ರಿಕ್ಷಾ ಜೊತೆ ಪ್ರದೀಪ್ 
ವಿಶೇಷ

ಜಗದ್ವಿಖ್ಯಾತ ಲೇಖಕ ಪೌಲೊ ಕೊಯೆಲೊ ಗಮನ ಸೆಳೆದ ಪುಸ್ತಕಪ್ರೇಮಿ ಮಲಯಾಳಿ ರಿಕ್ಷಾ ಡ್ರೈವರ್

ಕೊಚ್ಚಿಯಲ್ಲಿ ರಿಕ್ಷಾ ಡ್ರೈವರ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಪ್ರದೀಪ್, ಪೌಲೊ ಕೊಯೆಲೊ ಅವರ ಅಪ್ಪಟ ಅಭಿಮಾನಿ. ಅವರ ರಿಕ್ಷಾಗೆ ಪೌಲೊ ಕೊಯೆಲೊ ಎಂದೇ ಹೆಸರನ್ನಿಟ್ಟಿದ್ದಾರೆ.

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ರಿಕ್ಷಾ ಡ್ರೈವರ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಪ್ರದೀಪ್ ಎಂಬುವವರಿಗೆ ಜಗದ್ವಿಖ್ಯಾತ ಲೇಖಕ ಪೌಲೊ ಕೊಯೆಲೊ ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿರುವ ಘಟನೆ ನಡೆದಿದೆ. 

ಎಲ್ಲಿಯ ಪೌಲೊ ಕೊಯೆಲೊ, ಎಲ್ಲಿಯ ಕೇರಳದ ರಿಕ್ಷಾ ಡ್ರೈವರ್ ಪ್ರದೀಪ್ ಎಂಬ ಪ್ರಶ್ನೆ ಯಾರಿಗೇ ಆದರೂ ಮೂಡುವುದು ಸಹಜ. 

ರಿಕ್ಷಾ ಡ್ರೈವರ್ ಪ್ರದೀಪ್ ಕೊಚ್ಚಿಯಲ್ಲಿ ಪೌಲೊ ಕೊಯೆಲೊ ಅವರ ಅಪ್ಪಟ ಅಭಿಮಾನಿ. ಅವರ ರಿಕ್ಷಾಗೆ ಪೌಲೊ ಕೊಯೆಲೊ ಎಂದೇ ಹೆಸರನ್ನಿಟ್ಟಿದ್ದಾರೆ. ರಿಕ್ಷಾ ಹಿಂದುಗಡೆ ಪೌಲೊ ಕೊಯೆಲೊ ಅಂತ ಬರೆದರೆ, ಮುಂದುಗಡೆ ಕೊಯೆಲೊ ಅವರ ಜಗತ್ಪ್ರಸಿದ್ಧ ಪುಸ್ತಕ ಆಲ್ಕೆಮಿಸ್ಟ್ ಹೆಸರನ್ನು ಹಾಕಿಕೊಂದಿದ್ದಾರೆ. 

ಪ್ರದೀಪ್ ರಿಕ್ಷಾ ಫೊಟೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಈ ಫೋಟೊ ಪೌಲೊ ಕೊಯೆಲೊ ಅವರ ಕಣ್ಣಿಗೂ ಬಿದ್ದಿತ್ತು. ಒಡನೆಯೇ ಅವರು ಪ್ರದೀಪ್ ಅವರಿಗೆ ಧನ್ಯಾವದ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಡಿಕೆ ಶಿವಕುಮಾರ್ ಪತ್ರ!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video