ಬರ್ತ್ ಡೇ ಸ್ಪೆಷಲ್: 56 ಕ್ಯಾಂಡಲ್ ಗಳನ್ನು ಊದಿ ಜನ್ಮದಿನ ಆಚರಿಸಿಕೊಂಡ ಆನೆ! 
ವಿಶೇಷ

ಬರ್ತ್ ಡೇ ಸ್ಪೆಷಲ್: 56 ಕ್ಯಾಂಡಲ್ ಗಳನ್ನು ಊದಿ ಜನ್ಮದಿನ ಆಚರಿಸಿಕೊಂಡ ಆನೆ!

ಅಮೆರಿಕಾದ ಬಳಿ ಇರುವ ಗ್ವಾಟೆಮಾಲ ಸಿಟಿಯಲ್ಲಿ ಆನೆಯೊಂದರ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಗ್ವಾಟೆಮಾಲಾ ಸಿಟಿ: ಅಮೆರಿಕಾದ ಬಳಿ ಇರುವ ಗ್ವಾಟೆಮಾಲ ಸಿಟಿಯಲ್ಲಿ ಆನೆಯೊಂದರ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಹೇಗೆ ಅಂತೀರಾ? ಕಲ್ಲಂಗಡಿ, ಪಪ್ಪಾಯ, ಬಾಳೆಹಣ್ಣು, ಕ್ಯಾರೆಟ್ ನಿಂದ ತಯಾರಿಸಲಾದ ಕೇಕ್ ಮೇಲಿದ್ದ 56 ಕ್ಯಾಂಡಲ್ ಗಳನ್ನು ಊದಿ ಆನೆ ಜನ್ಮದಿನವನ್ನು ಆಚರಿಸಿಕೊಂಡಿದೆ. 
ಬೊಂಬಿ ಎಂಬ 56 ವರ್ಷದ ಆನೆಯನ್ನು 2008 ರಲ್ಲಿ ಸರ್ಕಸ್ ನಿಂದ ಬಿಡುಗಡೆಗೊಳಿಸಿ ಅರೋರಾ ಮೃಗಾಲಯಕ್ಕೆ ಕರೆ ತರಲಾಗಿತ್ತು. ಟ್ರೋಮ್ಟಿಯಾ ಎಂದು ಪುನಃ ನಾಮಕರಣಗೊಂಡ ಆನೆ ಅಂದಿನಿಂದ ಮೃಗಾಲಯದ ಕುಟುಂಬದ ಸದಸ್ಯೆಯಾಗಿದೆ. ಇನ್ನು ಟ್ರೊಮ್ಟಿಯಾ ಹಾಗೂ ಆಕೆಯ ಮಾವುತ ರೋಮಿಯೋ ಲೋಪೆಜ್ ಇಬ್ಬರು 7 ವರ್ಷಗಳವರಾಗಿದ್ದಾಗಿನಿಂದಲೂ ಬೆಸ್ಟ್ ಫ್ರೆಂಡ್ಸ್. 
ಬಾಲ್ಯದಿಂದ ಇಬ್ಬರೂ ಒಟ್ಟಿಗೆ ಬೆಳೆದು, ಸಂತಸ, ದುಃಖದ ಕ್ಷಣಗಳನ್ನು ಕಂಡಿದ್ದಾರೆ. ಆದ್ದರಿಂದಲೇ ಅವರಿಬ್ಬರಿಗೂ ಅತ್ಯುತ್ತಮ ಸ್ನೇಹ ಬಂಧವಿದೆ. ಬೊಂಬಿಯನ್ನು 2008 ರಲ್ಲಿ ಸರ್ಕಸ್ ನಿಂದ ಬಿಡುಗಡೆಗೊಳಿಸಿದಾಗ ಆನೆಯನ್ನು ಮಾರಾಟ ಮಾಡಲು ಅದರ ಮಾವುತ ರೋಮಿಯೋ ಲೋಪೆಜ್ ಗೆ 300,000 ಡಾಲರ್ ಗಳ ಆಮಿಷವೊಡ್ಡಲಾಗಿತ್ತು. ಆದರೆ ಬಾಲ್ಯದ ಬೆಸ್ಟ್ ಫ್ರೆಂಡ್ ನ್ನು ಕಳೆದುಕೊಳ್ಳಲು ನಾನು ಸಿದ್ಧವಿರಲಿಲ್ಲ ಎನ್ನುತ್ತಾರೆ ರೋಮಿಯೋ ಲೋಪೆಜ್. 
ಅತ್ಯಂತ ಶಾಂತ ಸ್ವಭಾವದ ಆನೆಯಾಗಿರುವ ಟ್ರೋಮ್ಟಿಯಾ ಫುಟ್ಬಾಲ್ ನ್ನು ಅದ್ಭುತವಾಗಿ ಆಡುವ ಕಲೆ ಹೊಂದಿದೆಯಂತೆ. ಆಕೆಯ ಮಾವುತನ ಪ್ರಕಾರ ಫುಟ್ಬಾಲ್ ಪಂದ್ಯದಲ್ಲಿ ಟ್ರೋಮ್ಟಿಯಾನ್ನು ಮೀರಿಸುವವರು ವಿಶ್ವದಲ್ಲೇ ಯಾರೂ ಇಲ್ಲವಂತೆ. ಇಂತಹ ಒಂದು ಸುಂದರ ಸ್ನೇಹ ಬಾಂಧವ್ಯ ಹೊಂದಿರುವ ಆನೆಯ ಜನ್ಮದಿನವನ್ನು ಅರೋರಾ ಮೃಗಾಲಯದಲ್ಲಿ ಕ್ಯಾಂಡಲ್ ಗಳನ್ನು ಊದಿ, ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಗಿದೆ. ಅಂದಹಾಗೆ ಟ್ರೋಮ್ಟಿಯಾ ಪ್ರತಿ ದಿನ 400 ಪೌಂಡ್ ಗಳಷ್ಟು ತರಕಾರಿ, ಹಣ್ಣುಗಳ ಆಹಾರ ಸೇವಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel