ಅನ್ನಾ ಮತ್ತು ಲೂಸಿ ಡೆಸಿಂಕ್ 
ವಿಶೇಷ

ಒಬ್ಬ ಬಾಯ್ ಫ್ರೆಂಡ್ ನಿಂದ ಒಟ್ಟಿಗೇ ತಾಯಿಯಾಗಲು ಬಯಸಿದ ಅವಳಿ ಸಹೋದರಿಯರು

ಅವಳಿ-ಜವಳಿಗಳು ಒಂದೇ ರೀತಿಯ ಉಡುಪು ಧರಿಸುವುದು, ಅವರ ಅಭಿರುಚಿ ಆಸಕ್ತಿಗಳು ಒಂದೇ ರೀತಿ ಇರುವುದನ್ನು ನೋಡಿದ್ದೇವೆ. ಆದರೆ ಆಸ್ಟ್ರೇಲಿಯಾದ ಈ ಇಬ್ಬರು ಅವಳಿ ಸಹೋದರಿಯರಾದ...

ಅವಳಿ-ಜವಳಿಗಳು ಒಂದೇ ರೀತಿಯ ಉಡುಪು ಧರಿಸುವುದು, ಅವರ ಅಭಿರುಚಿ ಆಸಕ್ತಿಗಳು ಒಂದೇ ರೀತಿ ಇರುವುದನ್ನು ನೋಡಿದ್ದೇವೆ. ಆದರೆ ಆಸ್ಟ್ರೇಲಿಯಾದ ಈ ಇಬ್ಬರು ಅವಳಿ ಸಹೋದರಿಯರಾದ ಅನ್ನಾ ಮತ್ತು ಲೂಸಿ ಡೆಸಿಂಕ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಅವರು ಓಡಾಡಲು ಬಳಸುವ ಕಾರು ಒಂದೇ, ಮಾಡುವ ಉದ್ಯೋಗ ಒಂದೇ,, ಮಲಗುವ ಬೆಡ್, ಹಾಕಿಕೊಳ್ಳುವ ಬಟ್ಟೆ ಒಂದೇ ರೀತಿಯದ್ದು. ಅಷ್ಟು ಮಾತ್ರವಾಗಿದ್ದರೆ ಏನೋ ಅವಳಿ ಜವಳಿಗಳಲ್ಲವೇ ಅನ್ನಬಹುದಿತ್ತು. ವಿಶೇಷ ಏನಪ್ಪಾ ಅಂದರೆ ಅವರ ಬಾಯ್ ಫ್ರೆಂಡ್ ಕೂಡ ಒಬ್ಬನೇ ಅಂತೆ. ಇದೀಗ ಅವರು ಒಟ್ಟಿಗೆ ಗರ್ಭಧರಿಸುವ ಆಶಾವಾದದಲ್ಲಿದ್ದಾರೆ.

ಈ ಅವಳಿ ಸಹೋದರಿಯರು ಇತ್ತೀಚೆಗೆ ಆಸ್ಟ್ರೇಲಿಯಾದ ಟಿವಿ ಶೋ ಇನ್ಸೈಟ್ ಎಸ್ ಬಿಸಿ ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.ಅದರಲ್ಲಿ ಅವರಿಬ್ಬರೂ ಹುಟ್ಟಿನಿಂದ ಇದುವರೆಗೆ ಎಲ್ಲಾ ಕೆಲಸಗಳನ್ನು, ತಿನ್ನುವ ಆಹಾರ, ದೇಹದ ತೂಕ ಒಟ್ಟಿಗೆ ಇಳಿಸಿಕೊಳ್ಳುವುದು ಹೀಗೆ ಎಲ್ಲವನ್ನೂ ಒಂದೇ ರೀತಿ ಮಾಡುವುದಾಗಿ ಹೇಳಿಕೊಂಡಿದ್ದರು. ತಮ್ಮ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.

ಆದರೆ ಇನ್ನೊಂದು ವಿಷಯವಂತೂ ಕೇಳಿದರೆ ನಿಮಗೆ ಚಕಿತವಾಗಬಹುದು, ಅದೆಂದರೆ ಮುಂಚೆ ಅವರಿಗೆ ಬೇರೆ ಬೇರೆ ಬಾಯ್ ಫ್ರೆಂಡ್ಸ್ ಇದ್ದರಂತೆ. ಆದರೆ ಅದು ಸರಿ ಹೋಗಲಿಲ್ಲವಂತೆ. ಆದರೆ ಈಗ ಅವರಿಗೆ ಸಿಕ್ಕಿರುವ ಬಾಯ್ ಫ್ರೆಂಡ್ ಕೂಡ ಅವಳಿ ಜವಳಿಯಾಗಿ ಹುಟ್ಟಿದವನಂತೆ. ಹಾಗಾಗಿ ನಮ್ಮ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ ಎಂದು ಶೋನಲ್ಲಿ ಹೇಳಿಕೊಂಡಿದ್ದಾರೆ ಈ ಅವಳಿ ಸೋದರಿಯರು.
 ಇವರ ಬಾಯ್ ಫ್ರೆಂಡ್ ಹೆಸರು ಬೆನ್ ಬಿರ್ನಿ. ಅವರಿಬ್ಬರಿಗೆ ಏಕಕಾಲಕ್ಕೆ ಅವನ ಮೇಲೆ ಪ್ರೀತಿ ಹುಟ್ಟಿತಂತೆ. ಇವನಲ್ಲಿ ತಮ್ಮ ಭವಿಷ್ಯದ ಕನಸು ಕಾಣುತ್ತಿದ್ದಾರೆ.

ಇದುವರೆಗೆ ಜೀವನದಲ್ಲಿ ಒಟ್ಟಿಗೆ ಎಲ್ಲವನ್ನೂ ಮಾಡಿಕೊಂಡು ಬಂದ ಇವರಿಗೆ ಬಾಯ್ ಫ್ರೆಂಡಿನ ಜೊತೆ ಒಟ್ಟಿಗೆ ಗರ್ಭ ಧರಿಸುವ ಆಸೆ ಇದೆ. ''ಆಕೆ ಗರ್ಭವತಿಯಾದರೆ, ನಾನು ಕೂಡ ಗರ್ಭ ಧರಿಸುತ್ತೇನೆ ಎಂಬ ನಂಬಿಕೆ ನಮಗಿದೆ'' ಎಂದು ಒಬ್ಬಾರೆ ಶೋನ ಎರಡನೇ ಭಾಗದಲ್ಲಿ ಹೇಳಿಕೊಂಡಿದ್ದಾಳೆ. ಈ ಶೋ ಮುಂದಿನ ವಾರ ಪ್ರಸಾರವಾಗಲಿದೆ. ಏಕಕಾಲಕ್ಕೆ ಗರ್ಭ ಧರಿಸಲು ಪ್ರಣಾಳ ಶಿಶು ಚಿಕಿತ್ಸೆ ಅಗತ್ಯವೆನಿಸಿದರೆ ಅದನ್ನು ಕೂಡ ಮಾಡಿಸಲು ಸಿದ್ಧರಂತೆ.

ಓಹ್! ಈ ಅವಳಿಗಳ ಜೀವನದ ಕಥೆ ಕೇಳಲು ನಿಜಕ್ಕೂ ಆಸಕ್ತಿಕರವಾಗಿದೆಯಲ್ಲವೇ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT