ರಾಮನುಜಾಚಾರ್ಯರು 
ವಿಶೇಷ

ರಾಮನುಜಾಚಾರ್ಯರ ಜಯಂತಿಯ ಸಹಸ್ರಮಾನೋತ್ಸವ ಆಚರಣೆ

ಸಾಮಾಜಿಕ ಬದಲವಣೆಗಾಗಿ ಜಾತಿಯ ಅಸ್ಪೃಷ್ಯತೆಯನ್ನು ತೊಡಗಿಸುವಲ್ಲಿ ಶ್ರೀ ರಾಮನುಜಾಚಾರ್ಯರ ಪಾತ್ರ ಮಹತ್ವವಾದದ್ದು.

ಇತಿಹಾಸದಲ್ಲಿ ಕೆಲವು ಮಹಾನ್ ಪುರುಷರ ಹೋರಾಟದಿಂದ‌ ಸಾಮಾಜಿಕ ಬದಲಾವಣೆಯತ್ತ ಪಯಣಿಸುತ್ತಿದೆ ನಮ್ಮ ಭಾರತ. ಇಂತಹ ಸಾಮಾಜಿಕ ಬದಲವಣೆಗಾಗಿ ಜಾತಿಯ ಅಸ್ಪೃಷ್ಯತೆಯನ್ನು ತೊಡಗಿಸುವಲ್ಲಿ ಶ್ರೀ ರಾಮನುಜಾಚಾರ್ಯರ ಪಾತ್ರ ಮಹತ್ವವಾದದ್ದು.
ಅದು ಹನ್ನೊಂದನೆಯ ಶತಮಾನ. ಭಾರತದಲ್ಲಿ ಅನ್ಯಧರ್ಮಿಯರ ಆಕ್ರಮಣವಾಗುತಿತ್ತು. ಮತ, ಧರ್ಮ, ಪಂಥಗಳ ನಡುವೆ ತಾವೇ ದೊಡ್ಡವರೆಂಬ ವೈಷಮ್ಯವಿತ್ತು. ಶೈವ ಮತ್ತು ವೈಷ್ಣವರ ಸಂಘರ್ಷಗಳು‌ ದೊಡ್ಡ ಮಟ್ಟದಲ್ಲಿತ್ತು. ಹಿಂದುಳಿದ ವರ್ಗಗಳಿಗೆ ದೇವಸ್ಥಾನದ ಪ್ರವೇಶ ನಿಷೇಧವಿತ್ತು‌. ಶ್ರೀ ರಾಮನುಜಾಚಾರ್ಯರು ಕ್ರಿ.ಶ. 1017ರಲ್ಲಿ ಶ್ರೀ ಪೆರಂಬೂದೂರಿನಲ್ಲಿ ಜನಿಸಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಶ್ರೀ ರಾಮಾನುಜರು ಕಾಂಚಿಪುರಕ್ಕೆ ತೆರಳಿ ವರದರಾಜ ಸ್ವಾಮಿ ದೇವಾಲಯದಲ್ಲಿ ಯಾದವಪ್ರಕಾಶರ ಶಿಷ್ಯರಾಗಿ ವೇದಾಧ್ಯನ ಮಾಡುವತ್ತ ಸಾಗಿದರು. ಯಾದವಪ್ರಕಾಶರು ವೇದಗಳಿಗೆ ಹೇಳುವ ಅರ್ಥಗಳು ಅವರಿಗೆ ಸರಿಕಾಣದೆ ಅಲ್ಲಿಂದ ನಿರ್ಗಮಿಸಿ ಸಾಮಾಜಿಕ ಸಮಾನತೆಯ ಕೆಲಸದೆಡೆ ಸಾಗಿದರು.
ಶ್ರೀ ರಾಮನುಜಚಾರ್ಯರಿಗೆ ಗೋಷ್ಠಿ ಪೂರ್ಣರು ಮಂತ್ರಾರ್ಥಗಳನ್ನು ಉಪದೇಶಿಸಿ, "ಯಾರಿಗೂ ಹೇಳಬೇಡ. ಹೇಳಿದರೆ ಪಾಪದಿಂದ‌ ನರಕಕ್ಕೆ ಹೋಗುತ್ತೀಯ" ಎಂದು ಎಚ್ಚರಿಸಿದರು. ಶ್ರೀ ರಾಮನುಜಾಚಾರ್ಯರು ಗೋಷ್ಠಿಪೂರ್ಣರು ಇದ್ದ ದೇವಾಲಯದ ಗೋಪುರವನ್ನು ಹತ್ತಿ ಜಾತಿ, ಮತ, ಪಂಥ ಎಂಬ ಭೇದವಿಲ್ಲದೆ ಸಾರ್ವಜನಿಕರನ್ನು ಕರೆದು ಮಂತ್ರೋಪದೇಶ ಮಾಡಿದರು. ಗೋಷ್ಠಿಪೂರ್ಣರು ಆಕ್ಷೇಪಿಸಿದಾಗ ಶ್ರೀ ರಾಮನುಜರು, "ನಾನೊಬ್ಬನೇ ನರಕಕ್ಕೆ ಹೋದರು ಪರವಾಗಿಲ್ಲ, ನಮ್ಮ ಮನುಕುಲ ಸ್ವರ್ಗಕ್ಕೆ ಹೋದರೆ ಸಾಕು" ಎಂದು ಉತ್ತರಿಸಿದರು. ಹಾಗೆಯೇ ಹೊಯ್ಸಳರ ಜೊತೆ ನಿಕಟ ಸಂಪರ್ಕ ಹೊಂದಿದ ಶ್ರೀ ರಾಮಾನುಜಾಚಾರ್ಯರು ಹೊಯ್ಸಳರ ಕಾಲದಲ್ಲಿ ತಲಕಾಡು, ತೊಂಡನೂರು, ಬೇಲೂರು, ಗದಗ ಮತ್ತು ಮೇಲುಕೋಟೆಯಲ್ಲಿ ದೇವಸ್ಥಾನವನ್ನು ಕಟ್ಟಿ ಸದ್ಭಾವನೆಯನ್ನು ಮೂಡಿಸುವಲ್ಲಿ ಪ್ರೇರಿತರಾದರು.
ಮೇಲುಕೋಟೆಯನ್ನು ವಿಶಿಷ್ಟಾದ್ವೈತ ಸಿದ್ದಾಂತದ ಕೇಂದ್ರವನ್ನಾಗಿ ಶ್ರೀ ಚೆಲುವನಾರಾಯಣ ದೇವಸ್ಥಾನಕ್ಕೆ ದಲತರಿಗೆ ಪ್ರವೇಶವನ್ನು ನೀಡಿ, ಎಲ್ಲಾ ವರ್ಗದ ಜನರಿಗೂ ಅರ್ಚಕರಾಗಲು ಅವಕಾಶ ಮಾಡಿಕೊಟ್ಟರು. ಭಾರತದಾದ್ಯಂತ ಪ್ರಯಾಣ ಮಾಡಿ ಭಕ್ತಿ ಸಿದ್ದಾಂತ ಮತ್ತು ಸಮಾನತೆಯನ್ನು ಪ್ರಚಾರ ಮಾಡುತ್ತ ಕ್ರಿ.ಶ 1117ರಲ್ಲಿ ದೈವಾದೀನರಾದರು.
ಜಾತಿಯ ಸಂಕೋಲೆಯನ್ನು ಕಳಚುವುದಕ್ಕೆ ಶ್ರೀ ರಾಮಾನುಜಾಚಾರ್ಯರು ಹನ್ನೊಂದನೆಯ ಶತಮಾನದಲ್ಲೇ ಪ್ರಯತ್ನಿಸಿದ್ದರು, ಬಹುಶಃ ಇದೇ 870 ವರ್ಷದ ನಂತರ ಇನ್ನೊಬ್ಬ ಯುಗಪುರುಷರು ಸಾಮಾಜಿಕ ಸಮಾನತೆಯನ್ನು ಎತ್ತಿ‌ಹಿಡಿದು ಜಾತಿ ಪದ್ದತಿಯ ಪಿಡುಗಿನ ವಿರುದ್ಧ ಧ್ವನಿ ಎತ್ತಿ ನಿಲ್ಲುವವರ ಜನನವಾಯಿತು. ಅವರೆ ಡಾ|| ಬಿ.ಆರ್ ಅಂಬೇಡ್ಕರ್. 
