ವಿಶೇಷ

ಶವಪೆಟ್ಟಿಗೆ ಬದಲು ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ತಂದೆಯನ್ನು ಸಮಾಧಿ ಮಾಡಿದ ಮಗ!

Raghavendra Adiga
ಇಹಿಹಾಲ(ನೈಜೀರಿಯಾ): ಮೃತಪಟ್ಟ ತನ್ನ ತಂದೆಯನ್ನು ಶವಪೆಟ್ಟಿಗೆಗೆ ಬದಲು  ಹೊಚ್ಚ ಹೊಸ ಬಿಎಂಡಬ್ಲ್ಯೂ  ಕಾರಿನಾಲ್ಲಿಟ್ಟು ಸಮಾಧಿ ಮಾಡುವ ಮೂಲಕ ತಂದೆ ಮೇಲಿನ ತನ್ನ ಗೌರವವನ್ನು ಸೂಚಿಸಿದ ಘಟನೆ ನೈಜೀರಿಯಾದಲ್ಲಿ ನಡೆದಿದೆ.
ನೈಜೀರಿಯಾದ  ಅನಂಬ್ರಾ ರಾಜ್ಯದ ಇಹಿಯಾಲಾದಲ್ಲಿ ಅಜುಬುಕ್ ಎನ್ನುವಾತ ಇತ್ತೀಚಿಗೆ ತನ್ನ ತಂದೆಯನ್ನು ಕಳೆದುಕೊಂಡರು. ಬದುಕಿದ್ದಾಗ ಹೊಸ ಬಿಎಂಡಬ್ಲ್ಯೂ  ಕಾರು ಕೊಡಿಸುವುದಾಗಿ ತಂದೆಗೆ ಮಾತು ನೀಡಿದ್ದ ಮಗ ತಂದೆ ಮೃತ್ಯುವಶರಾದರೂ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ತಂದೆ ಸಾವನ್ನಪ್ಪಿದಾಗ ಅವರ ಕಡೆಯಾಸೆ ಎನ್ನುವಂತೆ ಅಂತಿಮ ಯಾತ್ರೆಗೆ ಮುನ್ನ ಸುಮಾರು 60 ಲಕ್ಷ  ರು. ಬೆಲೆ ಬಾಳುವ ಬಿಎಂಡಬ್ಲ್ಯು ಕಾರನ್ನು ಖರೀದಿಸಿದ್ದು ಅದರ ಸಮೇತ ಸಮಾಧಿ ಮಾಡಿದ್ದಾರೆ.
ಇಷ್ಟೇ ಅಲ್ಲದೆ ತಂದೆ ಕಾರಿನಲ್ಲೇ ಸ್ವರ್ಗಕ್ಕೆ ಹೋಗಲಿ ಎಂದು ಕಾರಿಗೆ ಸ್ಯಾಟಲೈಟ್ ನ್ಯಾವಿಗೇಷನ್  ಸಿಸ್ಟಮ್ ಸಹ ಅಳವಡಿಸಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಸುಮಾರು ಆರು ಅಡಿಗಳ ಆಳದ ಕಂದಕ ತೋಡಿ ಅದರಲ್ಲಿ ತಂದೆ ಶವವನ್ನು ಕಾರಿನ ಸಮೇತ ಮಣ್ಣು ಮಾಡಲಾಗಿದೆ.
ಅಜುಬುಕ್ ತನ್ನ ತಂದೆಗೆ ಮಾಡಿದ್ದ ಈ ವಿಶಿಷ್ಟ ಅಂತ್ಯ ಸಂಸ್ಕಾರದ ಕುರಿತಂತೆ ಸಾಮಾಜಿಕ ತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕಾರನ್ನು ಸಮಾಧಿಯಲ್ಲಿಡುವುದರಿಂದ ಏನೂ ಪ್ರಯೋಜನವಾಗದು, ಸಮಾಧಿಯೊಳಗೆ ಕಾರು ಹೆಚ್ಚು ಸಮಯ ಬಾಳುವುದಿಲ್ಲ ಎಂದು ಕೆಲ ಮಂದಿ ಟ್ವೀಟ್ ಮಾಡು ಹೇಳಿಕೊಂಡಿದ್ದಾರೆ.
SCROLL FOR NEXT