ಬೆಂಗಳೂರು: ಭಾರತದಲ್ಲಿ ಮದುವೆ ಮಾಡಿಕೊಂಡ ನವ ಜೋಡಿಗಳು ಮಲೇಷ್ಯಾಗೆ ಹನಿಮೂನ್‍ಗೆ ತೆರಳುವ ಕಾಲವಿತ್ತು, ಈಗ ಮದುವೆಯೇ ಮಲೇಷ್ಯಾದಲ್ಲಿ ನಡೆಯುತ್ತದೆ ಎಂದರೆ ನಂಬುತ್ತೀರಾ? ನಿಜ. ಇಂತಹದ್ದೊಂದು ಅಚ್ಚರಿಯ ಟ್ರೆಂಡ್ ಸೃಷ್ಟಿಯಾಗುತ್ತಿದೆ.
ಭಾರತದ ಶ್ರೀಮಂತ ಕುಟುಂಬಗಳ ಮದುವೆಗಳು ಮಲೇಷ್ಯಾದಲ್ಲಿ ನಡೆಯಲಾರಂಭವಾಗಿವೆ. ಇದನ್ನು ಮಲೇಷ್ಯಾದ ಪ್ರವಾಸೋದ್ಯಮ ಇಲಾಖೆಯೇ ಖಚಿತಪಡಿಸಿದೆ. 'ಭಾರತ ಮೂಲದ ಮದುವೆಗಳು ಮಲೇಷ್ಯಾದಲ್ಲಿ ನಡೆಯುವ ಸಂಪ್ರದಾಯ ಇದೀಗ ಆರಂಭವಾಗಿದೆ. ಮಲೇಷ್ಯಾದಲ್ಲಿರುವ ರೆಸಾರ್ಟ್‍ಗಳು ಮದುವೆಯನ್ನು ನಡೆಸಿಕೊಡುತ್ತಿವೆ. ಇದೊಂದು ಉದ್ಯಮವಾಗಿ ಬೆಳೆಯು ತ್ತಿದೆ. ಮದುವೆಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆ, ತಯಾರಿ ಒಂದು ಪ್ಯಾಕೇಜ್ ಮಾದರಿಯಲ್ಲಿ ರೂಪುಗೊಂಡಿರುತ್ತದೆ. ಇದೊಂದು ದೊಡ್ಡ ಇವೆಂಟ್ ಆಗುತ್ತಿದೆ' ಎಂದು ಮಲೇಷ್ಯಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಅಜೀಜುದ್ದೀನ್ ನೂರುದ್ದೀನ್ ತಿಳಿಸುತ್ತಾರೆ.
ಒಂದು ವಾರದ ಕಾರ್ಯಕ್ರಮದಂತೆ ನಡೆಯುವ ಈ ಮದುವೆ ಸಮಾರಂಭಕ್ಕೆ ವಧು-ವರನ ಕುಟುಂಬದವರು, ಸಂಬಂಧಿಗಳು, ಸ್ನೇಹಿತರು ಬರುತ್ತಾರೆ, ಸಂಭ್ರಮಿಸುತ್ತಾರೆ. ಮಲೇಷ್ಯಾದಲ್ಲಿ ಮದುವೆ ಎಂದರೇ ಒಂದು ಸಂಭ್ರಮ. ಜೊತೆಗೆ ನಮ್ಮಲ್ಲಿನ ವ್ಯವಸ್ಥೆಗಳು, ಅವರ ಸಂಭ್ರಮವನ್ನು ಹೆಚ್ಚು ಮಾಡುತ್ತದೆ. ಪ್ರವಾಸಿ ಸ್ಥಳಗಳಿಗೂ ಭೇಟಿ ಕೊಡುವುದರಿಂದ ಪ್ರವಾಸೋದ್ಯಮಕ್ಕೂ ಅನು ಕೂಲವಾಗುತ್ತಿದೆ ಎಂದು ಮಲೇಷ್ಯಾ ಪ್ರವಾ ಸೋದ್ಯಮ ಅಧಿಕಾರಿಗಳು ವಿವರಿಸಿದರು. ಭಾರತದಲ್ಲಿ ಮದುವೆ ಸಮಾರಂಭ ಹೇಗೆ ನಡೆಯುತ್ತದೋ ಅದೇ ರೀತಿ ಯಾವುದೇ ಕೊರತೆ ಬೀಳದಂತೆ ವ್ಯವಸ್ಥೆ ಮಾಡಿರುತ್ತಾರೆ. ಅಗತ್ಯವಿದ್ದರೆ ಸಂಗೀತ ನೃತ್ಯ ವಾದ್ಯ ಕಲಾವಿದರನ್ನೂ ಸಹ ಭಾರತದಿಂದ ಕರೆಸಿಕೊಂಡಿರುತ್ತಾರೆ.
ಇದು ಮಲೇಷ್ಯಾ ಪ್ರವಾಸೋದ್ಯಮಕ್ಕೂ ಅನುಕೂಲ ಮತ್ತು ಮದುವೆ ಸಮಾರಂಭ ನಡೆಸುವವರಿಗೂ ಹೊಸದೊಂದು ಸಡಗರ ನೀಡುತ್ತದೆ ಎಂದು ತಿಳಿಸಿದರು. ಇದೀಗ ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸುವ ದೃಷ್ಟಿಯಿಂದ 2015ರ ಇಡೀ ವರ್ಷವನ್ನು ಒಂದು ಉತ್ಸವವಾಗಿ ಆಚರಿಸಲಾಗುತ್ತಿದೆ. ದೀಪಾವಳಿ, ಕ್ರಿಸಮಸ್ ಸೇರಿದಂತೆ ಬೇರೆ ಬೇರೆ ಧಾರ್ಮಿಕ ಹಬ್ಬಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವರ್ಷದಲ್ಲಿ ಸರಿಸುಮಾರು 50ಕ್ಕೂ ಹೆಚ್ಚು ಮೆಗಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇತರೆ ದೇಶಗಳ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ವಿಶೇಷ ಪ್ಯಾಕೇಜ್‍ಗಳನ್ನು ಪ್ರಕಟಿಸಲಾಗಿದೆ ಎಂದು ನೂರುದ್ದೀನ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics