ಶೀಲಾ ದೀಕ್ಷಿತ್ 
ವಿಶೇಷ

ಪಾರಂಪರಿಕ ದೆಹಲಿಗೆ ಆಧುನಿಕ ರೂಪ ನೀಡಿದ ಶೀಲಾ ದೀಕ್ಷಿತ್

ರಾಷ್ಟ್ರಮಟ್ಟದ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕಿಯರಲ್ಲಿ ಒಬ್ಬರಾಗಿದ್ದ ಇಂದು (ಶನಿವಾರ) ನಿಧನರಾಗಿದ್ದಾರೆ. ಶೀಲಾ ದಿಕ್ಷಿತ್....

ರಾಷ್ಟ್ರಮಟ್ಟದ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕಿಯರಲ್ಲಿ ಒಬ್ಬರಾಗಿದ್ದ ಇಂದು (ಶನಿವಾರ) ನಿಧನರಾಗಿದ್ದಾರೆ. ಶೀಲಾ ದಿಕ್ಷಿತ್ ಆಧುನಿಕ ದೆಹಲಿಗೆ ಅಡಿಪಾಯ ಹಾಕಿದ್ದ ನಾಯಕಿ. ತಾವು ಮುಖ್ಯಮಂತ್ರಿಗಳಾಗಿದ್ದ ಮೂರು ಅವಧಿಯಲ್ಲಿ ದೆಹಲಿಯ ಮೂಲಸೌಕರ್ಯ ಯೋಜನೆಗಳಿಗೆ ಎಲ್ಲಿಲ್ಲದ ಆದ್ಯತೆ ನೀಡಿದ್ದರು.
1998 ರಿಂದ 2013 ರವರೆಗೆ, ದೆಹಲಿ ಸಿಎಂ ಆಗಿ ದೀಕ್ಷಿತ್ ಆಳ್ವಿಕೆ ನಡೆಸಿದ್ದು ಇದು ದೆಹಲಿ ಇತಿಹಾಸದಲ್ಲೇ ಸುದೀರ್ಘ ಆಡಳಿತ ಎಂದು ದಾಖಲಾಗಿದೆ.ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಮತ್ತು ನಗರದಲ್ಲಿ ವಿದ್ಯುತ್ ಸರಬರಾಜು ಖಾಸಗೀಕರಣ - ಇವು ಶೀಲಾ ಅವರ ಅತಿ ದೊಡ್ಡ ಕೊಡುಗೆಯಾಗಿದ್ದು ನಗರದಲ್ಲಿ ನಿರಂತರ ವಿದ್ಯುತ್ ಸರಬರಾಜಿಗೆ ನಾಂದಿ ಹಾಡಿದೆ.
ದೆಹಲಿ ಜನರ ಸುಧಾರಣೆಗಾಗಿ ಯೋಜನೆ ರೂಪಿಸಲು ತೊಡಗಿದ ಆಕೆ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. "ನಗದ್ರದ ಸಿಗ್ನೇಚರ್ ಸೇತುವೆ ಯೋಜನೆಯು ಅವರ ಮಹತ್ವದ ಯೋಜನೆಯಾಗಿದ್ದು ಜತೆಗೆ ನಗರ ಸಾರಿಗೆಗಾಗಿ ಟ್ರಾಲಿಬಸ್ ಖರೀದಿಸುವಲ್ಲಿ ಆಕೆ ಮುಖ್ಯ ನಿರ್ಧಾರ ತೆಗೆದುಕೊಂಡಿದ್ದರು. ಆಗ ಹಣಕಾಸು ಸಚಿವ ಎ.ಕೆ.ವಾಲಿಯಾ ಈ ಯೋಜನೆಗಳು ಹಣವನ್ನು ವ್ಯರ್ಥ್ವಾಗಿಸಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಶೀಲಾ ದೀಕ್ಷಿತ್ ಮಾತ್ರ ತಮ್ಮ ನಿರ್ಧಾರ ಬಿಟ್ಟುಕೊಡಎ ಜಾರಿಗೊಳಿಸಿ ಅಂತಿಮವಾಗಿ ತಾವೇನೆಂದು ಸಾಬೀತುಪಡಿಸಿದ್ದರು" ದೆಹಲಿಯ ಮಾಜಿ ಮುಖ್ಯ ಕಾರ್ಯದರ್ಶಿ ರಾಕೇಶ್ ಮೆಹ್ತಾ ಹೇಳಿದರು.
ಪ್ರಸ್ತುತ, ದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಆಧಾರಿತ ಬಸ್‌ಗಳಿವೆ ಇದರ ಹೆಗ್ಗಳಿಕೆ ಸಹ ಶೀಲಾ ಅವರಿಗೆ ಸಲ್ಲುತ್ತದೆ. 
ಬರಾಹ್ಪುಲ್ಲಾ ಸೇರಿದಂತೆ ರಸ್ತೆ ಮೂಲಸೌಕರ್ಯ, ಗಾಂಧಿ ನಗರದಿಂದ ನೋಯ್ಡಾ ನಡುವಿನ ಸಿಗ್ನಲ್ ಮುಕ್ತ ಕಾರಿಡಾರ್, ಏಮ್ಸ್ ಫ್ಲೈಓವರ್-ಎಲಿವೇಟೆಡ್ ರೋಡ್ ನೆಟ್ವರ್ಕ್, ಐಟಿಒ ಫ್ಲೈಓವರ್, ರಾಜ್ಘಾಟ್ ರಿಂಗ್ ರೋಡ್ ಮತ್ತು ಟ್ರಾನ್ಸ್ ಯಮುನಾ ಪ್ರದೇಶದ ಎಲ್ಲಾ ಫ್ಲೈಓವರ್, ಮೇಲು ರಸ್ತೆ  ಅಭಿವೃದ್ಧಿ ಶೀಲಾ ಅವರ ಸಾಧನೆಯಾಗಿದೆ. "ಆಗಿನ ರೈಲ್ವೆ ಸಚಿವರು ಮತ್ತು ಸಂಸ್ಕೃತಿ ಸಚಿವರು ಬರಾಪುಲ್ಲಾ ಎಲಿವೇಟೆಡ್ ಕಾರಿಡಾರ್ ಹುಮಾಯೂನ್ ಸಮಾಧಿಯ ಸಮೀಪ ಹಾದುಹೋಗುತ್ತಿದ್ದ ಕಾರಣ ಬಲವಾಗಿ ವಿರೋಧಿಸಿದ್ದರು.ಅದೊಂದು ಸಂರಕ್ಷಿತ ಸ್ಮಾರಕವಾಗಿದೆ ಎಂಬ ಕಾರಣಕ್ಕೆ ಅವರು ಆಕ್ಷೇಪಿಸಿದ್ದರು. ಆದರೆ ಶೀಲಾ ದೀಕ್ಷಿತ್ ತಮ್ಮ ದಾರಿಯಲ್ಲೇ ಸಾಗಿದರು. ಆಕೆ ಎಲ್ಲರ ಮನವೊಲಿಸಿದರು. ಇದು ಜನತೆಗೆ ಅನುಕೂಲ ಕಲ್ಪಿಸುವ ಮಹತ್ವದ ಯೋಜನೆ ಎಂಬುದಾಗಿ ಅವರು ತಿಳಿದಿದ್ದರು. ಅಲ್ಲದೆ ನಗರ ಸಂಚಾರ ದಟ್ಟಣೆಗೆ ಇದು ಪರಿಹಾರವಾಗಲಿದೆ ಎಂದೂ ಅವರು ಗೊತ್ತುಮಾಡಿಕೊಂಡಿದ್ದರು"ಮೆಹ್ತಾ ಹೇಳಿದರು.
ವಿದ್ಯುತ್ ವಿತರಣೆ ಮತ್ತು ಉತ್ಪಾದನಾ ಜಾಲದಲ್ಲಿ ಖಾಸಗಿ ಪಾಲುದಾರರನ್ನು ದೀಕ್ಷಿತ್ ಸರ್ಕಾರ ಸ್ವಾಗತಿಸಿತ್ತು. ಇದರಿಂದಾಗಿ ಇಂದು ದೆಹಲಿ ವಿದ್ಯುತ್ ವಿಚಾರದಲ್ಲಿ ಅನಿಯಮಿತ ವಿದ್ಯುತ್ ಸರಬರಾಜು ಪಡೆಯುವ ದೊಡ್ಡ ನಗರವೆನಿಸಿದೆ.  "ಇಂದು, ನಮಗೆ ವಿದ್ಯುತ್ ಕಡಿತವಿಲ್ಲ. ಇದು ದೀಕ್ಷಿತ್ ಅವರ ಅತಿದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ. ವಿದ್ಯುತ್ ಖರೀದಿಸಲು ನಗರದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೇಕಾದ ಎಲ್ಲವನ್ನೂ ಅವರು ಮಾಡಿದರು. ಮಾಲಿನ್ಯ ಮತ್ತು ಪರಿಸರ  ಕಾಳಜಿ ಅವರ ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವು. ಇದಕ್ಕಾಗಿ ಅವರು ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು. ಪಟಾಕಿ ಮುಕ್ತ ದೀಪಾವಳಿಗಾಗಿ, ಅವರು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದರು.  "ಎಂದು ಮಾಜಿ ಮುಖ್ಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ತ್ರಿಪಾಠಿ ಹೇಳಿದರು.
ದೀಕ್ಷಿತ್ ಮಹಿಳೆಯರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾಗಿ ಯೋಜನೆಗಳನ್ನು ಪ್ರಾರಂಭಿಸಿದರು. 'ಸ್ಟ್ರೀ ಶಕ್ತಿ' (ಪವರ್ ಆಫ್ ವುಮನ್) ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರ ಅಗತ್ಯತೆಗಳನ್ನು ಪೂರೈಸುತ್ತದೆ. ಅಲ್ಲದೆ ಈ ಯೋಜನೆ ಮಹಿಳೆಯರಿಗೆ ಉತ್ತಮ ಆರೋಗ್ಯ, ಪೋಷಣೆ, ಶಿಕ್ಷಣ, ಆದಾಯ ಉತ್ಪಾದನೆ ಮತ್ತು ಕಾನೂನು ರಕ್ಷಣೆ ಒದಗಿಸುತ್ತದೆ.
ದೆಹಲಿಯಲ್ಲಿ ಜನಿಸಿದ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ  ಅವರ ಜನನ ನೋಂದಣಿಯನ್ನು ಉತ್ತೇಜಿಸಲು ಲಾಡ್ಲಿ ಯೋಜನೆ ನೆರವಾಯಿತು. ಭಾಗೀದಾರಿ' ಯೋಜನೆಯ ಮೂಲಕ ನಗರದ ಮೊದಲ ಸಾರ್ವಜನಿಕ ಸಹಭಾಗಿತ್ವ ಆಡಳಿತ ಮಾದರಿಯನ್ನು ಕಲ್ಪಿಸಿ ಅದರ ಜಾರಿಗೊಳಿಸಿದ ಕೀರ್ತಿ ದೀಕ್ಷಿತ್ ಅವರದಾಗಿದೆ ಎಂದು ಶಹಜಹಾನಾಬಾದ್ ಪುನರಾಭಿವೃದ್ಧಿ ನಿಗಮದ (ಎಸ್‌ಆರ್‌ಡಿಸಿ) ಡೆಪ್ಯೂಟಿ ಜನರಲ್ ಮ್ಯಾನೇಜರ್ (ಪ್ರಾಜೆಕ್ಟ್ & ಅಡ್ಮಿನಿಸ್ಟ್ರೇಷನ್) ನಿತಿನ್ ಪಾಣಿಗ್ರಾಹಿ ಹೇಳಿದ್ದಾರೆ.
ಪಾಶ್ಚಾತ್ಯ ಸಂಗೀತ, ಪಾದರಕ್ಷೆ ಮೋಹ!
ಇನ್ನು ಆಧುನಿಕ ದೆಹಲಿಯ ಹರಿಕಾರಳಾಗಿದ್ದ ಶೀಲಾ ದೀಕ್ಷಿತ್ ತನ್ನ ಯೌವನದಿಂದಲೂ ಪಾಶ್ಚಾತ್ಯ ಸಂಗೀತದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದರು.  ರೇಡಿಯೊ ಬಳಿ ಕುಳಿತು ತನ್ನ ನೆಚ್ಚಿನ ಹಾಡುಗಳನ್ನು ಪ್ರಸಾರ ಮಾಡಲು ಕಾಯುತ್ತಿದ್ದರು. 
ಪಾದರಕ್ಷೆಗಳ ಬಗ್ಗೆ ಮೋಹವನ್ನು ಬೆಳೆಸಿಕೊಂಡಿದ್ದ ಆಕೆ ಉತ್ತಮ ಪಾದರಕ್ಷೆಗಳ ಸಾಂಗ್ರಹ ಹೊಂದಿದ್ದರು. 
ಅಲ್ಲದೆ ಆಕೆಗೆ ಓದುವುದು ಉತ್ತಮ ಅಭ್ಯಾಸವಾಗಿತ್ತು.ಅವರು ಚಲನಚಿತ್ರಗಳನ್ನು ನೋಡುವುದು,ಅವರಿಷ್ಟದ ಅಭ್ಯಾಸ. ಅವು ಬ್ಲಾಕ್ ಆಂಡ್ ವೈಟ್ ಚಿತ್ರ  "ಹ್ಯಾಮ್ಲೆಟ್".ಚಿತ್ರವನ್ನು ಮೊದಲ ಬಾರಿಗೆ ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಿದ್ದರು.
ಕಳೆದ ವರ್ಷ ಪ್ರಕಟವಾದ "ಸಿಟಿಜನ್ ದೆಹಲಿ: ಮೈ ಟೈಮ್ಸ್, ಮೈ ಲೈಫ್" ಎಂಬ ಆತ್ಮಚರಿತ್ರೆಯಲ್ಲಿ ದೀಕ್ಷಿತ್ ಈ ಬಗ್ಗೆ ಪ್ರಸ್ತಾಪಿಸಿದ್ದರು.ಆ ದಿನಗಳಲ್ಲಿ ಯಾವುದೇ ಟೆಲಿವಿಷನ್ ಇರಲಿಲ್ಲ, ಮತ್ತು ದಿನದ ಕೆಲವು ಗಂಟೆಗಳಲ್ಲಿ ಮಾತ್ರ ರೇಡಿಯೊವನ್ನು ಪ್ರಸಾರವುಇತ್ತು.  ಶಾಲೆ ಮತ್ತು ಪುಸ್ತಕಗಳನ್ನು ಓದುವುದು, ಸಾಂದರ್ಭಿಕ ಚಲನಚಿತ್ರವನ್ನು ನೋಡುವುದು ಮತ್ತು ಸಂಗೀತವನ್ನು ಕೇಳುವುದು ಮುಂತಾದವುಗಳಿಗಾಗಿ ಜೀವನವು ಕಳೆಯುವ ಮಾರ್ಗವಾಗಿತ್ತುಅವರು ಬರೆದಿದ್ದಾರೆ.
ದೀಕ್ಷಿತ್ ತನ್ನ ಶಾಲಾ ಶಿಕ್ಷಣವನ್ನು ಕಾನ್ವೆಂಟ್ ಆಫ್ ಜೀಸಸ್ ಮತ್ತು ಮೇರಿಯಿಂದ ಪಡೆದರೆ ನಂತರ ದೆಹಲಿ ವಿಶ್ವವಿದ್ಯಾಲಯದ ಅತ್ಯಂತ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಮಿರಾಂಡಾ ಹೌಸ್ ನಲ್ಲಿ ಕಾಲೇಜು ಶಿಕ್ಷಣ ಹೊಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ, ರಷ್ಯಾದ ಬಿಗ್ ವಾರ್ನಿಂಗ್ ಏನು?

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

SCROLL FOR NEXT