ಭಾವೈಕ್ಯತೆಯ ಸಂಗಮ: ಅನಾಥ ಹಿಂದೂ ಹುಡುಗಿಯ ಮದುವೆಗೆ ಆರ್ಥಿಕ ಸಹಾಯ ಮಾಡಿದ ಮುಸ್ಲಿಂ ಸಮುದಾಯ 
ವಿಶೇಷ

ಭಾವೈಕ್ಯತೆಯ ಸಂಗಮ: ಅನಾಥ ಹಿಂದೂ ಹುಡುಗಿಯ ಮದುವೆಗೆ ಮುಸ್ಲಿಂ ಸಮುದಾಯದ ಜನರಿಂದ ಆರ್ಥಿಕ ಸಹಾಯ

ಅಲ್ವಾರ್ ಜಿಲ್ಲೆಯ ರಾಮಗಢ ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯದ ಸುಂದರ ಸಂಬಂಧ ಕಂಡುಬಂದಿದೆ. ರಾಜಸ್ಥಾನದ ಈ ಪಟ್ಟಣದಲ್ಲಿರುವ ಮುಸ್ಲಿಂ ಸಮುದಾಯದವರು ಇತ್ತೀಚೆಗೆ ಅನಾಥ ಹಿಂದೂ ಹುಡುಗಿಯ ವಿವಾಹವನ್ನು ಆಯೋಜಿಸಲು ಹೆಚ್ಚಿನ ನೆರವು ನೀಡಿದ್ದಾರೆ.

ಜೈಪುರ: ಅಲ್ವಾರ್ ಜಿಲ್ಲೆಯ ರಾಮಗಢ ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯದ ಸುಂದರ ಸಂಬಂಧ ಕಂಡುಬಂದಿದೆ. ರಾಜಸ್ಥಾನದ ಈ ಪಟ್ಟಣದಲ್ಲಿರುವ ಮುಸ್ಲಿಂ ಸಮುದಾಯದವರು ಇತ್ತೀಚೆಗೆ ಅನಾಥ ಹಿಂದೂ ಹುಡುಗಿಯ ವಿವಾಹವನ್ನು ಆಯೋಜಿಸಲು ಹೆಚ್ಚಿನ ನೆರವು ನೀಡಿದ್ದಾರೆ.

ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಯುವತಿಯ ಮದುವೆಯಲ್ಲಿ ಮುಸ್ಲಿಂ ಸಮುದಾಯದ ಜನರು ಮೈರಾ ಅಥವಾ ಭಾತ್ ಎಂಬ ವಿಶೇಷ ಸಮಾರಂಭಕ್ಕೆ ಸೋದರ ಮಾವನ ಸ್ಥಾನವಾಗಿ ಆಗಮಿಸಿದರು. ಯುವತಿಗೆ 31,000 ರೂಪಾಯಿ ಮತ್ತು ಇತರ ಉಡುಗೊರೆಗಳನ್ನು ನೀಡಿದ್ದಲ್ಲದೆ, ಮದುವೆಗೆ ಊಟದ ವ್ಯವಸ್ಥೆ ಮಾಡಲು ಸಹಾಯ ಮಾಡಿದರು.

ರಾಮಗಢ ನಿವಾಸಿಯಾದ ವಧು ಆರುಷಿ ಕೇವಲ ಒಂದು ವರ್ಷದವಳಾಗಿದ್ದಾಗ, ಆಕೆಯ ಪೋಷಕರು ನಿಧನರಾಗಿದ್ದರು.

ಬಡತನದಲ್ಲಿದ್ದರೂ, ಆಕೆಯ ಚಿಕ್ಕಪ್ಪ ಜಯಪ್ರಕಾಶ್ ಜಂಗಿದ್ ಅವರು ಆರುಷಿಯನ್ನು ಬೆಳೆಸಿದರು ಮತ್ತು ಎಂಎ ವರೆಗೆ ಆಕೆಗೆ ಶಿಕ್ಷಣಕ್ಕೆ ಸಹಾಯ ಮಾಡಿದರು. ಕಳೆದ ಶುಕ್ರವಾರ, ಆಕೆಯ ಮದುವೆಯು ಧೋಲಿ ದುಬ್‌ನ ನಿವಾಸಿ ದಾಲ್‌ಚಂದ್‌ನೊಂದಿಗೆ ನಿಶ್ಚಯವಾಗಿತ್ತು. ಈ ಮಾಹಿತಿ ಅಂಜುಮನ್ ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ಪಂಚಾಯತಿ ಸಮಿತಿ ಅಧ್ಯಕ್ಷ ನಸ್ರೂಖಾನ್ ಅವರಿಗೆ ತಲುಪಿದಾಗ, ಅವರು ಮತ್ತು ಸಮಿತಿಯು ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆರುಷಿಯ ಮೈರಾವನ್ನು ನೆರವೇರಿಸಲು ಮುಂದಾದರು.

ಸದಸ್ಯರು ಆರುಷಿಯ ಮನೆಗೆ ಬಂದು ಪೂರ್ಣ ವಿಧಿವಿಧಾನಗಳೊಂದಿಗೆ ಆಕೆಯ ಮದುವೆಯನ್ನು ನಡೆಸಿದರು. ಅವರು ಆರುಷಿಯ ಚಿಕ್ಕಮ್ಮನನ್ನು ತಮ್ಮ ಸಹೋದರಿ ಎಂದು ಪರಿಗಣಿಸಿದರು ಮತ್ತು ಆರುಷಿಯನ್ನು ಚುನಾರಿಯಿಂದ ಮುಚ್ಚಿದರು.

