ವಿಶೇಷ

ಮಂಡ್ಯ: 3 ಸಾವಿರಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ದೈಹಿಕ ಶಿಕ್ಷಕನಿಂದ ಉಚಿತ ಯೋಗಾಭ್ಯಾಸ

Shilpa D

ಮೈಸೂರು: ಕೊರೋನಾದಿಂದಾಗಿ ಹಲವು ಶಿಕ್ಷಕರು ಆನ್ ಲೈನ್ ತರಗತಿಗೆ ಬದಲಾಗಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ತರಗತಿ ನಡೆಸಲು ಸೀಮಿತರಾಗಿದ್ದಾರೆ.

ಆದರೆ ಅವರುಗಳ ನಡುವೆ 39 ವರ್ಷದ ದೈಹಿಕ ಶಿಕ್ಷಣ  ತರಬೇತುದಾರ ಡಾ. ಆರ್ ರಾಘವೇಂದ್ರ ವಿಭಿನ್ನವಾಗಿ ನಿಲ್ಲುತ್ತಾರೆ. ಮೈಸೂರಿನ ಶೇಷಾದ್ರಿಪುರಂ ಕಾಲೇಜಿನ ಎನ್ಎಸ್ ಎಸ್ ಅಧಿಕಾರಿಯಾಗಿರುವ ರಾಘವೇಂದ್ರ ಒಂದು ಹೆಜ್ಜೆ ಮುಂದೆ ಹೋಗಿ ಕೋವಿಡ್ ರೋಗಿಗಳಿಗೆ ನೇರವಾಗಿ ಯೋಗ ತರಗತಿ ನಡೆಸಿದ್ದಾರೆ.

ಮೈಸೂರು ಭಾಗದ ಕೋವಿಡ್ ಸೋಂಕಿತರಿಗೆ ಉಚಿತವಾಗಿ ಯೋಗ ಮತ್ತು ಉಸಿರಾಟದ ವ್ಯಾಯಾಮ ಕಲಿಸಿಕೊಡುತ್ತಿದ್ದಾರೆ. 

ಮಂಡ್ಯ-ಮೈಸೂರು ಭಾಗದ 3 ಸಾವಿರ ಕೋವಿಡ್ ರೋಗಿಗಳಿಗೆ ಯೋಗ ಮತ್ತು ಉಸಿರಾಟದ ವ್ಯಾಯಾಮ ಹೇಳಿಕೊಡುವ ಮೂಲಕ ವಾಪಸ್ ಅವರು ತಮ್ಮ ಸಹಜ ಜೀವನಕ್ಕೆ ಮರಳುವಂತೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ರಾಘವೇಂದ್ರ, ಕೋವಿಡ್ ಎರಡನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಐಸೋಲೇಶನ್ ನಲ್ಲಿರುವ ರೋಗಿಗಳಿಗೆ ಯೋಗ ಕಲಿಸಲು ಮುಂದಾಗಿದ್ದಾರೆ.

ಉಚಿತವಾಗಿ ಯೋಗ ಮತ್ತು ಉಸಿರಾಟ ವ್ಯಾಯಾಮ ಕಲಿಸುತ್ತಿರುವ ರಾಘವೇಂದ್ರ, ರೋಗಿಗಳಿಗೆ, ಪ್ರಾಣಯಾಮ, ರಕ್ತಸಂಚಲನ ಮತ್ತು ಶ್ವಾಸಕೋಶ ಸರಿಯಾಗಿ ಕಾರ್ಯನಿರ್ವಹಿಸುವಂತ ತರಬೇತಿ ನೀಡುತ್ತಿದ್ದಾರೆ.

ಮಂಡ್ಯದ ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ. ಕಪಾಲಭಾತಿ, ಭ್ರಸ್ಟಿಕಾ ಮತ್ತು ಉಸಿರಾಟ ಪ್ರಕ್ರಿಯೆ ಉತ್ತಮವಾಗಿಸುವ ಅಭ್ಯಾಸ ಮಾಡಿಸುತ್ತಿದ್ದಾರೆ. ಕೇವಲ ಇಷ್ಚಕ್ಕೆ ತಮ್ಮ ಕೆಲಸ ನಿಲ್ಲಿಸದ ರಾಘವೇಂದ್ರ, ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಗ್ರಾಮೀಣ ಪ್ರದೇಶಗಳ ಜನರಿಗೆ ಮೂರನೇ ಅಲೆಯಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡಲು ಮುಂದಾಗಿದ್ದಾರೆ. ಪ್ರತಿ ಮನೆ ಮನೆಗೂ ತೆರಳಿ ವಿವಿಧ ರೀತಿಯ ಉಸಿರಾಟದ ವ್ಯಾಯಾಮ ಹೇಳಿಕೊಳ್ಳಲು ನಿರ್ಧರಿಸಿದ್ದಾರೆ.

SCROLL FOR NEXT