ವಿಶೇಷ

ಬಾಳೆ ನಾರಿನಿಂದ ಮಹಿಳೆಯರಿಗೆ ಜೀವನೋಪಯ ಕಲ್ಪಿಸಿದ ಮಹಿಳಾ ಫ್ಯಾಷನ್ ಉದ್ಯಮಿ

Srinivas Rao BV

ಬಿಹಾರದಲ್ಲಿ ದೇಶಾದ್ಯಂತ ಅತ್ಯುತ್ತಮ ಗುಣಮಟ್ಟದ ಬಾಳೆಗೆ ಹೆಸರುವಾಸಿಯಾಗಿರುವ ಹಾಜಿಪುರದ ಮಹಿಳೆಯರು ಬಾಳೆಯ ನಾರಿನಿಂದ ಜೀವನೋಪಾಯ ಕಂಡುಕೊಂಡಿದ್ದಾರೆ. 

ಇದಕ್ಕೆ ನೆರವಾಗಿರುವುದು ವೈಶಾಲಿ ಪ್ರಿಯಾ ಎಂಬ ಫ್ಯಾಷನ್ ಉದ್ಯಮಿ. ಬಾಳೆ ಗಿಡದ ಕಾಂಡಗಳಿಂದ ನಾರುಗಳನ್ನು ತೆಗೆದು ಟೆಕ್ಸ್ಟೈಲ್ಸ್ ಉದ್ಯಮಕ್ಕಾಗಿ ಬಳಕೆ ಮಾಡಿಕೊಳ್ಳುವ ಕೌಶಲವನ್ನು ಹೇಳಿಕೊಟ್ಟಿದ್ದಾರೆ. 

25 ವರ್ಷದ ವೈಶಾಲಿ ಪ್ರಿಯಾ ಗ್ರಾಮೀಣ ಭಾಗದ ಮಹಿಳೆಯರಿಗೆ ಫ್ಯಾಷನ್ ಆಧಾರಿತ ಕೌಶಲ್ಯ ಅಭಿವೃದ್ಧಿ ತರಗತಿಗಳನ್ನು ನಡೆಸಿ ಗಾರ್ಮೆಂಟ್ ಹಾಗೂ ಬಿಡಿಭಾಗಗಳ ವಿಭಾಗದಲ್ಲಿ ಅಂತಾರಾಷ್ಟ್ರೀಯ ರಫ್ತು ಮಾರುಕಟ್ಟೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 

ಗ್ರಾಮೀಣ ಮಹಿಳೆಯರ ಕೌಶಲವನ್ನು ಉತ್ತೇಜಿಸುವ ಸಲುವಾಗಿ ವೈಶಾಲಿ ಪ್ರಿಯಾ, ಸುರ್ಮಯಿ ಬಾಳೆಹಣ್ಣು ಎಕ್ಸ್ಟ್ರಾಕ್ಟ್ ಯೋಜನೆಯನ್ನು ರೂಪಿಸಿದ್ದಾರೆ. 

ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದ ಸಹಕಾರದಿಂದ ಪ್ರಿಯಾ ಹರಿಹರ್ ಪುರದಲ್ಲಿ 30 ಮಹಿಳೆಯರಿಗೆ ತರಬೇತಿ ನೀಡುತ್ತಿದ್ದರು, ಇದರಿಂದ ಆದಾಯ ಹೆಚ್ಚಿರುವುದನ್ನು ಕಂಡ ವೈಶಾಲಿ ಪ್ರಿಯ ದಿನ ಕಳೆದಂತೆ ಹೆಚ್ಚು ಹೆಚ್ಚು ಜನರನ್ನು ತಂಡಕ್ಕೆ ಸೇರಿಸಿಕೊಂಡು ಆ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಿದ್ದಾರೆ. 

"ಮಹಿಳೆಯರಿಗೆ ಬಾಳೆ ನಾರಿನ ಎಕ್ಸ್ಟ್ರಾಕ್ಷನ್ ಪ್ರಕ್ರಿಯೆ-ಸ್ಟ್ರಿಪ್ಪಿಂಗ್, ಸೋಕಿಂಗ್, ಕೂಂಬಿಂಗ್ ಮತ್ತು ಸ್ಪಿನ್ನಿಂಗ್ ಕುರಿತ ಸಂಪೂರ್ಣ ತರಬೇತಿ ನೀಡಲಾಗಿದೆ. 

ಬಾಳೆ ನಾರಿನಿಂದ ಉತ್ಪನ್ನಗಳನ್ನು ತಯಾರಿಸುವುದಕ್ಕೂ ಸಹ ಈ ಮಹಿಳೆಯರಿಗೆ ತರಬೇತಿ ನೀಡಲಾಗಿದೆ, ಬಾಳೆಯ ನಾರಿನಿಂದ ವಿವಿಧ ರೀತಿಯ ಟೈಕ್ಸ್ ಟೈಲ್ ಉತ್ಪನ್ನಗಳನ್ನೂ ಮಾಡಬಹುದಾಗಿದ್ದು ತಂಡದಲ್ಲಿರುವ ಮಹಿಳೆಯರು 5-6 ಕೆಜಿ ಬಾಳೆ ನಾರನ್ನು ಪ್ರತಿ ನಿತ್ಯ ಹೊರತೆಯುವುದಾಗಿ ವೈಶಾಲಿ ಪ್ರಿಯಾ ಹೇಳಿದ್ದಾರೆ. 

ಹರಿಹರ ಪುರದ ಕೃಷಿ ವಿಜ್ಞಾನ ಕೇಂದ್ರ ಯಂತ್ರವನ್ನು ನೀಡಿ , ಕೃಷಿ ವಿಜ್ಞಾನಿ ಡಾ. ನರೇಂದ್ರ ಕುಮಾರ್ ನೇತೃತ್ವದಲ್ಲಿ ತರಬೇತಿ ನೀಡಿ ತಮಗೆ ಸಹಕರಿಸಿದೆ ಎನ್ನುತ್ತಾರೆ ವೈಶಾಲಿ ಪ್ರಿಯ. 

ಶಾಲಾ ದಿನಗಳಿಂದಲೂ ಹರಿಹರ್ ಪುರದಲ್ಲಿ ಅಪಾರ ಪ್ರಮಾಣದಲ್ಲಿ ಬಾಳೆ ಬೆಳೆ ಬೆಳೆಯುತ್ತಿದ್ದದ್ದದ್ದು ತಿಳಿದಿತ್ತು, ಇದರಿಂದ ಅಪಾರ ಪ್ರಮಾಣದ ತ್ಯಾಜ್ಯವೂ ಉಂಟಾಗುತ್ತಿತ್ತು ಈ ತ್ಯಾಜ್ಯವನ್ನು ಸದ್ಬಳಕೆ ಮಾಡಿಕೊಳ್ಳುವುದರ ಬಗ್ಗೆ ಯೋಜನೆ ರೂಪಿಸಿದೆ ಎಂದು ವೈಶಾಲಿ ಪ್ರಿಯ ಹೇಳಿದ್ದಾರೆ. 
 

SCROLL FOR NEXT