ಗದಗದ ಆರ್ಟ್ ಅಡ್ಡಾ 
ವಿಶೇಷ

ಕಾಫಿ ಹೀರುತ್ತಾ, ಐಸ್ ಕ್ರೀಂ ಸವಿಯುತ್ತಾ ಪೇಂಟಿಂಗ್ ಮಾಡುತ್ತಾ ಕಥೆ-ಕಾದಂಬರಿ ಓದಬಹುದು: ಇದು ಗದಗದಲ್ಲಿರುವ 'ಆರ್ಟ್ ಅಡ್ಡಾ'!

ಸುಂದರವಾದ ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು  ಹೊಂದಿರುವ ಕೋಣೆಗಳು, ಜನರು ಕಾದಂಬರಿಗಳನ್ನು ಓದುವುದು, ಕಲೆಗಳ ಬಗ್ಗೆ ಚರ್ಚೆ ನಡೆಸುವುದು, ಕಾಫಿ ಹೀರುವುದು, ಐಸ್ ಕ್ರೀಂ ಸವಿಯುವುದು. ಆರ್ಟ್ ಅಡ್ಡಾ, ಸ್ನೇಹಿತರ ಸಮ್ಮಿಲನ, ಹರಟೆ ಹೀಗೆ ಹತ್ತಾರು ಖುಷಿಯ ವಿಚಾರಗಳು ಒಂದೇ ಸೂರಿನಡಿಯಲ್ಲಿ.

ಗದಗ: ಸುಂದರವಾದ ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು  ಹೊಂದಿರುವ ಕೋಣೆಗಳು, ಜನರು ಕಾದಂಬರಿಗಳನ್ನು ಓದುವುದು, ಕಲೆಗಳ ಬಗ್ಗೆ ಚರ್ಚೆ ನಡೆಸುವುದು, ಕಾಫಿ ಹೀರುವುದು, ಐಸ್ ಕ್ರೀಂ ಸವಿಯುವುದು. ಆರ್ಟ್ ಅಡ್ಡಾ, ಸ್ನೇಹಿತರ ಸಮ್ಮಿಲನ, ಹರಟೆ ಹೀಗೆ ಹತ್ತಾರು ಖುಷಿಯ ವಿಚಾರಗಳು ಒಂದೇ ಸೂರಿನಡಿಯಲ್ಲಿ. ಇದು ನಿರಳಗಿ ಸರ್ಕಾರಿ ಶಾಲೆಯ ಕಲಾ ಶಿಕ್ಷಕ ವಿಜಯ್ ಕಿರೆಸುರ್ ಅವರ ಕನಸಿನ ಕೂಸು.

ಈ ಕೆಫೆಯಲ್ಲಿ ಉದಯೋನ್ಮುಖ ಕಲಾವಿದರಿಗೆ ತಮ್ಮ ವರ್ಣಚಿತ್ರಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ, ಅದರ ಮಾತೃ ಸಂಸ್ಥೆ - ಕನ್ನಡ ಮನೆ ಸಾಂಸ್ಕೃತಿಕ ವೇದಿಕೆ - ಪ್ರತಿ ಶನಿವಾರ ಸಂಜೆ ಆರ್ಟ್ ಅಡ್ಡಾದಲ್ಲಿ ಸಂಗೀತಗಾರರು, ಕಲಾವಿದರು, ಭಾಷಣಕಾರರು ಮತ್ತು ಮುಂಬರುವ ನಟರಿಗೆ ಪ್ರದರ್ಶನ ನೀಡಲು ಅವಕಾಶವನ್ನು ನೀಡುತ್ತದೆ.

ಜನರು "ಇನ್ಫೋಟೈನ್‌ಮೆಂಟ್" ಪಡೆಯುವ ಸ್ಥಳವನ್ನು ನಿರ್ಮಿಸುವುದು ತಮ್ಮ ಕನಸಾಗಿತ್ತು ಎಂದು 40 ವರ್ಷದ ಕಿರೆಸುರ್ ಹೇಳುತ್ತಾರೆ. ಕೆಫೆ ಎಲ್ಲರಿಗಾಗಿ ಇರುವ ಸ್ಥಳವಾಗಿದೆ. ಕುಟುಂಬವೊಂದು ಮಕ್ಕಳೊಂದಿಗೆ ಬಂದು ಐಸ್ ಕ್ರೀಮ್ ಸವಿಯುತ್ತಾ ಪೈಂಟಿಂಗ್ ನ್ನು ಮಕ್ಕಳಿಗೆ ತೋರಿಸಬಹುದು. ಗೃಹಿಣಿಯರು ಕಲೆ, ಚಿತ್ರಕಲೆ ಬಗ್ಗೆ ಇನ್ನಷ್ಟು ಕಲಿಯಬಹುದು, ಹವ್ಯಾಸವಾಗಿ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ಥಿಯೇಟರ್ ಕಲಾವಿದ ಹಾಗೂ ಕವಿಯಾಗಿರುವ ವಿಜಯ್ ಕಿರೆಸುರ್.

ಕಳೆದ ಜನವರಿಯಲ್ಲಿ ಆರಂಭವಾದ ಈ ಆರ್ಟ್ ಅಡ್ಡಾ ನಂತರದ ದಿನಗಳಲ್ಲಿ ಹಲವರನ್ನು ಆಕರ್ಷಿಸಿತು. ಲಾಕ್‌ಡೌನ್‌ನಿಂದಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ ನಂತರ, ಅದು ಈಗ ಮತ್ತೆ ತೆರೆದಿದೆ. ತನ್ನ ಸ್ವಂತ ನಿಧಿಯಿಂದ ಕೆಫೆಯನ್ನು ಆರಂಭಿಸಿದ ವಿಜಯ್, ಆಕರ್ಷಣೀಯ ಕೇಂದ್ರವಾಗಿ ಬೆಳೆಸಲು ಉತ್ಸುಕರಾಗಿದ್ದಾರೆ.

ಚಿತ್ರಕಲೆಗಳನ್ನು ಪ್ರದರ್ಶಿಸುವ ಎರಡು ಸಭಾಂಗಣಗಳಿಗೆ ಪ್ರವಾಸಿಗರನ್ನು ಸೆಳೆಯಲಾಗುತ್ತದೆ, ಹಿತವಾದ ಹಿನ್ನೆಲೆ ಸಂಗೀತ, ಕಲಾವಿದರು ನೋಡಲು,ಕುಳಿತುಕೊಳ್ಳಲು, ಕೇಳಲು ಹಿತವಾಗಿರುತ್ತದೆ. ಮರದ ಫಲಕಗಳ ಮೇಲೆ ಕೆತ್ತಲಾದ ಸ್ಫೂರ್ತಿದಾಯಕ ಉಲ್ಲೇಖಗಳನ್ನು ಮೇಜಿನ ಮೇಲೆ ಜೋಡಿಸಲಾಗಿದೆ ಮತ್ತು 'ಬುಕ್ ಕಾರ್ನರ್' ಎಂಬ ವಿಭಾಗವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸುಮಾರು 150 ಪುಸ್ತಕಗಳನ್ನು - ಕಾದಂಬರಿಗಳು, ವಚನಗಳು ಮತ್ತು ಕಥಾ ಪುಸ್ತಕಗಳನ್ನು ಹೊಂದಿದೆ.

ಕಲಾವಿದರು ತಮ್ಮ ಕೆಲಸವನ್ನು ಆರ್ಟ್ ಅಡ್ಡಾದಲ್ಲಿ ಯಾವಾಗ ಬೇಕಾದರೂ ಪ್ರದರ್ಶಿಸಬಹುದು. ''ನಾವು ಒಬ್ಬ ಕಲಾವಿದನಿಗೆ ಒಂದು ಇಡೀ ವಾರವನ್ನು ನಿಯೋಜಿಸುತ್ತೇವೆ. ಭವಿಷ್ಯದಲ್ಲಿ ನಾವು ಅತ್ಯಲ್ಪ ಶುಲ್ಕವನ್ನು ನಿಗದಿಪಡಿಸಲು ಯೋಜಿಸಿದ್ದೇವೆ, ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಉಚಿತ ವೇದಿಕೆ ಕಲ್ಪಸಿಕೊಟ್ಟಿದ್ದೇವೆ "ಎಂದು ವಿಜಯ್ ಹೇಳಿದರು.

ಆರ್ಟ್ ಅಡ್ಡಾ ಪ್ರತಿ ಶನಿವಾರ ಕಾರ್ಯಗಳನ್ನು ಆಯೋಜಿಸುತ್ತದೆ, ತಿಂಗಳಿಗೆ ನಾಲ್ಕು ಕಾರ್ಯಕ್ರಮಗಳನ್ನು ಯೋಜಿಸುತ್ತದೆ. ಮೊದಲ ಶನಿವಾರದಂದು ದೃಶ್ಯ ಕಲೆಗಳ ಕಾರ್ಯಕ್ರಮಗಳು ನಡೆಯುತ್ತವೆ, ಎರಡನೆಯದರಲ್ಲಿ ಸಂಗೀತಗಾರರನ್ನು ಒಳಗೊಂಡ ಪ್ರದರ್ಶನ, 'ಮಾಸದ ಮಾತು' - ಎಂಬ ಕಾರ್ಯಕ್ರಮದಲ್ಲಿ ಪ್ರಮುಖ ವಿಷಯಗಳ ಕುರಿತು ಮಾತುಕತೆ- ಮೂರನೆಯ ವಾರ ಮತ್ತು 'ಪಾತರಗಿತ್ತಿ ಪಕ್ಕ' - ಒಂದು ಕಾರ್ಯಕ್ರಮ ರಂಗಭೂಮಿ ಕಲಾವಿದರಿಗೆ - ಕೊನೆಯ ಶನಿವಾರ ನಡೆಯುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT