ಮಿಲನ್ ರಫೀಕ್ 
ವಿಶೇಷ

ಚಿತ್ರದುರ್ಗ: ಅನಾಥ ಶವಗಳಿಗೆ ಗೌರವಪೂರ್ಣ ವಿದಾಯ; ಕೋವಿಡ್ ಸೋಂಕಿತರ ಮೃತದೇಹಗಳಿಗೆ ಅಂತ್ಯ ಸಂಸ್ಕಾರ

ಕೋವಿಡ್ ಮಾನವೀಯತೆಯನ್ನೇ ಸಾಯಿಸಿದೆ, ತಮ್ಮ ಹತ್ತಿರದವರನ್ನು ಹಾಗೂ ಸಾವಿನ ಅಂಚಿನಲ್ಲಿರುವ ಪೋಷಕರನ್ನು ನೋಡಲು ಸಹ ಮಕ್ಕಳು ನಿರಾಕರಿಸುತ್ತಿದ್ದಾರೆ ಎಂದು ರಫೀಕ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಚಿತ್ರದುರ್ಗ: ಹಿರಿಯೂರಿನಲ್ಲಿ ಹಳೇಯ ಪೀಠೋಪಕರಣ ಅಂಗಡಿ ನಡೆಸುತ್ತಿರುವ ಮಿಲನ್ ರಫೀಕ್ ಅವರ ಮಾರುತಿ ಓಮ್ನಿ ಕಾರನ್ನು ಅವರ ಮನೆ ಮುಂದೆ ಪಾರ್ಕಿಂಗ್ ಮಾಡಲು ಅನುಮತಿಯಿಲ್ಲ, ಜೊತೆಗೆ ಅಕ್ಕಪಕ್ಕದವರು ಕೂಡ ಅವರ ಜೊತೆ ಮಾತನಾಡುವುದಿಲ್ಲ.

ಮಿಲನ್ ರಫೀಕ್ ಮಾಡುತ್ತಿರುವ ಸಮಾಜ ಸೇವೆಗಾಗಿ ಅವರ ಸ್ನೇಹಿತರು ಮತ್ತು ಸಂಬಂಧಿಕರು ಅವರನ್ನು ತ್ಯಜಿಸಿದ್ದಾರೆ, ತಮ್ಮ ಮಾರುತಿ ಓಮ್ನಿ ಕಾರನ್ನು ಶವ ಸಾಗಣೆ ವಾಹನವನ್ನಾಗಿಸಿಕೊಂಡಿರುವ ರಫೀಕ್, ಅದರಲ್ಲೆ ಕೋವಿಡ್ ಶವಗಳನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡುತ್ತಾರೆ.

ಇದುವರೆಗೂ ಸುಮಾರು 200 ಶವಗಳ ಅಂತ್ಯ ಸಂಸ್ಕಾರ ಮಾಡಿದ್ದು, ಅದರಲ್ಲಿ 80 ಕೋವಿಡ್ ನಿಂದ ಮೃತಪಟ್ಟ ಶವಗಳಾಗಿವೆ, ಪ್ರತಿಯೊಂದು ಶವವನ್ನು ಗೌರವ ಪೂರ್ಣವಾಗಿ ಬೀಳ್ಕೋಡುಗೆ ನೀಡಬೇಕೆಂಬುದೇ ಅವರ ಉದ್ದೇಶ.

ಕೋವಿಡ್ ಮಾನವೀಯತೆಯನ್ನೇ ಸಾಯಿಸಿದೆ, ತಮ್ಮ ಹತ್ತಿರದವರನ್ನು ಹಾಗೂ ಸಾವಿನ ಅಂಚಿನಲ್ಲಿರುವ ಪೋಷಕರನ್ನು ನೋಡಲು ಸಹ ಮಕ್ಕಳು ನಿರಾಕರಿಸುತ್ತಿದ್ದಾರೆ ಎಂದು ರಫೀಕ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಹೀಗಾಗಿ ಯಾರೂ ಇಲ್ಲದ ಅನಾಥ ಶವಗಳ ಪಾಲಿಗೆ ರಫೀಕ್ ಆಪ್ತರಕ್ಷಕರಾಗಿದ್ದಾರೆ, ಹಿರಿಯೂರು ತಾಲೂಕು ಆಸ್ಪತ್ರೆಯ ಶವಾಗಾರದಿಂದ ಅನಾಥ ಶವಗಳನ್ನು ತಂದು ಅವಕ್ಕೆ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ. ಯಾವುದೇ ಜಾತಿ ಮತ ಧರ್ಮ ನೋಡದೇ ಅಂತಿಮ ವಿಧಿವಿಧಾನ ಪೂರೈಸುವ ರಫೀಕ್ ಅದಕ್ಕಾಗಿ ಯಾವುದೇ ಹಣ ಕೇಳುವುದಿಲ್ಲ, ಅವರಾಗಿಯೇ ನೀಡಿದರೇ ಮಾತ್ರ ಸ್ವೀಕರಿಸುತ್ತಾರೆ, ಅದನ್ನು ಮುಂದಿನ ಶವ ಸಂಸ್ಕಾರಕ್ಕೆ ಬಳಸುತ್ತಾರೆ,

ಶವವನ್ನು ತೆಗೆದುಕೊಳ್ಳುವ ಮೊದಲು ಕೇಳುತ್ತಾರೆ, ಹೂಳಬೇಕೋ ಅಥವಾ ಸುಡಬೇಕೋ ಎಂದು ಕೇಳಿ ಮುಂದಿನ ಕ್ರಮ ಪಾಲಿಸುತ್ತಾರೆ. ಪ್ರತಿ ದಿನ ಸುಮಾರು 2 ದೇಹಗಳ ಅಂತ್ಯ ಸಂಸ್ಕಾರ ಮಾಡುತ್ತಾರೆ, ಚಿತ್ರದುರ್ಗ ಮತ್ತು ಹಿರಿಯೂರಿನಲ್ಲಿ ಎರಡು ಶವ ಸಂಸ್ಕಾರ ಮಾಡಿದ್ದಾಗಿ ತಿಳಿಸಿದ್ದಾರೆ.

ಅವರು ಚಿತ್ರದುರ್ಗ, ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಶವಸಂಸ್ಕಾರಗಳನ್ನು ನಡೆಸಿದ್ದಾರೆ, ಬೆಂಗಳೂರಿನಿಂದ ಕೋಲಾರಕ್ಕೆ ಮತ್ತು ತುಮಕೂರಿನಲ್ಲಿ ಮಧುಗಿರಿಗೆ ಶವಗಳನ್ನು ಸಾಗಿಸಿದ್ದಾರೆ. ಆಂಬ್ಯುಲೆನ್ಸ್‌ಗಳು ಅತಿಯಾದ ದರವನ್ನು ವಿಧಿಸುವ ಕಾರಣ, ಶವವನ್ನು ಎಲ್ಲಿಗೆ ಸಾಗಿಸಬೇಕು ಎಂದು ರಫೀಕ್ ಕೇಳುತ್ತಾನೆ ಮತ್ತು ತನ್ನ ಓಮ್ನಿಯಲ್ಲಿ ಸಾಗಿಸುತ್ತಾರೆ. ಪೆಟ್ರೋಲ್ ಮತ್ತು ರಿಪೇರಿ ವೆಚ್ಚವನ್ನು ಅವರ ಸ್ನೇಹಿತರ ಗುಂಪು ಪೂರೈಸುತ್ತದೆ.

ಈ ಕೆಲಸಕ್ಕಾಗಿ ನಾನು ನನ್ನ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಸಹ ಬಳಸುತ್ತಿದ್ದೇನೆ, ಕುಟುಂಬಗಳು ನೋವಿನಿಂದ ಬಳಲುತ್ತಿರುವಾಗ ನಾನು ಹಣವನ್ನು ಕೇಳಲು ಸಾಧ್ಯವಿಲ್ಲ. ಇದು ಪಾಪದ ಕೆಲಸ ಎಂದು ಹೇಳಿದ್ದಾರೆ. ರಫೀಕ್ ಅವರ ಪತ್ನಿ ಶಹತಾಜ್ ಬೇಗಮ್, ಮಗ ಮೊಹಮ್ಮದ್ ಜುಬೈರ್ ಮತ್ತು ಸೊಸೆ ಮೊಹಮ್ಮದ್ ಅಲಿ ರಫೀಕ್ ಕಾರ್ಯವನ್ನು ಬೆಂಬಲಿಸುತ್ತಾರೆ ಮತ್ತು ಅಂತಿಮ ವಿಧಿ ವಿಧಾನಗಳಿಗೆ ಸಹಕರಿಸುತ್ತಾರೆ. ಅವರು ಫೇಸ್ ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳನ್ನು ಧರಿಸುತ್ತಾರೆ, ಮತ್ತು ಕೆಲಸ ಮುಗಿದ ನಂತರ
ಓಮ್ನಿಯನ್ನು ಸ್ವಚ್ಛ ಗೊಳಿಸುತ್ತಾರೆ. ಒಮ್ಮೆ ಅವರಿಗೆ ಅಲ್ಲಿ ಅವರಿಗೆ ಒಂದು ಲೋಟ ನೀರು ಸಹ ನೀಡಲು ಯಾರೂ ಇರಲಿಲ್ಲ ಎಂದು ಇತ್ತೀಚೆಗೆ ನಡೆದ ಕಹಿ ಅನುಭವನನ್ನು ಹಂಚಿಕೊಂಡಿದ್ದಾರೆ. "ನನ್ನ ಮಗ, ಸೊಸೆ ಮತ್ತು ನಾನು ಕೊನೆಯ ವಿಧಿಗಳನ್ನು ನಡೆಸಿ ಹಿರಿಯೂರಿಗೆ ಹಿಂದಿರುಗಿದ ನಂತರವೇ ನೀರು ಕುಡಿದಿದ್ದೇವೆ" ಎಂದು ಅವರು ಹೇಳಿದರು.  

ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಸಮಾಧಿ ಮತ್ತು ಶವಸಂಸ್ಕಾರಗಳಿಗೆ ಬೇಕಾದರೇ ರಫೀಕ್ ತನ್ನ ಸಂಖ್ಯೆಯನ್ನು - 7259859407 ಸಂಪರ್ಕಿಸುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT