ವಿಶೇಷ

ಒಣ ತ್ಯಾಜ್ಯ ರೀಸೈಕಲ್, ದ್ರವ ತ್ಯಾಜ್ಯದಿಂದ ಸಾವಯವ ಗೊಬ್ಬರ: ರೂರ್ಕೆಲ ಮಹಾನಗರ ಪಾಲಿಕೆಯ ಮಾದರಿ

Harshavardhan M

ಭುವನೇಶ್ವರ: ಒಡಿಶಾದ ರೂರ್ಕೆಲಾ ಮಹಾನಗರ ಪಾಲಿಕೆ (ಆರ್ ಎಂ ಸಿ) ನಗರದ ತ್ಯಾಜ್ಯ ಸಮಸ್ಯೆಗೆ ಸರಳ ಹಾಗೂ ಪರಿಸರಸ್ನೇಹಿ ಪರಿಹಾರವನ್ನು ಕಂಡುಕೊಂಡಿದೆ. 

ನಗರದಾದ್ಯಂತ ಪ್ರತ್ಯೇಕವಾಗಿ ಸಂಗ್ರಹಿಸಲಾಗುವ ಒಣ ತ್ಯಾಜ್ಯವನ್ನು ರೀಸೈಕಲ್ ಮಾಡಿ ಮಾರಾಟ ಮಾಡಿದರೆ, ದ್ರವ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಿ ಮಾರಾಟ ಮಾಡಲಾಗುತ್ತಿದೆ.

ನಗರದಲ್ಲಿ ಒಟ್ಟು 8 ಮೈಕ್ರೊ ಕಾಂಪೋಸ್ಟಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಡಿಸ್ಪೋಸಲ್ ಮಾಡಲಾಗುತ್ತಿದೆ. 

ಮೊದಲಿಗೆ ತ್ಯಾಜ್ಯವನ್ನು ಒಣ ಮತ್ತು ದ್ರವ ಎಂದು ಪ್ರತ್ಯೇಕಿಸಲಾಗುವುದು. ನಂತರ ದ್ರವ ತ್ಯಾಜ್ಯವನ್ನು ಪರಿಷ್ಕರಿಸಿ ಸಾವಯವ ಗೊಬ್ಬರವನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ. ಪುನರ್ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ವಸ್ತುಗಳನ್ನು ದಾಲ್ಮಿಯಾ ಸಿಮೆಂಟ್ ಕಾರ್ಖಾನೆಗೆ ಕಳಿಸಿಕೊಡಲಾಗುವುದು. ಒಣ ತ್ಯಾಜ್ಯವನ್ನು ರೀಸೈಕಲ್ ಮಾಡಲಾಗುತ್ತಿದೆ.

ಈ ರೀತಿಯಾಗಿ ತ್ಯಾಜ್ಯವನ್ನು ಪರಿಸರಸ್ನೇಹಿ ಮಾರ್ಗಗಳಿಂದ ಪರಿಷ್ಕರಿಸಿ ವ್ಯರ್ಥವಾಗದಂತೆ ಪುನರ್ಬಳಕೆ ಮಾಡುವ ವಿಧಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ರೂರ್ಕೆಲ ಮಾದರಿಯೆನಿಸಿಕೊಂಡಿದೆ. 

SCROLL FOR NEXT