ವಿಶೇಷ

ಅಂಧ ಮಹಿಳಾ ಉದ್ಯಮಿಯಿಂದ ಸ್ವಾವಲಂಬನೆಯ ಪಾಠ: ಗೃಹೋತ್ಪನ್ನಗಳಿಗೆ ಆಲ್ ಇಂಡಿಯಾ ಬೇಡಿಕೆ

Harshavardhan M

ತಿರುವನಂತಪುರ: ಕೇರಳದ ಅಂಧ ಮಹಿಳೆ ಗೀತಾ ಸಲೀಶ್ ಗೃಹೋತ್ಪನ್ನ ತಯಾರಿ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. ಅವರು 13ನೇ ವರ್ಷದಲ್ಲಿಯೇ ಅನುವಂಶೀಯತೆ ಕಾಯಿಲೆಯಿಂದಾಗಿ ದೃಷ್ಟಿಯನ್ನು ಕಳೆದುಕೊಂಡಿದ್ದರು.

ಒಟ್ಟಾಪಲಂ ನಿವಾಸಿಯಾಗಿರುವ ಗೀತಾ ಇಂದು ಗೃಹೋತ್ಪನ್ನ ವಸ್ತುಗಳ ತಯಾರಿ ಮೂಲಕ ಸ್ವಾವಲಂಬನೆಯ ಪಾಠವನ್ನು ಸಾರುತ್ತಿದ್ದಾರೆ. ಕೇರಳದ ಸಾಂಪ್ರದಾಯಿಕ ಖಾದ್ಯ, ತಿನಿಸುಗಳನ್ನು ಮಾರುತ್ತಿದ್ದಾರೆ. ಅವರು ತಮ್ಮದೇ ಸ್ವಂತ ಬ್ರ್ಯಾಂಡ್ ಅನ್ನು ಸೃಷ್ಟಿಸಿದ್ದಾರೆ.

ಗೀತಾ ಅವರ ಬ್ರ್ಯಾಂಡ್ ಹೆಸರು 'ಗೀತಾಸ್ ಹೋಮ್ ಟು ಹೋಮ್'. ಗೀತಾ ಅವರು ಉದ್ಯಮಿಯಾಗಿ ಬೆಳೆಯಲು ಕಾರಣವಾಗಿದ್ದು ಕೊರೊನಾ ಸಾಂಕ್ರಾಮಿಕ ಎನ್ನುವುದು ಅಚ್ಚರಿಯ ಸಂಗತಿ.

ಬಿಎ ವ್ಯಾಸಂಗ ಮಾಡಿರುವ ಗೀತಾ ಪತಿಯ ಜೊತೆಗೂಡಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅವರು ತಯಾರಿಸುವ ಕುರ್ಕು ಮೀಲ್, ಮಂಜಲ್ ವರಕಿಯತು ಮತ್ತಿತರ ಕೇರಳದ ಸ್ವಾದಿಷ್ಟ ತಿನಿಸುಗಳಿಗೆ ದೇಶದೆಲ್ಲೆಡೆಯಿಂದ ಬೇಡಿಕೆ ಇದೆ.

SCROLL FOR NEXT