ಅಂದು ರಾಮಾನುಜಾಚಾರ್ಯರು ಅಸ್ಪ್ರಶ್ಯತೆ, ಜಾತಿಯತೆ ಎಂಬ ರೋಗಗಳನ್ನು ಕಳಚುವುದಕ್ಕೆ ಮುಂದಡಿ ಇಟ್ಟಿದ್ದರೆ, ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಹರಿ ಜನರ ಪ್ರವೇಶ ಕಲ್ಪಿಸುವಲ್ಲಿ ಮತ್ತು ಮಹಾಡದ ಚೌಡರ್ ಕೆರೆ ನೀರನ್ನು ಉಪಯೋಗಿಸುವುದರಲ್ಲಿ  ಅಸ್ಪ್ರಶ್ಯರನ್ನು ಹೊರಗಟ್ಟಿರುವವರ ವಿರುದ್ಧ ಅಸ್ಪ್ರಶ್ಯರಿಗೆ ದೇವಾಲಯದ ಪ್ರವೇಶ ಹಕ್ಕು ಎಲ್ಲಾ ವರ್ಗಗಳಿಗೂ ಸಾರ್ವಜನಿಕ ಕೆರೆ, ಬಾವಿಗಳಿಂದ‌ ನೀರು ಸೇದುವ ಹಕ್ಕಿದೆ ಎಂದು ಅಂಬೇಡ್ಕರ್ ಅಂತಹ ಮಹಾಪುರುಷರು ಹೋರಾಡಿ ಪಡೆದ ಪ್ರತಿಫಲ ಗಮನೀಯ.
ಭವ್ಯ ಭಾರತದ ಪರಂಪರೆಯಲ್ಲಿ ವಿಶಿಷ್ಟ ಕ್ರಾಂತಿಯಾಗಿ ಅಂದು ಶ್ರೀ ರಾಮಾನುಜಾಚಾರ್ಯರು ಬದಲಾವಣೆಯ ಪರ್ವವನ್ನು ಮೂಡಿಸಿದರು. ಇಂದು ಡಾ|| ಅಂಬೇಡ್ಕರರ ಚಿಂತನೆಯನ್ನು ಕೂಡ ಜಾತಿಯ ಸಂಕೋಲೆಯನ್ನು ಕಳಚುತ್ತಿದೆ. ಅಂದ ಹಾಗೆ, 2017 ರ ಈ ವರ್ಷ ರಾಮನುಜಾಚಾರ್ಯರ ಜಯಂತಿಯ ಸಹಸ್ರಮಾನೋತ್ಸವವನ್ನು ಆಚರಿಸುತ್ತಿದ್ದರೆ, ಡಾ|| ಅಂಬೇಡ್ಕರರ ಜಯಂತಿ ಸಾವೇ ಇರದ(ಸಾವಿರದ)ಜಯಂತಿಯಾಗಿ ಮಾರ್ಪಟ್ಟಿದೆ.
ಯುವಾ ಬ್ರಿಗೇಡ್ ಮಹಾಪುರುಷರಾದ ರಾಮಾನುಜಾಚಾರ್ಯರು ಮತ್ತು ಡಾ|| ಅಂಬೇಡ್ಕರರ ಜಯಂತಿಯನ್ನು ಮೇ 1 ರಂದು ಕೋಟೆ ಶಿವಮೊಗ್ಗದ ಸೀತಾರಮಂಜನೆಯ ದೇವಸ್ಥಾನದಲ್ಲಿ ಸಂಜೆ 4 ಗಂಟೆಯಿಂದ ಆಚರಿಸುತ್ತಿದೆ. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ಉಪಸ್ಥಿತಿವಿರುತ್ತದೆ. ಜಾತಿಯ ಸಂಕೋಲೆಯನ್ನು ಕಳಚೋಣ ಬನ್ನಿ....
- ರಾಜೇಶ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT