ಗ್ರ್ಯಾಂಡ್ ಪ್ರೈಜ್ ವಿಜೇತೆ ಧ್ಯಾನ್ ಸುಮನ್ 
ವಿಶೇಷ

ಹೇಗಿದ್ಳು ಹೇಗಾದ್ಳು ಗೊತ್ತಾ?: 1 ಕೋಟಿ ರೂ. ಬಹುಮಾನದ ಜಾಗತಿಕ ಮಟ್ಟದ ಫಿಟ್ನೆಸ್ ಚಾಲೆಂಜ್ ಗೆದ್ದ ಜೈಪುರದ ಮಹಿಳೆ

ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿಜೇತೆಯನ್ನು ಅಭಿನಂದಿಸಿದ್ದಾರೆ. ವಿಶ್ವಾದ್ಯಂತ ಒಟ್ಟು 1 ಲಕ್ಷಕ್ಕೂ ಹೆಚ್ಚು ಮಂದಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಡಿದ್ದರು.

ನವದೆಹಲಿ: ಆನ್ ಲೈನ್ ಹೆಲ್ತ್ ಫಿಟ್ನೆಸ್ ಬ್ರ್ಯಾಂಡ್ ಆದ Fittr ಆಯೋಜಿಸಿದ್ದ ಜಾಗತಿಕ ಮಟ್ಟದ ಫಿಟ್ನೆಸ್ ಸ್ಪರ್ಧೆ 'ಟ್ರಾನ್ಸ್ ಫಾರ್ಮೇಷನ್ ಚಾಲೆಂಜ್' ಯಲ್ಲಿ ಜೈಪುರದ ಮಹಿಳೆ ಧ್ಯಾನ್ ಸುಮನ್ ಅವರು ಗ್ರ್ಯಾಂಡ್ ಪ್ರೈಜ್ ಗೆದ್ದಿದ್ದಾರೆ.. ಆ ಮೂಲಕ ಅವರು ಸ್ಪರ್ಧೆಯ ಬಹುಮಾನವಾದ 1 ಕೋಟಿ ರೂ. ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿಜೇತೆಯನ್ನು ಅಭಿನಂದಿಸಿದ್ದಾರೆ. ವಿಶ್ವಾದ್ಯಂತ ಒಟ್ಟು 1 ಲಕ್ಷಕ್ಕೂ ಹೆಚ್ಚು ಮಂದಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಡಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ.

ಟ್ರಾನ್ಸ್ ಫಾರ್ಮೇಷನ್ ಚಾಲೆಂಜ್ ಎನ್ನುವ ಜಾಗತಿಕ ಮಟ್ಟದ ಫಿಟ್ನೆಸ್ ಸ್ಪರ್ಧೆಯನ್ನು ಸಂಸ್ಥೆ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಈ ಬಾರಿಯದ್ದು 14ನೇ ಆವೃತ್ತಿಯಾಗಿದೆ.

ಪ್ರಶಸ್ತಿ ಗೆದ್ದಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿರುವ 38ರ ಹರೆಯದ ಧ್ಯಾನ್ ಸುಮನ್ ಅವರು ಜನರಲ್ಲಿ ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಬಗ್ಗೆ ಕಾಳಜಿ ಮೂಡಿಸುತ್ತಿರುವ Fittr ಸಂಸ್ಥೆಯನ್ನು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