ವಿಶೇಷ

ವಯಸ್ಸು ಕೇವಲ ಅಂಕಿಯಷ್ಟೇ. 106ನೇ ವಯಸ್ಸಿನಲ್ಲಿ 61ನೇ ಬಾರಿ ರೈಲ್ವೆ ಯೂನಿಯನ್ ಚುನಾವಣೆಯಲ್ಲಿ ಗೆದ್ದ ಕನ್ಹಯ್ಯಾ ಲಾಲ್ ಗುಪ್ತಾ!

Nagaraja AB

ಲಖನೌ: ವಯಸ್ಸು ಎಂಬುದು ಕೇವಲ ಅಂಕಿಯಯಷ್ಟೇ. ಕನ್ಹಯ್ಯಾ ಲಾಲ್ ಗುಪ್ತಾ ಅವರು 106ನೇ ವಯಸ್ಸಿನಲ್ಲಿ ಈಶಾನ್ಯ ರೈಲ್ವೆ ಮಜ್ದೂರ್ ಯೂನಿಯನ್ ನ ಪ್ರಧಾನ ಕಾರ್ಯದರ್ಶಿಯಾಗಿ 61ನೇ ಬಾರಿಗೆ ಚುನಾಯಿತರಾಗಿದ್ದಾರೆ.

ಗೊರಖ್ ಪುರದ ಈ ಶತಾಯುಷಿ ಈಗಲೂ ಟ್ರೇಡ್ ಯೂನಿಯನ್ ನಲ್ಲಿ ಸಕ್ರೀಯರಾಗಿದ್ದಾರೆ. ವಿಶ್ವದ ಅತ್ಯಂತ ಹಿರಿಯ ಸಕ್ರಿಯ ಟ್ರೇಡ್ ಯೂನಿಯನ್ ನಾಯಕರಾಗಿ ಗುಪ್ತಾ ಅವರ ಹೆಸರನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನೆಸ್ ಬುಕ್‌ನಲ್ಲಿ ಸೇರಿಸಲು ಎನ್ ಇಆರ್ ಎಂಯು ನ ಸದಸ್ಯರು  ತಯಾರಿ ನಡೆಸುತ್ತಿದ್ದಾರೆ.

ಯೂನಿಯನ್ ಟ್ರೇಡ್ ನಲ್ಲಿ ಮುಂದುವರೆಯಲು ಶಿಸ್ತು ಮತ್ತು ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ನಾರಾಯಣ್ ಅವರೊಂದಿಗಿನ ಹಿಂದಿನ ಒಡನಾಟದಿಂದ ಪಡೆದ  ಸ್ಫೂರ್ತಿ ಮತ್ತು ನೈತಿಕ ಶಕ್ತಿ" ಕಾರಣ ಎಂದು ಹೇಳುತ್ತಾರೆ. ಈಶಾನ್ಯ ರೈಲ್ವೆ ಮಜ್ದೂರ್ ಯೂನಿಯನ್ ಸದಸ್ಯರ ನಡುವೆ ತಾನೂ ಹೊಸ ಚೈತನ್ಯ ಪಡೆದುಕೊಂಡಿದ್ದಾಗಿ ಹೇಳುವ ಗುಪ್ತಾ, ಅವರು, ಯೂನಿಯನ್ ಕಚೇರಿಯೇ ನನ್ನ ಏಕೈಕ ನಿವಾಸ ಹಾಗೂ ಅದರ ಸದಸ್ಯರೇ ನನ್ನ ಕುಟುಂಬ ಎನ್ನುತ್ತಾರೆ.

1946 ರಲ್ಲಿ ರೈಲ್ವೆಗೆ ಸೇರಿದ ಗುಪ್ತಾ ಅವರು, ತದನಂತರ ಬಹುಬೇಗ ಯೂನಿಯನ್ ಸದಸ್ಯರಾದರು. ಪ್ರತಿ ವರ್ಷ ಅದರ ಪ್ರಧಾನ ಕಾರ್ಯದರ್ಶಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಅವರು 1981 ರಲ್ಲಿ ನಿವೃತ್ತರಾದರೂ ಸದಸ್ಯರ ಧ್ವನಿಯಾಗಿ ಮುಂದುವರೆದರು. ಗುಪ್ತಾ ಅವರ ವೃತ್ತಿಜೀವನದ ಅವಧಿಯಲ್ಲಿ,  ನಾಲ್ಕು ಬಾರಿ ಸೇವೆಯಿಂದ ವಜಾಗೊಳಿಸಲಾಯಿತು ಮತ್ತು ಸುಮಾರು ಒಂದು ತಿಂಗಳ ಕಾಲ ಜೈಲಿಗೆ ಕಳುಹಿಸಲಾಯಿತು. ಆದರೆ ಅವರ ಯೂನಿಯನ್ ಟ್ರೇಡ್ ಯೂನಿಯನ್ ಚಟುವಟಿಕೆಗಳಿಂದ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ.

ಗುಪ್ತಾ ಅವರು ಬಹಳ ಚುರುಕುತನ ಹೊಂದಿದ್ದು, ಚಾಚು ತಪ್ಪದೇ ದಿನಚರಿ ಪಾಲಿಸುತ್ತಾರೆ.  ಬೇಗನೆ ಎದ್ದೇಳುವುದು, ದಿನವಿಡೀ ಕೆಲಸ ಮಾಡುವುದು ಮತ್ತು ಮಧ್ಯರಾತ್ರಿಯ ಸುಮಾರಿಗೆ ಮಲಗುವುದು ಅವರ ದಿನಚರಿಯಾಗಿದೆ. ಅವರು ಪ್ರತಿದಿನ ಮಸಾಲೆ ಇಲ್ಲದ ಸ್ವಲ್ಪ ದಾಲ್ ನೊಂದಿಗೆ ಎರಡು ಚಪಾತಿಗಳನ್ನು ಸೇವಿಸುತ್ತಾರೆ ಎಂದು ಯೂನಿಯನ್ ಸದಸ್ಯರೊಬ್ಬರು ತಿಳಿಸಿದರು. 

SCROLL FOR NEXT