ಮದುವೆಗೆ ಇತರೆ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದ್ದು, ಸಮಾರಂಭದ ವ್ಯವಸ್ಥೆಗೆ ತಗಲುವ ವೆಚ್ಚವನ್ನು ಅಂಜುಮನ್ ಎಜುಕೇಶನ್ ಸೊಸೈಟಿಯೇ ಭರಿಸಿತ್ತು. ನಸ್ರು ಖಾನ್ ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ವಧು ಆರುಷಿಯನ್ನು ಆಶೀರ್ವದಿಸಿದರು.

'ಸಣ್ಣ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡ ಯುವತಿ ಎಂಬುದು ತಿಳಿಯಿತು. ಆರುಷಿಯನ್ನು ಆಕೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಬೆಳೆಸಿದರು. ಅವರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ನಾವೇ ಮುಂದೆ ನಿಂತು ಹಿಂದೂ ಸಂಪ್ರದಾಯದ ಪ್ರಕಾರ ಎಲ್ಲಾ ಅಗತ್ಯಗಳನ್ನು ಪೂರೈಸಿದ್ದೇವೆ' ಎನ್ನುತ್ತಾರೆ ನಸ್ರು ಖಾನ್.

ಚುನಾವಣೆಗಳು ಹೆಚ್ಚಾಗಿ ಹಿಂದೂ-ಮುಸ್ಲಿಂ ವಿಭಜನೆಯ ಆಧಾರದ ಮೇಲೆ ನಡೆಯಲ್ಪಡುವುದರಿಂದ ನಮ್ಮ ರಾಮಗಢದಲ್ಲಿ ಕೋಮುವಾದದ ವಾತಾವರಣವಿದ್ದರೂ, ನಾವು ಇದನ್ನು ನಮ್ಮ ಗಂಗಾ ಜಮ್ನಿ ತೆಹಜೀಬ್‌ನ ಭಾಗವಾಗಿ ಮಾಡಿದ್ದೇವೆ. ಇದು ತೆಹಜೀಬ್ (ಸಂಸ್ಕೃತಿ) ಅನ್ನು ಜೀವಂತವಾಗಿಡುವ ಪ್ರಯತ್ನವಾಗಿದೆ. ಎರಡು ಧರ್ಮಗಳ ನಡುವಿನ ಅಂತರ ಕಡಿಮೆಯಾಗಿ, ನಮ್ಮ ಸಹೋದರತ್ವ ಹೆಚ್ಚಲಿ ಎಂದು ಹಾರೈಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ. ಇದು ಧರ್ಮದ ವಿಚಾರವಲ್ಲ. ಬದಲಿಗೆ ಬಡ ಕುಟುಂಬದ ಹುಡುಗಿಗೆ ಮಾನವೀಯತೆಯ ನೆಲೆಯಲ್ಲಿ ಸಹಾಯ ಮಾಡುವುದರಿಂದ ಸಂತೋಷವಾಗುತ್ತದೆ ಎಂದು ತಿಳಿಸಿದರು.

ಬೀಳ್ಕೊಡುವ ಸಮಯದಲ್ಲಿ, ಆರುಷಿ ತನ್ನ ಹಿತೈಷಿಗಳನ್ನು ತಬ್ಬಿಕೊಂಡಳು. ಆಕೆಯ ಚಿಕ್ಕಪ್ಪ ಜಯಪ್ರಕಾಶ್ ಜಂಗಿದ್, 'ಬಡತನದ ನಡುವೆಯೂ ಆರುಷಿಯನ್ನು ಎಂಎ ವರೆಗೆ ಓದಿಸಿದೆವು ಮತ್ತು ನಾನು ಸಾಲ ಪಡೆದು ನನ್ನ ಮಗಳ ಮದುವೆ ಮಾಡುತ್ತಿದ್ದೆವು. ಆದರೆ, ಮೈರಾ ನಡೆಸಿಕೊಡಲು ಬಂದ ಮುಸ್ಲಿಂ ಸಮಾಜದರು ನನ್ನ ಅರ್ಧದಷ್ಟು  ಆತಂಕವನ್ನು ದೂರ ಮಾಡಿದರು. ನಾನು ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು' ಎಂದರು.

ಸಮಿತಿಯ ಸದಸ್ಯರು ತಮ್ಮ ತಮ್ಮಲ್ಲೇ ಹಣ ಸಂಗ್ರಹಿಸುವ ಮೂಲಕ ಮದುವೆ ವೆಚ್ಚ ಭರಿಸಲಾಗದ ಐದು ಹಿಂದೂ ಕುಟುಂಬಗಳ ಹೆಣ್ಣು ಮಕ್ಕಳಿಗೆ ಇದೇ ರೀತಿ ಮಾಡಿದ್ದಾರೆ. ಈ ಹಿಂದೆಯೂ ಅವರು 560 ಮುಸ್ಲಿಂ ಹೆಣ್ಣುಮಕ್ಕಳ ಸಾಮೂಹಿಕ ವಿವಾಹಗಳನ್ನು ಆಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT