ವಿಶೇಷ

ವಿಶೇಷ ವರದಿ: ದೃಷ್ಟಿ ವಿಶೇಷಚೇತನ ವ್ಯಕ್ತಿಗೆ ಸ್ವಂತ ಉದ್ಯಮ ಸ್ಥಾಪನೆಗೆ ನೆರವಾದ ಟಿಎನ್‌ಐಇ ಟ್ವೀಟ್!

ರೈಲು ನಿಲ್ದಾಣದಿಂದ ಫುಟ್‌ಪಾತ್‌ವರೆಗೆ ಬೀದಿ ಬೀದಿ ಸುತ್ತಿ ‘ಕಡಲೆಕಾಯಿ’ ವ್ಯಾಪಾರ ನಡೆಸಿದ್ದ ವಿಶೇಷ ಚೇತನವೊಬ್ಬರಿಗೆ ಟಿಎನ್‌ಐಇ ಟ್ವೀಟ್‌ ಒಂದು ಸ್ವಂತ ಅಂಗಡಿ ಸ್ಥಾಪನೆಗೆ ಕಾರಣವಾಗಿದೆ. 

ಬೆಂಗಳೂರು: ರೈಲು ನಿಲ್ದಾಣದಿಂದ ಫುಟ್‌ಪಾತ್‌ವರೆಗೆ ಬೀದಿ ಬೀದಿ ಸುತ್ತಿ ‘ಕಡಲೆಕಾಯಿ’ ವ್ಯಾಪಾರ ನಡೆಸಿದ್ದ ವಿಶೇಷ ಚೇತನವೊಬ್ಬರಿಗೆ ಟಿಎನ್‌ಐಇ ಟ್ವೀಟ್‌ ಒಂದು ಸ್ವಂತ ಅಂಗಡಿ ಸ್ಥಾಪನೆಗೆ ಕಾರಣವಾಗಿದೆ. 

ದೃಷ್ಟಿ ವಿಶೇಷಚೇತನರಾದ ಧರ್ಮರಾಜ್ (33) , ರೈಲುಗಳಲ್ಲಿ ಚಿಕ್ಕಿ, ಕಡಲೆಕಾಯಿ, ಮೊಬೈಲ್ ಫೋನ್ ಕವರ್ ಇತ್ಯಾದಿಗಳನ್ನು ಮಾರಾಟ ಮಾಡುವ ಮೂಲಕ ಜೀವನೋಪಾಯ ನಡೆಸಿದ್ದರು. ಸಾಂಕ್ರಾಮಿಕ ರೋಗದ ಕಾರಣ ರೈಲು ಸಂಚಾರ ಸ್ಥಗಿತವಾದ ನಂತರ ಅವರ ಜೀವನ ದುರ್ಬರವಾಗಿತ್ತು. ಚಿಕ್ಕ ಪುಟ್ಟ ವ್ಯಾಪಾರಿಗಳು ರೈಲುಗಳಿಗೆ ಪ್ರವೇಶಿಸುವುದು ನಿಷೇಧಿಸಲಾಗಿದೆ. ಇದರಿಂದ ಧರ್ನರಾಜ್ ನಿಜಕ್ಕೂ ಸಂಕಟಕ್ಕೆ ಸಿಲುಕಿದರು.  ಆಗ ಅಮೃತ ಬಿಂದು ಎಂಬ ಎನ್ಜಿಒ ಸದಸ್ಯರಾದ ಪ್ರಶಾಂತ್ ಅವರನ್ನು ಭೇಟಿ ಮಾಡಿದ್ದರು.  ಆ ವೇಳೆ ಧರ್ಮರಾಜ್ ತಾವು ಮಲ್ಲೇಶ್ವರಂನ ರಸ್ತೆಬದಿಯಲ್ಲಿ ಕಡಲೆಕಾಯಿ ಮತ್ತು ಪೆನ್ನುಗಳು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಲು ನಿರ್ಧರಿಸಿದರು, ಇದಕ್ಕಾಗಿ ಅವರಿಗೆ 7,000 ರೂ. ಅಗತ್ಯವಿತ್ತು. ಈ ಸಮಯದಲ್ಲಿ ಟಿಎನ್‌ಐಇ ವರದಿಗಾರ ಅವರ ನೆರವಿಗೆ ಧಾವಿಸಿದ್ದಾರೆ. ವರದಿಗಾರರ ಟ್ವೀಟ್ ನಂತರ ಕೇವಲ ಎರಡೇ ದಿನಗಳಲ್ಲಿ 30,000 ರೂ. ಸಂಗ್ರಹವಾಗಿದೆ.

ಟಿಎನ್‌ಐಇ ವರದಿಗಾರಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ.ನಾಗಾಂಬಿಕಾ ದೇವಿ ಅವರನ್ನು ಸಂಪರ್ಕಿಸಿ. ಧರ್ಮರಾಜ್ ಎಸ್‌ಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಆರ್ಥಿಕ ಸಹಾಯಕ್ಕೆ ಅರ್ಹರಾಗಿದ್ದಾರೆ ಎನ್ನುವುದನ್ನು ಮನವರಿಕೆ ಮಾಡಿಸಿದ್ದರು. ಮತ್ತೀಗ ಶುಕ್ರವಾರ, ಧರ್ಮರಾಜ್‌ಗೆ 50,000 ರೂ. ಭಾಗಷಃ ಸಾಲ ನೀಡುವುದಕ್ಕೆ ಇಲಾಖೆ ಅನುಮೋದಿಸಿದೆ.

"ಅವರು ನಾನಿದ್ದಲ್ಲಿಗೆ ಕಾರು ಕಳಿಸುತ್ತಾರೆ ಎನ್ನುವುದು ನನಗೆ ನಂಬಲು ಸಾಧ್ಯವಿಲ್ಲ! ನಾನಿಂದು ವಿಧಾನ ಸೌಧದಲ್ಲಿದ್ದೇನೆ. ನನಗೆ 50,000 ರೂ. ನೀಡುತ್ತಿದ್ದಾರೆ” ಎಂದು ಧರ್ಮರಾಜ್ ಶನಿವಾರ ಸಂತೋಷದಿಂದ ಹೇಳಿದರು.

ಧರ್ಮರಾಜ್ ಆರಂಭದಲ್ಲಿ ಮಲ್ಲೇಶ್ವರಂ ಗ್ರಂಥಾಲಯದ ಬಳಿ ಫುಟ್‌ಪಾತ್‌ನಲ್ಲಿ ವ್ಯಾಪಾರ ಪ್ರಾರಂಭಿಸಿದ್ದರು.ರಲುಗಳಲ್ಲಿ ದಿನವೊಂದಕ್ಕೆ 600 ರೂ. ಸಂಪಾದನೆಯಾಗುತ್ತಿತ್ತು. ಆದರೆ ಫುಟ್‌ಪಾತ್‌ಗೆ ಸ್ಥಳಾಂತರವಾದ ನಂತರ ಅದು ಕೇವಲ 400 ರೂ, ಗೆ ಇಳಿಕೆಯಾಗಿತ್ತು.  ಆದರೆ ಆ ಒಂದು ಟ್ವೀಟ್ ನನ್ನ ಜೀವನವನ್ನು ಬದಲಿಸಿತು"

ಧರ್ಮರಾಜ್ ಮಲ್ಲೇಶ್ವರಂನಲ್ಲಿ ಕೆಲವು ಸಣ್ಣ ಅಂಗಡಿಗಳನ್ನು ಗುರುತಿಸಿದ್ದು ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಲಲಿದ್ದಾರೆ. “ನಾನು ನನ್ನ ಹೆಂಡತಿಗಾಗಿ ಹೊಲಿಗೆ ಯಂತ್ರವನ್ನು ಖರೀದಿಸಿದೆ, ಅವಳು ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ನಾವು ನಮ್ಮ ಸ್ವಂತ ವ್ಯಾಪಾರವನ್ನು ಪ್ರಾರಂಭಿಸುತ್ತೇವೆ. ಒಟ್ಟಿನಲ್ಲಿ ನಾವು ನಮ್ಮ ಮಕ್ಕಳಿಗೆ ಯೋಗ್ಯವಾದ ಜೀವನವನ್ನು ಒದಗಿಸಬಹುದು’’ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT