ ಜಗತ್ತನ್ನೇ ಬರೀ ರೇಖೆಗಳಲ್ಲಿ ಹಿಡಿದಿಡುವ ಶಕ್ತಿ ಅವರಿಗಿತ್ತು ಎಂದರೆ ಅದು ಉತ್ಪ್ರೇಕ್ಷೆಯಲ್ಲ.  'ದ ಸ್ಟ್ಯಾಂಡರ್ಡ್ ಮ್ಯಾಗಜಿನ್',  ಪಂಚ್, ಬೈಸ್ಟ್ಯಾಂಡರ್, ವೈಡ್ ವರ್ಲ್ಡ್, ಟಿಟ್ ಬಿಟ್ಸ್ ಮೊದಲಾದ ಪತ್ರಿಕೆಗಳಲ್ಲಿಯೂ ಕಾರ್ಟೂನ್ಗಳನ್ನು ರಚಿಸಿದ ಲಕ್ಷ್ಮಣ್ ಐದು ದಶಕಗಳ ಕಾಲ ವ್ಯಂಗ್ಯಚಿತ್ರ ಲೋಕವನ್ನಾಳಿದ ಶ್ರೀಸಾಮಾನ್ಯ.

ತುರ್ತು ಪರಿಸ್ಥಿತಿಯ ಉಪಚುನಾವಣೆಯಲ್ಲಿ ಇಂದಿರಾಗಾಂಧಿಯವರ ಗೆಲವು, ಬಿಜೆಪಿ -ಶಿವಸೇನೆ ಸಂಬಂಧ, ಸಲ್ಮಾನ್ ಖಾನ್ ಆ್ಯಂಡ್ ರನ್ ಪ್ರಕರಣ, ಗುಜರಾತ್ ಸಂತ್ರಸ್ತರ ನಿಧಿ ಎಲ್ಲವನ್ನೂ ರೇಖೆಗಳಲ್ಲಿ ಹಿಡಿದಿಟ್ಟು ಜನದನಿಯಾದವರು. ಅಷ್ಟೇ ಯಾಕೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ಗೆ ಫೆರಾರಿ ಕಾರ್ ಉಡುಗೊರೆಯಾಗಿ ಬಂದಾಗ ಅದನ್ನು ಲಕ್ಷ್ಮಣ್ ತಮ್ಮ ವ್ಯಂಗ್ಯ ಚಿತ್ರದಲ್ಲಿ ಚಿತ್ರಿಸಿದ್ದನ್ನೇ ಕೋರ್ಟ್ ಸಾರ್ವಜನಿಕ ಹಿತಾಸಕ್ತಿಯ ವಿಚಾರ ಎಂದು ಗಮನಿಸಿತ್ತು!

 

ಮೊದಮೊದಲಿಗೆ ಮನೆಯ ಗೋಡೆಯಲ್ಲಿಯೇ ಗೀಚುತ್ತಿದ್ದ ಲಕ್ಷ್ಮಣ್ ಮಾಸಪತ್ರಿಕೆಗಳ ಮೂಲಕ ಈ ರಂಗಕ್ಕೆ ಪ್ರವೇಶ ಪಡೆದಿದ್ದರು. ಶಾಲಾ ದಿನಗಳಲ್ಲಿ ಬರೆಯುತ್ತಿದ್ದ ಚಿತ್ರಗಳಿಗೆ ಅಧ್ಯಾಪಕರಿಂದ ಪ್ರಶಂಸೆ ಸಿಕ್ಕಿದಾಗ ಲಕ್ಷ್ಮಣ್ ಅವರಿಗೆ ತನ್ನಲ್ಲಿರುವ ಕಲಾವಿದನ ಶಕ್ತಿಯ ಅರಿವಾಯಿತು. ಹೈಸ್ಕೂಲ್ ನಂತರ ಅವರು ಮುಂಬೈಯ ಜೆ.ಜೆ ಸ್ಕೂಲ್ ಆಫ್ ಆರ್ಟ್ನಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ್ದರೂ ಅದು ತಿರಸ್ಕೃತವಾಗಿತ್ತು. ಇದಾದನಂತರ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಆರ್ಟ್ಸ್ ಪದವಿ ಪಡೆದು ಫ್ರೀಲ್ಯಾನ್ಸರ್ ಆಗಿ ಕಾಯಕ ಮುಂದುವರಿಸಿದರು.

ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿದ್ದ ಕಾಲದಲ್ಲಿ  ಸಹೋದರ ಆರ್.ಕೆ. ನಾರಾಯಣ್ ಅವರು ಕತೆಗಳಿಗೆ ಕ್ಯಾರಿಕೇಚರ್ ರಚಿಸಿದರು. 'ಸ್ವಾತಂತ್ರ' ಮೊದಲಾದ ಪ್ರಾದೇಶಿಕ ಪತ್ರಿಕೆಗಳಲ್ಲಿ ಕಾರ್ಟೂನ್ ರಚಿಸಿದ ಇವರು, ಡಾ. ಎಂ. ಶಿವರಾಂ ಅವರ ಹಾಸ್ಯ ಮಾಸಪತ್ರಿಕೆ 'ಕೊರವಂಜಿ'ಯಲ್ಲಿ ಕಾರ್ಟೂನ್ ರಚಿಸಲು ತೊಡಗಿದಾಗ ಜನಪ್ರಿಯತೆಯೂ ದಕ್ಕಿತು.


ಮೈಸೂರಿನಿಂದ ಕೆಲಸ ಅರಸುತ್ತಾ ಮುಂಬೈಗೆ ಬಂದಿಳಿದ ಲಕ್ಷ್ಮಣ್ 'ದ ಫ್ರೀ ಪ್ರೆಸ್ ಜರ್ನಲ್'ನಲ್ಲಿ ಪೊಲಿಟಿಕಲ್ ಕಾರ್ಟೂನಿಸ್ಟ್ ಆಗಿ ಮೊದಲ ಬಾರಿಗೆ ಪೂರ್ಣಾವಧಿಯ ಕೆಲಸ ಗಿಟ್ಟಿಸಿಕೊಂಡರು. ಆವಾಗ ಬಾಳ್ ಠಾಕ್ರೆ ಲಕ್ಷ್ಮಣ್ ಅವರ ಸಹೋದ್ಯೋಗಿಯಾಗಿದ್ದರು. ನಂತರ ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಸೇರಿದ ಲಕ್ಷ್ಮಣ್ ಅಲ್ಲೊಂದು ಹೊಸ ಅಲೆ ಎಬ್ಬಿಸಿ ಶ್ರೀಸಾಮಾನ್ಯನ ಜಗತ್ತನ್ನೇ ನಿರ್ಮಿಸಿಕೊಂಡರು.

ಸಹೋದರ ಆರ್.ಕೆ ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕಥೆಯನ್ನು ಧಾರಾವಾಹಿ ಮಾಡುವಾಗಲೂ ಲಕ್ಷ್ಮಣ್ ಅವರು ರೇಖಾಚಿತ್ರಗಳನ್ನು ಅದರಲ್ಲಿ ಬಳಸಿಕೊಳ್ಳಲಾಗಿತ್ತು. ಚಿತ್ರಗಳ ಹೊರತಾಗಿ ಕಿರುಕತೆ, ಪ್ರಬಂಧ, ಪ್ರವಾಸ ಕಥನ, ಎರಡು ಕಾದಂಬರಿ ಸೇರಿದಂತೆ 'ದ ಟನಲ್ ಆಫ್ ಟೈಮ್' ಆತ್ಮಕತೆಯನ್ನೂ ರಚಿಸಿರುವ ಆರ್.ಕೆ ಅವರಿಗೆ 1984ರಲ್ಲಿ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2005ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೆ ಪಾತ್ರರಾದ ಆರ್.ಕೆ ಅವರ ಕಂಚಿನ ಪ್ರತಿಮೆಯೊಂದನ್ನು ಪುಣೆಯಲ್ಲಿ ಸ್ಥಾಪಿಸಿದ್ದು, ಇದು ಲಕ್ಷ್ಮಣ್ ಅವರಿಗೆ ಸಂದ ಬಹುದೊಡ್ಡ ಗೌರವ.

ಕಾಮನ್ ಮ್ಯಾನ್ ಒಬ್ಬನನ್ನು ಮುಖಪುಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಆರ್.ಕೆ. ಲಕ್ಷ್ಮಣ್ ಅವರದ್ದು. ವ್ಯಂಗ್ಯ ಚಿತ್ರಗಳ ಮೂಲಕ ಜನರಲ್ಲಿ ಮಂದಹಾಸ ಮೂಡಿಸಿದ ಕನ್ನಡ ನಾಡಿನ ಹೆಮ್ಮೆಯ ಪುತ್ರ 2015 ಜ. 26 ಗಣರಾಜ್ಯೋತ್ಸವದಂದು ನಮ್ಮನ್ನಗಲಿದ್ದಾರೆ. ಆ 'ಲಕ್ಷ್ಮಣ ರೇಖೆಗಳು' ನೆನಪಿನ ಪುಟ ಸೇರಿಕೊಂಡಿದೆ.

-ರಶ್ಮಿ


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT