ಡಾ. ಪ್ರತಾಪ್ ಸಿ ರೆಡ್ಡಿ 
ವಿಶೇಷ

TNIE ವಿಶೇಷ ಸಂವಾದ: ಲಸಿಕೆ ಇಲ್ಲದೆ ನಾವು ಎಂದಿಗೂ ಕೋವಿಡ್ ವಿರುದ್ಧ ಹೋರಾಡಲು ಸಾಧ್ಯವಿಲ್ಲ- ಡಾ. ಪ್ರತಾಪ್ ಸಿ ರೆಡ್ಡಿ

ಕೊರೋನಾವೈರಸ್ ಗಾಗಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ಪ್ರಯತ್ನಿಸಬೇಕು, ಮತ್ತುವ್ಯವಸ್ಥಿತ ಚಿಕಿತ್ಸೆ ಇರಬೇಕು ಎಂದು ಅಪೊಲೊ ಆಸ್ಪತ್ರೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರತಾಪ್ ಸಿ ರೆಡ್ಡಿ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗಿನ ಸಂವಾದದಲ್ಲಿ ಹೇಳಿದ್ದಾರೆ. 

ಕೊರೋನಾವೈರಸ್ ಗಾಗಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ಪ್ರಯತ್ನಿಸಬೇಕು, ಮತ್ತುವ್ಯವಸ್ಥಿತ ಚಿಕಿತ್ಸೆ ಇರಬೇಕು ಎಂದು ಅಪೊಲೊ ಆಸ್ಪತ್ರೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರತಾಪ್ ಸಿ ರೆಡ್ಡಿ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗಿನ ಸಂವಾದದಲ್ಲಿ ಹೇಳಿದ್ದಾರೆ.  ಲೇಖಕ ಮತ್ತು ಹಿರಿಯ ಪತ್ರಕರ್ತೆ ಕಾವೇರಿ ಬಂಜೈ ಜತೆಗೆ ರೆಡ್ಡಿ ಲೈವ್ ವೆಬ್‌ಕಾಸ್ಟ್‌ ನಲ್ಲಿ ಭಾಗವಹಿಸಿದ್ದರು.

ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‌ಸಿಡಿ) ನ ಕಡೆಗಿನ ನಮ್ಮ ಹೆಚಿನ ಗಮನ ಇಂದಿನ ನಮ್ಮ ಈ ಸ್ಥಿತಿಗೆ ಕಾರಣವೆ?

ಪ್ರಸ್ತುತ ಇತರೆ ರೋಗಿಗಳ ಬಗ್ಗೆ ನಾವು ಗಮನಿಸುತ್ತಿಲ್ಲ,  ಅಲ್ಲದೆ ಎರಡನೇ ದಶಕದಲ್ಲಿ ಎನ್‌ಸಿಡಿಗಳು ಅಗಾಧವಾಗಿ ಬೆಳೆಯುತ್ತವೆ ಎಂದು ಊಹಿಸಲಾಗಿತ್ತು,80 ರಷ್ಟು ಸಾವುಗಳು ಎನ್‌ಸಿಡಿಗಳಿಂದ ಆಗಲಿವೆ ... ವಿಶ್ವಕ್ಕೆ 30 ಟ್ರಿಲಿಯನ್ ಡಾಲರ್ ಮತ್ತು ಭಾರತಕ್ಕೆ 4 ಟ್ರಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ವಿಶ್ವ ಆರ್ಥಿಕ ವೇದಿಕೆ ಹೇಳಿದೆ. ನೀವು ಎನ್‌ಸಿಡಿಗಳನ್ನು ನಿಯಂತ್ರಿಸಿದರೆ, ಜಿಡಿಪಿ ಬೆಳವಣಿಗೆ ಇರುತ್ತದೆ. ಇವೆಲ್ಲವೂ ಸರಿಯಾಗಬೇಕಾದರೆ ಎನ್‌ಸಿಡಿಗಳ ಮೇಲೆ ಒತ್ತಡ ಹಾಕಬೇಕಿದೆ.

ಖಾಸಗಿ ವಲಯ ದುಬಾರಿ ಎಂಬ ಆರೋಪ ಇದೆ?

ಪ್ರಾಥಮಿಕ, ದ್ವಿತೀಯ, ತೃತೀಯ ದರ್ಜೆಯ ಎಲ್ಲಾ ಆಸ್ಪತ್ರೆಗಳು  ಒಂದು ನಿರ್ದಿಷ್ಟ ಪ್ರಮಾಣದ ಹೆಚ್ಚುವರಿ ಮೂಲಸೌಕರ್ಯ ಮತ್ತು ವೆಚ್ಚವನ್ನು ಹೊಂದಿವೆ. ಕೋವಿಡ್ -19 ಕೋಣೆಯ ಆರೈಕೆ ಮತ್ತು ಐಸಿಯುಗಾಗಿ ಕೆಲವು ರಾಜ್ಯಗಳುಶುಲ್ಕವನ್ನು ನಿಗದಿಪಡಿಸಿವೆ. ಆದರೆ ಐಸಿಯುನಲ್ಲಿ ಹೆಚ್ಚಿನ ರೋಗಿಗಳು ಕೋವಿಡ್ ಜತೆಗೆ ಇತರೆ ಕಾಯಿಲೆಗಳ ಲಕ್ಷಣ ಹೊಂದಿದ್ದಾರೆ ಎನ್ನುವುದನ್ನು  ಅವರು ಮರೆತಿದ್ದಾರೆ ಮತ್ತು ಅವರಿಗೆ ಸಹ ಚಿಕಿತ್ಸೆ ನೀಡಬೇಕಾಗಿದೆ. ಅದು ಹೆಚ್ಚುವರಿ ಖರ್ಚು.

ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಹಳ್ಳಿಗಳನ್ನು ಒಳಗೊಂಡಿಲ್ಲ?

ಹಾಗೆ ಮಾಡುತ್ತಿಲ್ಲ ಎಂದಲ್ಲ, ಅವರು  ದತ್ತಿ ಕೆಲಸ ಮಾಡುತ್ತಿದ್ದಾರೆ. ತಂತ್ರಜ್ಞಾನದ ಬಲ ಸಿಕ್ಕಾಗ ಅದಕ್ಕೆ ತಕ್ಕಂತೆ ಹಣವನ್ನು ಒದಗಿಸುವುದು ಅವರಿಗೆ ಕಷ್ಟವಾಗಿತ್ತು.

ಸರ್ಕಾರದಿಂದ ನೀವು ಯಾವ ರೀತಿಯ ಬೆಂಬಲವನ್ನು ನಿರೀಕ್ಷಿಸುತ್ತೀರಿ?

ಆರೋಗ್ಯ ರಕ್ಷಣೆಯ ಕಾರ್ಯವು ಕೋವಿಡ್ -19 ರ ನಂತರ ನಡೆಯಲಿದೆ. ಉತ್ತಮ ಆರೋಗ್ಯ ಎಂದರೇನು ಎಂದು ವ್ಯಕ್ತಿಗೆ ಕಲಿಸಬೇಕು. ಈ ದಶಕವು ರೋಗನಿರ್ಣಯವನ್ನು ಮಾಡಲು ಮತ್ತು ಅವುಗಳನ್ನು ಗುಣಪಡಿಸಲು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ನಮಗೆ ಹೆಚ್ಚು ಸಹಾಯಕವಾಗಿದೆ. ಭಾರತದಲ್ಲಿ, ನಾವು ಹೆಚ್ಚಿನ ಸಂದರ್ಭಗಳಲ್ಲಿ ಎನ್‌ಸಿಡಿಗಳನ್ನು ಹಿಂದಕ್ಕೆ ತಳ್ಳಬಹುದು. ನಾವು ನಮ್ಮ ವೈದ್ಯರ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು, ದಾದಿಯರ ಸಂಖ್ಯೆಯನ್ನು ಮೂರು ಪಟ್ಟು ಮತ್ತು ಅರೆವೈದ್ಯರ ಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚಿಸಬೇಕು. ಅವರ ತರಬೇತಿ ಸಂಸ್ಥೆಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು

ಆದರೆ ಹೆಚ್ಚುವರಿ ವೈದ್ಯಕೀಯ ಕಾಲೇಜುಗಳು ಅಗತ್ಯವಿಲ್ಲ ಎಂಬ ವಾದವಿದೆ ನೀವು ಒಪ್ಪುವಿರೆ?

ನಮಗೆ ಹೆಚ್ಚಿನ ಹಾಸಿಗೆಗಳು ಬೇಕು ಆದರೆ ತರಬೇತಿಗಾಗಿ, ನಮಗೆ ಇನ್ನೂ ಹೆಚ್ಚಿನವು ಬೇಕು. 

ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ ಹೋಂ ಡೆಲಿವರಿಯ ಭವಿಷ್ಯವೇನು?

ಭವಿಷ್ಯವು ಅಪಾರವಾಗಿದೆ. ಟೆಲೆಮೆಡಿಸಿನ್ ಸಲಹೆಯು ಉತ್ತಮ ಪ್ರಗತಿಯನ್ನು ಹೊಂದಿದೆ.

ನಾವು ಕೋವಿಡ್ -19 ರ ಪೀಕ್ ಹಂತವನ್ನು ತಲುಪಿದ್ದೇವೆಯೇ?

ಲಸಿಕೆ ಬರದಿದ್ದರೆ, ನಾವು ಎಂದಿಗೂ ರೋಗದ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಭಾರತದಲ್ಲಿ, ನಮ್ಮ ಸಮಸ್ಯೆ ಎಂದರೆ ಅವರಿಗೆ ಕಾಯಿಲೆ ಇದೆ ಎಂದು ತಿಳಿಯದೆ ಪ್ರಯಾಣಿಸುವ ಜನ. 

ವಲಸೆ ಬಿಕ್ಕಟ್ಟನ್ನು ಉತ್ತಮವಾಗಿ ನಿಭಾಯಿಸಬಹುದೆಂದು ನೀವು ಭಾವಿಸುತ್ತೀರಾ?

ಲಾಕ್‌ಡೌನ್ ವಲಸಿಗರಿಗೆ ಸಹಾಯ ಮಾಡಲಿಲ್ಲ. ಅದು ಅವರ ಸಮಸ್ಯೆಯನ್ನು ಉಲ್ಬಣಗೊಳಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT