ವಿಶೇಷ

ಬಿಹಾರ: ಶತಮಾನಗಳಷ್ಟು ಹಳೆಯದಾದ ಮಸೀದಿ ನಿರ್ವಹಣೆ ಮಾಡುತ್ತಿರುವ ಹಿಂದೂಗಳು!

Nagaraja AB

ಪಾಟ್ನಾ: ಧರ್ಮದ ವಿಚಾರದಲ್ಲಿ ದೇಶದಲ್ಲಿ ಪ್ರತಿನಿತ್ಯ ಗುಂಪು ಹಲ್ಲೆ, ಘರ್ಷಣೆಗಳು ನಡೆಯುತ್ತಿರುವುದನ್ನು ನಾವು ಕಂಡಿದ್ದೇವೆ. ದಿನನಿತ್ಯ ಕೇಳುತ್ತಿದ್ದೇವೆ. ಆದರೆ,  ಬಿಹಾರದ ನಳಂದಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಪರೂಪ ಎಂಬಂತೆ ಹಿಂದೂಗಳು ಮಸೀದಿಯನ್ನು ನಿರ್ವಹಣೆ ಮಾಡುತ್ತಾ ಬಂದಿದ್ದಾರೆ.

ಇದು ಆಶ್ಚರ್ಯಕರವಾದರೂ ಸತ್ಯ. ಮಾಧಿ ಹಳ್ಳಿಯಲ್ಲಿ ಮುಸ್ಲಿಂರು ಇಲ್ಲ ಆದರೆ, 200 ವರ್ಷಗಳಷ್ಟು ಹಳೆಯದಾದ ಮಸೀದಿಯಲ್ಲಿ ಪ್ರತಿದಿನ ಐದು ಬಾರಿ ಹಿಂದೂಗಳಿಂದ ನಮಾಜ್ ಮಾಡಲಾಗುತ್ತದೆ. ಈ ಮಸೀದಿ ಮೇಲ್ವಿಚಾರಣೆಯನ್ನು ಹಿಂದೂಗಳೇ ಮಾಡುತ್ತಿದ್ದಾರೆ. 

'ಅಜಾನ್ ನಮ್ಮಗೆ ಗೊತ್ತಿಲ್ಲ. ಆದರೆ, ಪೆನ್ ಡ್ರೈವ್ ಮೂಲಕ ಅಜಾನ್ ರೇಕಾರ್ಡಿಂಗ್ ಮಾಡಿಕೊಂಡು ಪೂಜೆ ಸಂದರ್ಭದಲ್ಲಿ ಪ್ರತಿದಿನ ಹಾಕಲಾಗುತ್ತದೆ ಎಂದು ಗ್ರಾಮಸ್ಥರಾದ ಹನ್ಸ್ ಕುಮಾರ್ ಹೇಳುತ್ತಾರೆ.

ಮಾಧಿ ಗ್ರಾಮದಲ್ಲಿ ಮುಸ್ಲಿಂ ಸಂಖ್ಯೆ ಕಡಿಮೆಇದ್ದ ಕಾರಣ ಬೇರೆಡೆಗೆ ವಲಸೆ ಹೋಗಿದ್ದಾರೆ. ಮಸೀದಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಹಿಂದೂಗಳೇ ಮಸೀದಿ ನಿರ್ವಹಣೆ ಮಾಡುತ್ತಿರುವುದಾಗಿ  ಸೈಸ್ ಗೌತಮ್ ತಿಳಿಸಿದ್ದಾರೆ.

ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮಸೀದಿಯನ್ನು ಸ್ವಚ್ಛಗೊಳಿಸಿ  ಪ್ರಾರ್ಥನೆ ಮಾಡಲಾಗುತ್ತದೆ. ತೊಂದರೆಗೊಳಗಾದ ಜನರು ಇಲ್ಲಿಗೆ ಬಂದು ಪ್ರಾರ್ಥನೆ ಮಾಡುತ್ತಾರೆ ಎಂದು  ಗ್ರಾಮದ ಆರ್ಚಕ ಜಾಂಕಿ ಪಂಡಿತ್ ಹೇಳುತ್ತಾರೆ.

SCROLL FOR NEXT