ವಿಶೇಷ

ಕೃಷಿ ಉತ್ಪಾದನೆ ಹೆಚ್ಚಿಸಲು ಕೈಗೆಟುಕುವ ದರದಲ್ಲಿ ಸೆನ್ಸರ್ ಅಭಿವೃದ್ಧಿಪಡಿಸಿದ ಭಾರತೀಯ ಮೂಲದ ನಾಸಾ ಮಾಜಿ ವಿಜ್ಞಾನಿ

Srinivas Rao BV

ನಾಶಿಕ್: ಕೃಷಿ ಉತ್ಪಾದನೆ ಹೆಚ್ಚಿಸಲು ಕೈಗೆಟುಕುವ ದರದಲ್ಲಿ ಸೆನ್ಸರ್ ನ್ನು ನಾಸಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ಮಾಜಿ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿದ್ದಾರೆ. 

ನಾಶಿಕ್ ನ ಪರಾಗ್ ನರ್ವೇಕರ್ ಸೆನ್ಸರ್ (ಸಂವೇದಕಗಳು)ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೂ ಮುನ್ನ ಈ ರೀತಿಯ ಪ್ರತಿ ಸಂವೇದಕಗಳಿಗೆ 1.5 ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಆದರೆ ಈಗ 10,000 ರೂಪಾಯಿಗಳಿಗೆ ದೇಶದ ರೈತರಿಗೆ ಲಭ್ಯವಾಗಲಿದೆ. 

"ಈಗಿನ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಬೆಳೆಗಳಿಗೆ ಗೊಬ್ಬರ, ನೀರೊದಗಿಸುವುದಕ್ಕೆ ಈ ಸಂವೇದಕಗಳು ಸಹಕಾರಿಯಾಗಲಿದೆ. 

ಅಮೆರಿಕ, ಯುರೋಪ್ ಗಳಂತಹ ರಾಷ್ಟ್ರಗಳಲ್ಲಿ ಬೆಳೆ ಉತ್ಪಾದನೆಯನ್ನು ಹೆಚ್ಚಿಸುವಂತಹ ಕೃಷಿ ಸಂಬಂಧಿತ ತಂತ್ರಜ್ಞಾನಗಳು ಬಹಳಷ್ಟಿವೆ. ಆದರೆ ಭಾರತದಲ್ಲಿ ಅಂತಹ ತಂತ್ರಜ್ಞಾನಗಳು ಇಲ್ಲ ಎಂದು ನರ್ವೇಕರ್ ಹೇಳಿದ್ದಾರೆ. 

ನಾಸಾದಲ್ಲಿ ಕೆಲಸ ಮಾಡಿದ ನಂತರ ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಮನಸ್ಸಾಯಿತು. ಕೃಷಿ ದೇಶದ ಬೆನ್ನೆಲುಬು. ದುಬಾರಿ ತಂತ್ರಜ್ಞಾನ ರೈತರಿಗೆ ಕೈಗೆಟುಕುವುದಿಲ್ಲ. ಆದ್ದರಿಂದ ಕೈಗೆಟುಕುವ ದರದಲ್ಲಿ ಸಂವೇದಕಗಳನ್ನು ಅಭಿವೃದ್ಧಿಪಡಿಸಲು ಕಳೆದ ವರ್ಷ ನಿರ್ಧರಿಸಿದೆ ಎಂದು ಪರಾಗ್ ನರ್ವೇಕರ್ ಮಾಹಿತಿ ನೀಡಿದ್ದಾರೆ. 

ಬೆಳೆಗಳಿಗೆ ಗೊಬ್ಬರ, ನೀರೊದಗಿಸುವುದಕ್ಕೆ ಸೂಕ್ತ ಸಮಯವನ್ನು ಸೂಚಿಸುವುದಕ್ಕೆ ಈ ಸಂವೇದಕಗಳು ಸಹಕಾರಿಯಾಗಲಿವೆ, ಈ ಮೂಲಕ ರೈತರು ಉತ್ತಮ ಗುಣಮಟ್ಟದ ಬೆಳೆಯನ್ನು ಪಡೆಯಬಹುದು ಎಂದು ನರ್ವೇಕರ್ ತಿಳಿಸಿದ್ದಾರೆ. 

ಸ್ಯಾಟಲೈಟ್ ಗಳ ಮೂಲಕ ಹವಾಮಾನ ಮುನ್ಸೂಚನೆ ಪಡೆಯುವುದಕ್ಕೂ ಈ ಸೆನ್ಸರ್ ಗಳು ಉಪಯುಕ್ತವಾಗಲಿದ್ದು, ರೈತರು ತಮ್ಮ ಜಮೀನಿನಲ್ಲಿ ಸೆನ್ಸರ್ ಗಳನ್ನು ಅಳವಡಿಸಿದರೆ ಹತ್ತಿರದ ಪ್ರದೇಶಗಳ ಹವಾಮಾನದ ಬಗ್ಗೆಯೂ ರೈತರಿಗೆ ಮಾಹಿತಿ ಸಿಗಲಿದೆ ಎಂದು ನರ್ವೇಕರ್ ಮಾಹಿತಿ ನೀಡಿದ್ದಾರೆ. 

ಸಹ್ಯಾದ್ರಿ ಫಾರ್ಮ್ಸ್ ನ ನ ಎಂಡಿ ವಿಲಾಸ್ ಶಿಂಧೆ ಅವರ ಸಹಕಾರದಲ್ಲಿ ಪ್ರಾಯೋಗಿಕವಾಗಿ ಈ ಸೆನ್ಸರ್ ಗಳನ್ನು ಅಳವಡಿಸಲಾಗಿದ್ದು, ಉಪಯೋಗಗಳ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ರೈತ ರಮೇಶ್ ಗುಂಜಾ, ಮಳೆಯ ಸಾಧ್ಯತೆ ಹಾಗೂ ಶೇಕಡಾವಾರು ಮಳೆಯ ಬಗ್ಗೆ ಸೆನ್ಸರ್ ಗಳ ಮೂಲಕ ಮಾಹಿತಿ ಪಡೆದು ಅದಕ್ಕೆ ತಕ್ಕಂತೆ ಸಿದ್ಧರಾಗುತ್ತೆವೆ, ಇದರಿಂದಾಗಿ ಬೆಳೆಗಳಿಗೆ ಸಿಂಪಡಿಸುವ ಔಷಧಗಳ ಪ್ರಮಾಣ, ಸಮಯವನ್ನೂ ತಿಳಿಯಬಹುದಾಗಿದೆ. ಬೆಳೆಗೆ ಸಂಬಂಧಿಸಿದಂತೆ ಕೈಗೊಳ್ಳುವ ಪ್ರತಿ ನಿರ್ಧಾರವನ್ನೂ ಹೆಚ್ಚು ವಿಶ್ವಾಸದಿಂದ ಕೈಗೊಳ್ಳುತ್ತೇವೆ" ಎಂದು ವಿವರಿಸಿದ್ದಾರೆ. 

SCROLL FOR NEXT