ಕಣ್ಣುಮುಚ್ಚಿ ಸ್ಕೇಟಿಂಗ್ ಮಾಡಿ ಕನ್ನಡ ಬಾಲಕಿಯಿಂದ ವಿಶ್ವದಾಖಲೆ! 
ವಿಶೇಷ

ಕಣ್ಣುಮುಚ್ಚಿ ಸ್ಕೇಟಿಂಗ್ ಮಾಡಿ ಕನ್ನಡ ಬಾಲಕಿಯಿಂದ ವಿಶ್ವದಾಖಲೆ!

ಕನ್ನಡನಾಡಿನ ಹೆಮ್ಮೆಯ ಕುವರಿ 14 ವರ್ಷದ ಬಾಲಕಿ ಗುರುವಾರ ಬೆಳಿಗ್ಗೆ ಹೊಸ ವಿಶ್ವ ದಾಖಲೆಯನ್ನು ರಚಿಸುವ ಮೂಲಕ  ಅಪರೂಪದ ಸಾಧನೆ ಮೆರೆದಿದ್ದಾಳೆ

ಹುಬ್ಬಳ್ಳಿ: ಕನ್ನಡನಾಡಿನ ಹೆಮ್ಮೆಯ ಕುವರಿ 14 ವರ್ಷದ ಬಾಲಕಿ ಗುರುವಾರ ಬೆಳಿಗ್ಗೆ ಹೊಸ ವಿಶ್ವ ದಾಖಲೆಯನ್ನು ರಚಿಸುವ ಮೂಲಕ ಅಪರೂಪದ ಸಾಧನೆ ಮೆರೆದಿದ್ದಾಳೆ

ಹುಬ್ಬಳ್ಳಿಯ 7 ನೇ ತರಗತಿ ಬಾಲಕಿ ಓಜಲ್ ನಲವಾಡೆ ಈ ಸಾಧನೆ ಮಾಡಿದ ಬಾಲಕಿಯಾಗಿದ್ದು ಈಕೆ ಕಣ್ಣುಮುಚ್ಚಿಕೊಂಡು 51 ಸೆಕೆಂಡುಗಳಲ್ಲಿ 400 ಮೀಟರ್ ದೂರವನ್ನು ಸ್ಕೇಟಿಂಗ್ ಮೂಲಕ ಕ್ರಮಿಸಿವುದರೊಡನೆ ನೂತನ ದಾಖಲೆ ಬರೆದಿದ್ದಾಳೆ.

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ಓಜಲ್ 400 ಮೀಟರ್ ನಲ್ಲಿ ವಿಶ್ವದ ಅತ್ಯಂತ ವೇಗದ ಬ್ಲೈಂಡ್ ಫೋಲ್ಡ್ ಸ್ಕೇಟರ್ (blindfold skater) ಎಂದು ಘೋಷಿಸಿದರು.ಈ ವೇಳೆ ಆಕೆಯ ಕುಟುಂಬ, ಹಿತೈಷಿಗಳು ಹಾಗೂ ಸ್ಕೇಟಿಂಗ್ ಅಭಿಮಾನಿಗಳು ಹಾಜರಿದ್ದು ಅವರೆಲ್ಲರ ಹರ್ಷೋದ್ಗಾರಗಳ ನಡುವೆ ಬಾಲಕಿಗೆ ಪ್ರಮಾಣಪತ್ರವನ್ನು ವಿತರಿಸಲಾಗಿದೆ.

ಚೇತನಾ ಕಾಲೇಜಿನ ಬಳಿ ನಡೆದ ಈ ಕಾರ್ಯಕ್ರಮವು ಮುಂಜಾನೆ 5.30 ರ ಸುಮಾರಿಗೆ ನಡೆದಿದ್ದು ಒಟ್ಟು ಮೂರು ಪ್ರಯತ್ನಗಳಲ್ಲಿ ಕಡೇ ಪ್ರಯತ್ನದಲ್ಲಿ ದಾಖಲೆ ನಿರ್ಮಾಣವಾಗಿದೆ. ಗಿನ್ನಿಸ್  ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಬಾಲಕಿಗೆ ಈ ಸಾಹಸವನ್ನು ಪೂರ್ಣಗೊಳಿಸಲು 60 ಸೆಕೆಂಡುಗಳ ಸಮಯವನ್ನು ನೀಡಿದ್ದರು.

ವಿಶ್ವದಾಖಲೆ ಪ್ರಮಾಣಪತ್ರ ಪಡೆದ ಓಜಲ್ ಮಾಧ್ಯಮಗಳೊಂದಿಗೆ ಮಾತನಾಡಿ "ನನಗೆ ಈ ಸಾಹಸ ಮಾಡಲು ಬೆಂಬಲಿಸಿದ ಎಲ್ಲರಿಗೆ ಧನ್ಯವಾದ. "ನನ್ನ ಪೋಷಕರು, ತರಬೇತುದಾರ ಮತ್ತು ಕುಟುಂಬವು ಒಂದು ದೊಡ್ಡ ಬೆಂಬಲ ನಿಡಿದೆ. ಭವಿಷ್ಯದಲ್ಲಿ ಅವರ ಬೆಂಬಲದೊಂದಿಗೆ ನಾನು ಹೆಚ್ಚಿನದನ್ನು ಸಾಧಿಸುತ್ತೇನೆ" ಎಂದು ಅವರು ಹೇಳಿದರು.

ಓಜಲ್‌ನ ಸ್ಕೇಟಿಂಗ್ ತರಬೇತುದಾರ ಅಕ್ಷಯ್ ಸೂರ್ಯವಂಶಿ ಹೇಳಿದಂತೆ "ಹಲವು ದಿನಗಳವರೆಗೆ ಮುಂಜಾನೆ ಅಭ್ಯಾಸ ಮಾಡುತ್ತಿದ್ದ ಓಜಲ್‌ ಕಣ್ಣುಮುಚ್ಚಿ ವೇಗವಾಗಿ ಸ್ಕೇಟಿಂಗ್ ಮಾಡುವುದು ಅಪರೂಪದ ಸಾಧನೆ, ದೃಢ ನಿಶ್ಚಯ  ಮತ್ತು ಕಠಿಣ ಪರಿಶ್ರಮದಿಂದ ಅವಳು ಅದನ್ನು ಸಾಧಿಸಿದ್ದಾಳೆ" ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT