ಮಾನ್ಯ ಸಿಂಘಾಲ್ 
ವಿಶೇಷ

ಪುಟ್ಟ ಮಕ್ಕಳಿಗಾಗಿ ಮೊಬೈಲ್ ಅಪ್ಲಿಕೇಷನ್ ರಚಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿನಿ!

ಹೊಸ ಆಟಿಕೆಗಳು, ಹೊಸ ಪದಗಳು, ಹೊಸ ಆಹಾರಗಳು , ಹೊಸ ಪ್ರಾಣಿಗಳನ್ನು ಗುರುತಿಸುವುಕೆಗೆ ಪ್ರೋತ್ಸಾಹಿಸುವ ಮೂಲಕ . ಅಂಬೆಗಾಲಿಡುವ ಮಕ್ಕಳ ಮನಸ್ಸನ್ನು ಕದಿಯಬಹುದು. ಇಂತಹಾ ಒಂದು ಹಂತದಲ್ಲಿ ವಸ್ತು, ಪ್ರಾಣಿ, ಆಹಾರಗಳನ್ನು ಗುರುತಿಸಲು ಮಕ್ಕಳಿಗೆ ನೆರವಾಗಲು 8 ವರ್ಷದ ಮಾನ್ಯ ಸಿಂಘಾಲ್ ಎಂಬ ಬಾಲಕಿ ಮೊಬೈಲ್ ಅಪ್ಲಿಕೇಶನ್ ಒಂದನ್ನು ವಿನ್ಯಾಸಗೊಳಿಸಿದ್ದಾಳೆ!

ನವದೆಹಲಿ: ಹೊಸ ಆಟಿಕೆಗಳು, ಹೊಸ ಪದಗಳು, ಹೊಸ ಆಹಾರಗಳು , ಹೊಸ ಪ್ರಾಣಿಗಳನ್ನು ಗುರುತಿಸುವುಕೆಗೆ ಪ್ರೋತ್ಸಾಹಿಸುವ ಮೂಲಕ . ಅಂಬೆಗಾಲಿಡುವ ಮಕ್ಕಳ ಮನಸ್ಸನ್ನು ಕದಿಯಬಹುದು. ಇಂತಹಾ ಒಂದು ಹಂತದಲ್ಲಿ ವಸ್ತು, ಪ್ರಾಣಿ, ಆಹಾರಗಳನ್ನು ಗುರುತಿಸಲು ಮಕ್ಕಳಿಗೆ ನೆರವಾಗಲು 8 ವರ್ಷದ ಮಾನ್ಯ ಸಿಂಘಾಲ್ ಎಂಬ ಬಾಲಕಿ ಮೊಬೈಲ್ ಅಪ್ಲಿಕೇಶನ್ ಒಂದನ್ನು ವಿನ್ಯಾಸಗೊಳಿಸಿದ್ದಾಳೆ! ಪಿಕಾಬೂ (Pickaboo) ಎಂಬ ಹೆಸರಿನ ಈ ಅಪ್ಲಿಕೇಷನ್ ಸುತ್ತ ಮುತ್ತಲ ವಸ್ತುಗಳ ಸ್ಕ್ಯಾನ್ ಮಾಡಿ ಅದರ ಹೆಸರನ್ನು ಹೇಳಲು ಮಕ್ಕಳಿಗೆ ನೆರವಾಗುತ್ತದೆ.

ಗುರುಗ್ರಾಮದ ಸನ್ ಸಿಟಿ  ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಮಾನ್ಯ ತನ್ನ ಪುಟ್ಟ ತಂಗಿಗೆ ತನಗೆ ತಿಳಿದಿರುವ ಎಲ್ಲವನ್ನೂ ಕಲಿಸಲು ಇಷ್ಟಪಡುತ್ತಾಳೆ. ಆದರೆ ಆ ತಂಗಿ ಅದನ್ನೆಲ್ಲಾ ಕಲಿಯಲು ಸಮಯ ತೆಗೆದುಕೊಳ್ಳುವುದು ಕಂಡ ಮಾನ್ಯ ಅದಕ್ಕಾಗಿ ಅಪ್ಲಿಕೇಷನ್ ತಯಾರಿಗೆ ಮುಂದಾದಳು. “ನನ್ನ ಎರಡೂವರೆ ವರ್ಷದ ಸಹೋದರಿ ತನ್ನ ಸುತ್ತಲೂ ನೋಡುವ ವಸ್ತು, ಜೀವಿಗಳ ಬಗ್ಗೆ ತಿಳಿದುಕೊಳ್ಳಲು ಯಾವಾಗಲೂ ಕುತೂಹಲದಿಂದ ಕೂಡಿರುತ್ತಾಳೆ ಮತ್ತು ನನ್ನ ಪೋಷಕರು ಮತ್ತು ಕುಟುಂಬ ಸದಸ್ಯರಿಗೆ ಆಗಾಗ್ಗೆ ಪ್ರಶ್ನೆಗಳನ್ನು ಕೇಳುತ್ತಾಳೆ.ಆದ್ದರಿಂದ, ಅವಳೇ ಸ್ವತಂತ್ರವಾಗಿ ವಸ್ತಿಗಳನ್ನು ಗುರುತಿಸಲೆಂದು ಅವಳಿಗೆ ನೆರವಾಗಬಲ್ಲ ಸಾಧನವನ್ನು ರಚಿಸಲು ನಾನು ಬಯಸುತ್ತೇನೆ.” ಮಾನ್ಯ ಏಳು ತಿಂಗಳ ಹಿಂದೆ ಕೋಡಿಂಗ್ ಕಲಿಕೆ ಪ್ರಾರಂಭಿಸಿದ್ದಳು. ತಲಾ ಒಂದು ಗಂಟೆ ಅವಧಿಯ 84 ತರಗತಿಗಳಿಗೆ ಹಾಜರಾದ ಮಾನ್ಯ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದೀಗ ಲಭ್ಯವಿರುವ ಆ್ಯಪ್ಅನ್ನು ಒಂದು ತಿಂಗಳ ಅವಧಿಯಲ್ಲಿ ರಚಿಸಿದ್ದಾಳೆ.

“ಅಪ್ಲಿಕೇಶನ್ ವಸ್ತುವಿನ ಚಿತ್ರವನ್ನು ತೆಗೆದುಅದನ್ನು ಮೈಕ್ರೋಸಾಫ್ಟ್ ಇಮೇಜ್ ಪ್ರೊಸೆಸಿಂಗ್ API ಗೆ ಕಳುಹಿಸುತ್ತದೆ. API ವಿವರಣೆಯನ್ನು ಕೊಟ್ಟ ನಂತರ , ಅದನ್ನು ಅನುವಾದಕ API ಗೆ ಕಳುಹಿಸಲಾಗುತ್ತದೆ (ಭಾಷಾ ಸೆಟ್ಟಿಂಗ್‌ಗಳ ಆಧಾರದ ಮೇಲೆ). ಫಲಿತಾಂಶವನ್ನು ಪಠ್ಯದಿಂದ ಭಾಷಾ  ಪರಿವರ್ತಕ ಮತ್ತು ಇಂಗ್ಲಿಷ್, ಹಿಂದಿ, ಸ್ಪ್ಯಾನಿಷ್, ಫ್ರೆಂಚ್ ಮತ್ತು ಜರ್ಮನ್ ಎಂಬ ಐದು ವಿಭಿನ್ನ ಭಾಷೆಗಳಲ್ಲಿ ಸ್ಕ್ಯಾನ್ ಮಾಡಿದ ವಸ್ತುವಿನ ಹೆಸರನ್ನು ಉಚ್ಚರಿಸುವ ಅನುವಾದಕ ಎಂಜಿನ್‌ಗೆ ಕಳುಹಿಸಲಾಗುತ್ತದೆ. ” "ನಾನು ಕೋಡಿಂಗ್ ಮಾಡುವಾಗ ಸಮಯ ಹೇಗೆ ಹಾದುಹೋಗುತ್ತದೆ ಎಂದು ನನ ಅರಿವಿಗೇ ಬರುತ್ತಿರಲಿಲ್ಲ"  ಮಾನ್ಯ ಕೋಡಿಂಗ್ ಬಗ್ಗೆ ಉತ್ತಮ ಆಸಕ್ತಿ ತಾಳೀದ್ದಾಳೆ. ಮತ್ತು ಜೀವನದ ಯಾವುದೇ ಅಂಶವನ್ನು ಸರಳವಾಗಿಸಲು ಇದನ್ನು ಬಳಕೆ ಮಾಡಬಹುದು ಎನ್ನುತ್ತಾಳೆ. 

ಇನ್ನು ಪಿಕಾಬೂ ಮಾನ್ಯ ರಚಿಸಿಇದ ಮೊದಲ ಅಪ್ಲಿಕೇಷನ್ ಅಲ್ಲ ನಾನು ಮಕ್ಕಳಿಗೆ ಕಥೆ ಹೇಳುವ, ಹಾಡುಗಳನ್ನು ಸಮ್ಗ್ರಹಿಸುವ ಇನ್ನೆರಡು ಅಪ್ಲಿಕೇಶನ್ ಗಳನ್ನು ವಿನ್ಯಾಸಗೊಳಿಸಿದ್ದೇನೆ.  ಪಿಕಾಬೂವನ್ನು ಹೆಚ್ಚು ಸಂವೇದನಾತ್ಮಕ ಮತ್ತು ಪರ್ಸೊನಲೈಸ್ ಆಗಿಸಲು  ಹೇಗೆ ಸುಧಾರಿಸಬಹುದು ಎಂದು ಮಾನ್ಯ ಇದಾಗಲೇ ವಿಶ್ಲೇಷಿಸುತ್ತಿದ್ದಾರೆ. “ನಾನು ಭಾರತೀಯ ಶಾಸ್ತ್ರೀಯ ನೃತ್ಯವನ್ನು ಕಲಿಯಲು ಸುಲಭವಾಗುವಂತೆ ಮತ್ತೊಂದು ಅಪ್ಲಿಕೇಶನ್ ರಚಿಸಲು ಯೋಜಿಸುತ್ತಿದ್ದೇನೆ. ಕಥಕ್ ಕಲಿಯುವಾಗ, ಕೈ ಮತ್ತು ಕಾಲುಗಳ ಸರಿಯಾದ ಭಂಗಿ ಬಹಳ ಮುಖ್ಯ ಎಂದು ನಾನು ಅರಿತುಕೊಂಡೆ, ಮತ್ತು ಅಪ್ಲಿಕೇಶನ್‌ನಲ್ಲಿ ಅಂತಹ ಕ್ರಿಯಾತ್ಮಕತೆಯನ್ನು ಸೇರಿಸಲು ಸಾಧ್ಯವಿದೆ ಎಂದು ನಾನು ಭಾವಿಸುತ್ತೇನೆ. ” 

ಮಾನ್ಯ ತಾಯಿ ಶಿಖಾ, “ಲಾಕ್‌ಡೌನ್ ಸಮಯದಲ್ಲಿ, ಮಾನ್ಯ ತೊಡಗಿಸಿಕೊಂಡಿದ್ದ ಎಲ್ಲಾ ಇತರ ಚಟುವಟಿಕೆಗಳು ಬ್ಯಾಕ್ ಗ್ರೌಂಡ್ ಸೀಟ್ ಅನ್ನು ಗಟ್ಟಿಗೊಳಿಸಿದೆ. ಆ ಸಮಯದಲ್ಲಿ, ಶಾಲೆಯಲ್ಲಿ ಕೋಡಿಂಗ್ ಅನ್ನು ಪರಿಚಯಿದಾಗ ಮಾನ್ಯ ಅದನ್ನು ಹೆಚ್ಚು ಅನ್ವೇಷಣೆ ಮಾಡಬಯಸಿದ್ದಳು.  ಈ ಕ್ಷೇತ್ರದಲ್ಲಿ ತನ್ನ ಆಸಕ್ತಿಯನ್ನು ಬೆಳೆಸಿಕೊಂಡ ಆಕೆ  ಆರಂಭಿಕ ಕೆಲವು ತರಗತಿಗಳನ್ನು ಅವಳು ಇಷ್ಟಪಟ್ಟಿದ್ದರಿಂದ ನಮಗೆ ಸಂತೋಷವಾಗಿದೆ. ಕೋಡಿಂಗ್ ಅವಳ ತಾರ್ಕಿಕ ಚಿಂತನೆಯನ್ನು ಸುಧಾರಿಸಿದೆ. ಭವಿಷ್ಯದಲ್ಲಿ ಕೋಡಿಂಗ್ ತೆಗೆದುಕೊಳ್ಳುವ ಅವಕಾಶವನ್ನು ಅವಳು ಬಯಸದಿದ್ದರೂ ಅಥವಾ ಪಡೆಯದಿದ್ದರೂ ಸಹ, ಅವಳು ಅಮೂಲ್ಯವಾದ ಅನುಭವವನ್ನು ಗಳಿಸಿದ್ದಾಳೆ ಅದು ಜೀವನದ ಎಲ್ಲಾ ಹಂತಗಳಲ್ಲಿಯೂ ಅವಳಿಗೆ ನೆರವಾಗುತ್ತದೆ" ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT