ವಿಶೇಷ

ಉಡುಪಿ: ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗೆ ಹುಲಿ ವೇಷ ಹಾಕಲಿದ್ದಾರೆ ವಿಕಲಚೇತನರು!

Ramyashree GN

ಉಡುಪಿ: ದೇವಾಲಯಗಳ ನಾಡು ಎಂದು ಹೆಸರಾಗಿರುವ ಉಡುಪಿಯು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಂಬಲಿಸುವ ಸಂಪ್ರದಾಯವನ್ನು ಹೊಂದಿದೆ. ಯಕ್ಷಗಾನದ ಶ್ರೀಮಂತ ವಿದ್ವತ್ಪೂರ್ಣ ಕಲಾ ಪ್ರಕಾರವಾಗಲಿ ಅಥವಾ ಉತ್ಸಾಹಭರಿತ ಹುಲಿ ವೇಷವಾಗಲಿ, ಉಡುಪಿಯ ಈ ಸ್ಥಳೀಯ ಜಾನಪದವು ಈ ನೃತ್ಯ ಪ್ರಕಾರಗಳೊಂದಿಗೆ ಶಾಶ್ವತವಾದ ನಂಟನ್ನು ಹೊಂದಿದೆ.

ಉಡುಪಿಯಲ್ಲಿ ವಿಜೃಂಭಣೆಯಿಂದ ಆಚರಿಸಲ್ಪಡುವ ಕೃಷ್ಣ ಜನ್ಮಾಷ್ಟಮಿಯು ಈ ವರ್ಷ ಆಗಸ್ಟ್ 19 ರಂದು ನಡೆಯಲಿದೆ. ಈ ವೇಳೆ ಏಳು ಮಂದಿ ವಿಕಲಚೇತನರ ತಂಡವು 'ಹುಲಿ ನೃತ್ಯ'ವನ್ನು ಪ್ರದರ್ಶಿಸುವ ಮೂಲಕ ಆಚರಣೆಗೆ ಹೆಚ್ಚಿನ ಮೆರುಗನ್ನು ನೀಡಲು ಸಿದ್ಧವಾಗಿದೆ.

ವಾಚ್‌ಮನ್ ಆಗಿರುವ ಶ್ರೀನಿವಾಸ ಪೂಜಾರಿ (50), ಟೈಲರ್ ಪ್ರಶಾಂತ್ ಆಚಾರಿ (35), ವಿಜಯ್ ಕುಮಾರ್ (50), ಕೃಷ್ಣ ಪೂಜಾರಿ (45), ರವಿ ಶೆಟ್ಟಿ (30), ಜಗದೀಶ್ ಭಟ್ (37) ಮತ್ತು ರೈತರಾಗಿರುವ ಶೇಖರ್ ಮರಕಾಲ (45) ಸೇರಿ ಹುಲಿ ನೃತ್ಯ ಮಾಡಲು ಆನಂದ ಶೇರಿಗಾರ್ ನಿಟ್ಟೂರು ಎಂಬುವವರ ಬಳಿ 15 ದಿನಗಳ ತರಬೇತಿಯನ್ನು ಪಡೆಯುತ್ತಿದ್ದಾರೆ.

ಶೇರಿಗಾರ್ ಅವರು ಈ ವಿಕಲಚೇತನರು ಮತ್ತು ಉತ್ಸಾಹಿ ನೃತ್ಯಗಾರರಿಗೆ ಸಾಂಪ್ರದಾಯಿಕ ಕಲೆಯ ಉತ್ಸಾಹ ಮತ್ತು ಘರ್ಜನೆಗೆ ಧಕ್ಕೆಯಾಗದ ರೀತಿಯಲ್ಲಿ ತರಬೇತಿಯನ್ನು ಕಸ್ಟಮೈಸ್ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಜಗದೀಶ್ ಭಟ್ ಅವರು, ಇತರ ದೈಹಿಕ ವಿಕಲಾಂಗ ಉತ್ಸಾಹಿಗಳೊಂದಿಗೆ ಹುಲಿಯಂತೆ ಬಣ್ಣ ಹಚ್ಚುವ ಮತ್ತು ನೃತ್ಯ ಮಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಬಳಿಕ ಅವರು, ಮಣಿಪಾಲದ ಎನ್‌ಜಿಒ ಪೀಸ್ ಫೌಂಡೇಶನ್‌ನ ಅಧ್ಯಕ್ಷರಾದ ಡಾ.ಸೋನಿಯಾ ಅವರನ್ನು ಸಂಪರ್ಕಿಸಿದರು. ಸೋನಿಯಾ ಅವರು ಭಟ್ ಮತ್ತು ಇತರರನ್ನು ಹುಲಿ ನೃತ್ಯಕ್ಕೆ ಸಜ್ಜಾಗುವಂತೆ ಪ್ರೇರೇಪಿಸಿದರು.

ಫೌಂಡೇಶನ್‌ನ ಕಾರ್ಯದರ್ಶಿಯೂ ಆಗಿರುವ ಜಗದೀಶ್ ಭಟ್ ಮಾತನಾಡಿ, 60 ರಿಂದ 75 ಪ್ರತಿಶತದಷ್ಟು ಅಂಗವೈಕಲ್ಯ ಹೊಂದಿರುವ ಜನರು ನಡೆಯಲು ಸಹ ಕಷ್ಟವಾಗಿರುವಾಗ, ನೃತ್ಯವನ್ನು ಅಭ್ಯಾಸ ಮಾಡುವುದು ಸುಲಭವಲ್ಲ. ಆದಾಗ್ಯೂ, ತಂಡದ ಸದಸ್ಯರು ಸವಾಲನ್ನು ಸ್ವೀಕರಿಸಿದರು ಮತ್ತು ತರಬೇತಿಯ ಸಮಯದಲ್ಲಿ ಉತ್ತಮವಾಗಿ ಕಲಿತರು. ನಿಟ್ಟೂರಿನಲ್ಲಿ ಪ್ರತಿದಿನ ಸಂಜೆ 4 ರಿಂದ 6 ರವರೆಗೆ ತಂಡಕ್ಕೆ ತರಬೇತಿ ನೀಡಲಾಗುತ್ತಿದ್ದು, ಉತ್ಸವದ ಹಿಂದಿನ ದಿನದವರೆಗೆ ಅವರು ತರಭೇತಿಯನ್ನು ಮುಂದುವರೆಸುತ್ತಾರೆ ಎಂದು ತಿಳಿಸಿದ್ದಾರೆ.

ಡಾ. ಸೋನಿಯಾ ಅವರು ನಮ್ಮೆಲ್ಲರ ಉತ್ಸಾಹವನ್ನು ಮೆಚ್ಚಿದಾಗ, ನಾವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇವೆ ಎನಿಸಿತು. ಈ ಹಿಂದೆಯೂ ನಮ್ಮ ತಂಡವು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಹುಲಿ ಕುಣಿತವನ್ನು ಪ್ರದರ್ಶಿಸಿತ್ತು. ಆದರೆ, ಈ ಬಾರಿ ಬರುವ ಸಂಪೂರ್ಣ ಆದಾಯವನ್ನು ಬಡ ರೋಗಿಗಳಿಗೆ ನೀಡುತ್ತಿದೆ ಶೇ 75ರಷ್ಟು ಅಂಗವೈಕಲ್ಯವನ್ನು ಹೊಂದಿರುವ ಭಟ್ ಹೇಳಿದರು.

SCROLL FOR NEXT