ಬೆಂಗಳೂರು: ಪ್ರಕೃತಿ ಮತ್ತು ಮನುಷ್ಯನಿಗೆ ಅವಿನಾಭಾವ ಸಂಬಂಧ. ಮನುಷ್ಯ ಪ್ರಕೃತಿಯ ಮೇಲೆ ಅವಲಂಬಿತ. ಈ ಭೂಮಿಯ ಮೇಲಿನ ಜೀವಸಂಕುಲ ಪ್ರಕೃತಿಗೆ ಪೂರಕವಾಗಿಯೇ ಬದುಕಬೇಕು ಹೊರತು ಜೀವನ ಪ್ರಕ್ರಿಯೆಯಲ್ಲಿ ಪ್ರಕೃತಿಗೆ ಹಾನಿ ಮಾಡಿದರೆ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗುತ್ತದೆ.
ಮನುಷ್ಯನ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸುವುದು ಉತ್ತಮ. ಮೋಟೋ ಟೂರರ್ಸ್ ಮತ್ತು ಬೈಕಿಂಗ್ ಕಮ್ಯುನಿಟಿ ಫೆಡರೇಶನ್ ತಮ್ಮ ವಾರ್ಷಿಕ ಉಪಕ್ರಮವಾದ ಸೇವ್ ಅರ್ಥ್ ರೈಡ್ (SER) ನ್ನು ಆಗಸ್ಟ್ 6 ರಂದು ದೇವನಹಳ್ಳಿಯ ಶ್ರೀ ರಕುಮ್ ಬ್ಲೈಂಡ್ ಶಾಲೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಆಯೋಜಿಸಿದರು.
ಮಾಜಿ ಪೊಲೀಸ್ ಅಧಿಕಾರಿ, ರಾಜಕಾರಣಿ ಭಾಸ್ಕರ್ ರಾವ್, ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಮತ್ತು ಅಧುರಾ ಮತ್ತು ದಿ ನೈಟ್ ಮ್ಯಾನೇಜರ್ ಸರಣಿಯಲ್ಲಿ ಕಾಣಿಸಿಕೊಂಡಿರುವ ಬಾಲ ನಟ ಶೆರ್ನಿಕ್ ಅರೋರಾ ಭಾಗವಹಿಸಿದ್ದರು.
ಏನಿದು SER?: 2019ರಲ್ಲಿ ಆರಂಭವಾದ ಈ ಕಾರ್ಯಕ್ರಮ ಇಂದು ದೇಶದ 85ಕ್ಕೂ ಹೆಚ್ಚು ನಗರಗಳಿಗೆ ಮತ್ತು ಮಲೇಷ್ಯಾ ಮತ್ತು ಸಿಂಗಾಪುರದಂತಹ ಇತರ ದೇಶಗಳಿಗೆ ವಿಸ್ತರಿಸಿದೆ. ಪರಿಸರಕ್ಕೆ ಮರಳಿ ಕೊಡುವ ಪ್ರಯತ್ನ ಇದಾಗಿದೆ ಎನ್ನುತ್ತಾರೆ ಫೆಡರೇಶನ್ ಸಂಸ್ಥಾಪಕ ಆಶಿಶ್ ಸಿಂಗ್. ಬೈಕಿಂಗ್ ಸಮುದಾಯವಾಗಿ ನಾವು ಸಾಕಷ್ಟು ವಿವಿಧ ಸ್ಥಳಗಳಿಗೆ ಹೋಗುತ್ತೇವೆ ಎನ್ನುತ್ತಾರೆ.
ಏನಿದು ಕಾರ್ಯಕ್ರಮ: ಬೈಕ್ ಮೂಲಕ ಟ್ರಿಪ್, ಪ್ರವಾಸ ಹೋದ ಕಡೆಯೆಲ್ಲಾ ಇದರ ಕಾರ್ಯಕರ್ತರು ಗಿಡ ನೆಡುತ್ತಾರೆ. ಗಿಡ ನೆಡುವ ಬಗ್ಗೆ ಪರಿಸರ ರಕ್ಷಣೆ ಬಗ್ಗೆ ಜಾಗೃತರಾಗಿರುವುದು ನಮ್ಮ ಕರ್ತವ್ಯ. ಭಾರತ ದೇಶವೊಂದರಲ್ಲಿಯೇ 300 ಕ್ಕೂ ಹೆಚ್ಚು ಮೋಟಾರ್‌ಸೈಕಲ್ ಕ್ಲಬ್‌ಗಳು ಪ್ರತಿ ವರ್ಷ ಆಗಸ್ಟ್‌ನಲ್ಲಿ SER ನಲ್ಲಿ ಭಾಗವಹಿಸುತ್ತವೆ. ಗಿಡ ನೆಡಲು ಮಳೆಗಾಲ ಉತ್ತಮವಾಗಿರುವುದರಿಂದ ನಾವು ಮಳೆಗಾಲವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ.
ಸಮುದಾಯವು ಸುಮಾರು 700ರಿಂದ ಸಾವಿರ ಗಿಡಗಳನ್ನು ನೆಡಲು ಯೋಜಿಸುತ್ತಿದೆ. ಬೆಂಗಳೂರು ಹೊರವಲಯದಲ್ಲಿ ಆರು ಎಕರೆ ಸರ್ಕಾರಿ ಭೂಮಿಯಲ್ಲಿ ಗಿಡ ನೆಟ್ಟಿದ್ದೇವೆ. ಒಂದು ಭಾಗವಾಗಿದ್ದು ಅದು ಸಂಪೂರ್ಣ ಬಂಜರು. ಹತ್ತಿರದ ಗ್ರಾಮಸ್ಥರು ಕೆಲವು ಗಿಡಗಳನ್ನು ನೆಟ್ಟಿದ್ದರು. ಈಗ ನಾವು ಅದನ್ನು ಮುಂದುವರಿಸುತ್ತೇವೆ. ಮುಂದಿನ ಮೂರು ವರ್ಷಗಳ ಕಾಲ ನಾವು ಸಸಿಗಳನ್ನು ನೋಡಿಕೊಳ್ಳುತ್ತೇವೆ ಎಂದು ನಾವು ಅರಣ್ಯ ಇಲಾಖೆಯೊಂದಿಗೆ ಅಧಿಕೃತ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಸಿಂಗ್ ಹೇಳಿದರು.