ವಿಶೇಷ

ಇನ್ಮುಂದೆ ಟಿವಿಯ ಪರದೆಯ ಮೇಲೂ ರುಚಿ ನೋಡಬಹುದು; ಜಪಾನ್ ನ ಟೇಸ್ಟ್ ಟಿವಿ ವಿಶೇಷತೆ ಹೀಗಿವೆ...

Srinivas Rao BV

ಟೋಕಿಯೊ: ಈವರೆಗೂ ಪರದೆಗಳ ಮೇಲೆ ಆರ್ಡರ್ ಮಾಡುವುದರಿಂದ ಆಹಾರಪದಾರ್ಥಗಳನ್ನು ಮನೆಗೆ ತರಿಸಿಕೊಳ್ಳಬಹುದಾಗಿದೆ. ಆದರೆ ಜಪಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪರದಯ ಮೇಲಿಂದ ರುಚಿಯನ್ನೂ ನೋಡಬಹುದಾದ ಟಿವಿಯನ್ನು ಅಭಿವೃದ್ಧಿಪಡಿಸಿದೆ. 

ಇದೇನಪ್ಪಾ ವಿಚಿತ್ರ ಎನ್ನಬೇಡಿ, ನೆಕ್ಕಬಹುದಾದ ಟಿವಿ ಪರದೆಯನ್ನು ಜಪಾನ್ ಅಭಿವೃದ್ಧಿಪಡಿಸಿದ್ದು ಹಲವು ವಿಧವಾದ ಆಹಾರದ ರುಚಿಗಳನ್ನು ಆಸ್ವಾದಿಸಬಹುದಾಗಿದೆ. ಇದನ್ನು ಟೇಸ್ಟ್ ಟಿವಿ (ಟಿಟಿಟಿವಿ) ಎಂದು ಹೇಳಲಾಗುತ್ತಿದ್ದು,  ಒಂದು ನಿರ್ದಿಷ್ಟ ಆಹಾರದ ರುಚಿ ನೀಡುವುದಕ್ಕಾಗಿ 10 ಫ್ಲೇವರ್ ಡಬ್ಬಿಗಳನ್ನು ಬಳಕೆ ಮಾಡಲಾಗುತ್ತದೆ. ಇದು ನಂತರದಲ್ಲಿ ಟಿವಿ ಪರದೆಯ ಮೇಲೆ ಮೂಡಲಿದ್ದು ಬಳಕೆದಾರರು ರುಚಿ ನೋಡಬಹುದಾಗಿದೆ.
 
ಕೋವಿಡ್-19 ಸಂದರ್ಭದಲ್ಲಿ ಈ ರೀತಿಯ ತಂತ್ರಜ್ಞಾನದಿಂದಾಗಿ ಜನತೆ ಹೊರ ಪ್ರಪಂಚಕ್ಕೆ ಸುಲಭವಾಗಿ ಸೇರಿಕೊಳ್ಳಬಹುದಾಗಿದ್ದು, ಸಂವಹನ ನಡೆಸಬಹುದಾಗಿದೆ ಎಂದು ಮೇಜಿ ವಿವಿಯ ಪ್ರೊಫೆಸರ್ ಹೋಮಿ ಮಿಯಾಶಿತಾ ಹೇಳಿದ್ದಾರೆ. 

ಮನೆಯಲ್ಲೇ ಕುಳಿತು ರೆಸ್ಟೋರೆಂಟ್ ಗಳಲ್ಲಿ ತಿನ್ನುವ ಅನುಭವವನ್ನು ನೀಡುವುದಕ್ಕಾಗಿ ಈ ಟೇಸ್ಟ್ ಟಿವಿಯನ್ನು ತಯಾರಿಸಲಾಗಿದೆ. 

ಮಿಯಾಶಿತ ಈ ಫ್ಲೇವರ್- ಸಂಬಂಧಿತ ಡಿವೈಸ್ ಗಳನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳ ತಂಡದೊಂದಿಗೆ ಕೆಲಸ ಮಾಡುತ್ತಿದ್ದು, ಆಹಾರವನ್ನು ಮತ್ತಷ್ಟು ರುಚಿಕರವಾಗಿಸುವ ಫೋರ್ಕ್ ನ್ನೂ ಈ ತಂಡ ಅಭಿವೃದ್ಧಿಪಡಿಸಿದೆ.

ಟಿಟಿಟಿವಿ ಮಾದರಿಯನ್ನು ಕಳೆದ ವರ್ಷ ತಮಗಾಗಿಯೆ ಸಿದ್ಧಪಡಿಸಿಕೊಂಡಿದ್ದರು ಮಿಯಾಶಿತ, ವಾಣಿಜ್ಯ ಆವೃತ್ತಿಯ ಬೆಲೆ ಸುಮಾರು 100,000 ಯೆನ್ ಗಳಷ್ಟು ($875) ಗಳಷ್ಟಿದ್ದು

ಈ ಟಿವಿಯಲ್ಲಿ ಟೇಸ್ಟಿಂಗ್ ಗೇಮ್ ಗಳು, ಕ್ವಿಜ್, ಸಮ್ಮಿಲಿಯರ್ಸ್ ಗಾಗಿ ಡಿಸ್ಟೆನ್ಸ್ ಲರ್ನಿಂಗ್ ಗಳೂ ಲಭ್ಯವಿದೆ. ತಮ್ಮ ಸ್ಪ್ರೇ ಟೆಕ್ನಾಲಜಿಯನ್ನು ಅಪ್ಲಿಕೇಶನ್ ಗಳಲ್ಲಿ ಬಳಕೆ ಮಾಡಲು ಮಿಯಾಶಿತ ಕಂಪನಿಗಳೊಂದಿಗೆ ಮಾತುಕತೆಯನ್ನೂ ನಡೆಸುತ್ತಿದ್ದಾರೆ.

SCROLL FOR NEXT