ವಿಶೇಷ

2017 ರಲ್ಲಿ ಆಕ್ಸ್ಫರ್ಡ್ ನಿಘಂಟು ಸೇರಿದ ಮೊದಲ ಹಿಂದಿ ಪದ ಆಧಾರ್!

Srinivas Rao BV
ನವದೆಹಲಿ: ಅತಿ ಹೆಚ್ಚು ಬಳಕೆಯಲ್ಲಿರುವ ಪದಗಳನ್ನು ಆಕ್ಸ್ಫರ್ಡ್ ತನ್ನ ನಿಘಂಟಿಗೆ ಸೇರ್ಪಡೆಗೊಳಿಸುವ ಪದ್ಧತಿ ಹೊಂದಿದ್ದು, 2017 ರಲ್ಲಿ ಸೇರ್ಪಡೆಯಾದ ಹಿಂದಿ ಪದ ಆಧಾರ್ ಆಗಿದೆ. 
ಜೈಪುರ ಸಾಹಿತ್ಯ ಹಬ್ಬದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, ಹಿಂದಿ ಪದ ಆಧಾರ್ ನ್ನು ವರ್ಷದ ಪದವನ್ನಾಗಿ ಆಕ್ಸ್ಫರ್ಡ್ ನಿಘಂಟು ಆಯ್ಕೆ ಮಾಡಿದೆ. ವರ್ಷದಲ್ಲಿ ಅತಿ ಹೆಚ್ಚು ಬಳಕೆ ಅಥವಾ ಚರ್ಚೆಗೊಳಗಾದ ಪದವನ್ನು ಆಯ್ಕೆ ಮಾಡುವುದಕ್ಕೆ ಆಕ್ಸ್ಫರ್ಡ್ ನಿಘಂಟು ತಂಡದವರು ಹಿಂದಿ ಮಾತನಾಡುವ ಜನರ ಸಹಕಾರ ಕೋರಿದ್ದರು. 
ಕೇಂದ್ರ ಸರ್ಕಾರ ಪ್ರತಿಯೊಬ್ಬರ ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ಗಳಿಗೆ ಆಧಾರ್ ನ್ನು ಲಿಂಕ್ ಮಾಡಿಸುವುದನ್ನು ಕಡ್ಡಾಯಗೊಳಿಸಿದ್ದ ಹಿನ್ನೆಲೆಯಲ್ಲಿ ಆಧಾರ್ ಬಗ್ಗೆ ಹೆಚ್ಚು ಚರ್ಚೆ ನಡೆದಿತ್ತು. ಆಧಾರ್ ನ್ನು ವರ್ಷದ ಹಿಂದಿ ಪದವನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಆಕ್ಸ್ಫರ್ಡ್ ಟ್ವಿಟರ್ ನಲ್ಲಿಯೂ ಘೋಷಣೆ ಮಾಡಿದೆ. 
SCROLL FOR NEXT