ವೈರಲ್ ವಿಡಿಯೋ 
ವಿಶೇಷ

ಈ ವಿಡಿಯೋ ಈ ಪರಿ ವೈರಲ್ ಆಗಿದ್ದೇಕೆ..? ನೋಡಿ ಬಿದ್ದು ಬಿದ್ದು ನಗ್ತೀರಾ..!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಸೇರಿದಂತೆ ಎಲ್ಲ ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕ ಶೇರ್ ಆಗುತ್ತಿದೆ.

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಸೇರಿದಂತೆ ಎಲ್ಲ ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕ ಶೇರ್ ಆಗುತ್ತಿದೆ.

ಈ ವಿಡಿಯೋವನ್ನು ಮೊದಲ ಬಾರಿಗೆ ನೋಡುವವರಿಗೆ ಥ್ರಿಲ್ಲರ್​, ಸಸ್ಪೆನ್ಸ್​ ಚಿತ್ರದ ದೃಶ್ಯದ ರೀತಿ ಕಂಡರು, ಕ್ಲೈಮ್ಯಾಕ್ಸ್​ನಲ್ಲಿ ಪಡೆದುಕೊಳ್ಳುವ ರೋಚಕ ತಿರುವು ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ಇಷ್ಚಕ್ಕೂ ಈ ವಿಡಿಯೋದಲ್ಲೇನಿದೆ..? ಯಾವ ಕಾರಣಕ್ಕೆ ಈ ವಿಡಿಯೋವನ್ನು ಜನ ಈ ಪರಿ ಶೇರ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಜಮೀನು ಒಂದರಲ್ಲಿ ವ್ಯಕ್ತಿಯೊಬ್ಬ ಭಾರಿ ಗಾತ್ರದ ಹಾವನ್ನು ಹಿಡಿಯುತ್ತಿರುವಂತೆ ಕಾಣುತ್ತದೆ. ಹಿಂದೆ ಇರುವ ಯುವಕರಿಗೆ ವ್ಯಕ್ತಿ ಹಿಂದೆ ಸರಿಯಿರಿ ಎಂದು ಎಚ್ಚರಿಸುವುದನ್ನು ನೋಡಿದರೆ, ತಾನು ಹಿಡಿದಿರುವುದು ಭಾರಿ ಗಾತ್ರ ವಿಷಕಾರಿ ಹಾವೇನೋ ಎಂಬಂತೆ ಭಾಸವಾಗುತ್ತದೆ. ಅಲ್ಲದೇ ವಿಡಿಯೋದಲ್ಲಿ ಜನರು ಕೂಗುತ್ತಿರುವ ಹಿನ್ನೆಲೆ ಧ್ವನಿಯೂ ಕೂಡ ಸನ್ನಿವೇಶವನ್ನು ಮತ್ತಷ್ಟು ಗಂಭೀರ ಎನ್ನುವ ಭಾವ ಮೂಡಿಸುತ್ತದೆ. 

ಆದರೆ, ವ್ಯಕ್ತಿ ಜಮೀನಿನಿಂದ ಹೊರತೆಗೆದುದ್ದನ್ನು ನೋಡಿದರೆ ಎಲ್ಲರೂ ಬೇಸ್ತು ಬೀಳುತ್ತಾರೆ. ಅಲ್ಲದೆ ನಕ್ಕು ನಕ್ಕು ಸುಸ್ತಾಗುತ್ತಾರೆ. ಹೌದು.. ಆತ ಹಿಡಿದಿದ್ದು ಹಾವು ಎಂದುಕೊಂಡಿದ್ದ ಜನರಿಗೆ ಕೊನೆಯಲ್ಲಿ ಗೊತ್ತಾಗುವುದು ವ್ಯಕ್ತಿ ಜಮೀನಿನಲ್ಲಿ ಬಿದ್ದಿದ್ದ ಬೆಲ್ಟ್ ಅನ್ನು ತೆಗೆದು ಸೊಂಟಕ್ಕೆ ಕಟ್ಟಿಕೊಳ್ಳುತ್ತಾನೆ. ಆದರೆ ಆತನೊಂದಿಗೆ ಇದ್ದವರಿಗೆ ಇದರ ಬಗ್ಗೆ ಏನೇನೂ ತಿಳಿಯದೇ ಹಾವು ಎಂದು ಕೊಂಡು ಆತನ ನೆರವಿಗೆ ನಿಂತಿರುತ್ತಾರೆ. ಆದರೆ ಅದು ಬೆಲ್ಟ್ ಎಂದು ತಿಳಿದಾಗ ಹ್ಯಾಪುಮೊರೆ ಹಾಕಿಕೊಂಡು ಹಿಂದಿರುಗುತ್ತಾರೆ.

ಈ ವಿಡಿಯೋವನ್ನು ಸೇನ್​​ ಕೆಂಟ್​ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದು, ಸುಮಾರು 30 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT