ವಿಶೇಷ

ಹುಬ್ಬಳ್ಳಿ: ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಪಿಎಸ್ ಐ; ಸಾಮರಸ್ಯ ಸಾರಿದ್ದಕ್ಕೆ ಎಲ್ಲೆಡೆ ಪ್ರಶಂಸೆ!

Shilpa D

ಹುಬ್ಬಳ್ಳಿ: ಜಿಲ್ಲೆಯ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜೆಎಂ ಕಲಿಮಿರ್ಚಿ, ಕೇಸರಿ ಕ್ಯಾಪ್ ಧರಿಸಿ  ಗಣೇಶ ಮೂರ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಠಾಣೆಯಲ್ಲಿ ಪ್ರತಿಷ್ಠಾಪಿಸಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಪಿಎಸ್ ಐ ಕಲಿ ಮಿರ್ಚಿ, 2021 ರಲ್ಲಿ ಸಹ ಅವರು ತಮ್ಮ ಪೊಲೀಸ್ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವಾಗ ಮುಂಚೂಣಿಯಲ್ಲಿದ್ದರು. ಕರ್ನಾಟಕದ ಹಲವು ಭಾಗಗಳಲ್ಲಿ ಕೋಮುದಳ್ಳುರಿಯಲ್ಲಿ ಕುದಿಯುತ್ತಿರುವ ಬೆನ್ನಲ್ಲೇ ಕಲಿಮಿರ್ಚಿ ಅವರ  ಧಾರ್ಮಿಕ ಸೌಹಾರ್ದತೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಇನ್‌ಸ್ಪೆಕ್ಟರ್ ಕಲಿಮಿರ್ಚಿ, ಕೋಮು ಸೌಹಾರ್ದತೆ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದಿದ್ದಾರೆ. ಹಿಂದೂ ಹಬ್ಬಗಳಲ್ಲಿ ಭಾಗವಹಿಸಲು ನಾನು ಎಂದಿಗೂ ಹಿಂಜರಿಯುವುದಿಲ್ಲ ಎಂದು ಹೇಳಿದರು.

"ನಾನು ಹುಟ್ಟಿನಿಂದ ಮುಸ್ಲಿಂ, ಆದರೆ ನಾನು ನನ್ನ ಮನೆಯಿಂದ ಹೊರಡುವಾಗ ನಾನು ಭಾರತೀಯನೇ ಮತ್ತು ಹೆಚ್ಚೇನೂ ಇಲ್ಲ. ನಾನು ಕೊಪ್ಪಳ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದಿದ್ದೇನೆ, ಅಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಗಣೇಶ ಹಬ್ಬವನ್ನು ಆಚರಿಸುತ್ತಾರೆ.  ಪೊಲೀಸ್ ಕರ್ತವ್ಯ,ದ ವೇಳೆ ನಾನು ಹಲವು ಹಬ್ಬಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ, ಆದರೆ ನನ್ನೂರಿನಲ್ಲಿ ನಡೆಯುವ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯಲ್ಲಿ ಪಾಲ್ಗೊಳ್ಳಲು  ಗ್ರಾಮಕ್ಕೆ ತಪ್ಪದೇ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದರು.

ಇತ್ತೀಚೆಗೆ  ಮೇಣದಬತ್ತಿಯ ತಯಾರಿಕೆ ಘಟಕದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಕಟ್ಟಡದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. ಅಕ್ರಮವಾಗಿ ನಡೆಸುತ್ತಿದ್ದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಕಾರ್ಮಿಕರು ದುರಾದೃಷ್ಠವಶಾತ್ ಸಾವನ್ನಪ್ಪಿದ್ದಾರೆ. ಕಲಿಮಿರ್ಚಿ ಮೂವರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದರು.

ಕಲಿಮಿರ್ಚಿ ಕೊಪ್ಪಳ ಜಿಲ್ಲೆಯ ಮಂಗೂರು ಗ್ರಾಮದವರು, ಇಲ್ಲಿ ತಲೆಮಾರುಗಳಿಂದ ಹಿಂದೂಗಳು ದರ್ಗಾ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಹಲವಾರು ಮುಸ್ಲಿಮರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಮತ್ತು ವಾರ್ಷಿಕ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ದೇವಾಲಯದ ರಥವನ್ನು ಎರಡೂ ಸಮುದಾಯದ ಜನರು ಎಳೆಯುತ್ತಾರೆ.

ನಾವೆಲ್ಲರೂ ಸಹೋದರರು ಮತ್ತು ಸೌಹಾರ್ದತೆಯಿಂದ ಬಾಳುವುದು ನಮ್ಮ ಮುಖ್ಯ ಅವಶ್ಯಕತೆಯಾಗಿದೆ, ಠಾಣೆಯ ಮುಖ್ಯಸ್ಥನಾಗಿ ನಾನು ತೊಡಗಿಸಿಕೊಂಡಿದ್ದಕ್ಕಾಗಿ ಅನೇಕ ಸಿಬ್ಬಂದಿ ಸಂತೋಷಪಟ್ಟಿದ್ದಾರೆ, ಇದು ತುಂಬಾ ಖುಷಿಯಾಗಿದೆ.  ಪೊಲೀಸ್ ಠಾಣೆ ಸಿಬ್ಬಂದಿಗಳೊಂದಿಗೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದಿದ್ದೇವೆ ಎಂದು ಹೇಳಿದರು.

SCROLL FOR NEXT