ಕರ್ನಾಟಕದಲ್ಲಿ 2 ಹೊಸ ಏಡಿ ಪ್ರಭೇದ ಪತ್ತೆ 
ವಿಶೇಷ

ಕರ್ನಾಟಕದಲ್ಲಿ 2 ಹೊಸ ಏಡಿ ಪ್ರಭೇದ ಪತ್ತೆ, ಭಾರತದಲ್ಲಿನ ಏಡಿ ಪ್ರಭೇದಗಳ ಸಂಖ್ಯೆ 75ಕ್ಕೆ ಏರಿಕೆ

ಭಾರತದ ಜೈವಿಕ ವೈವಿಧ್ಯತೆಯ ಪಟ್ಟಿಗೆ ಹೊಸ ಜಾತಿಯ ಏಡಿಗಳು ಸೇರ್ಪಡೆಯಾಗುತ್ತಲೇ ಇದ್ದು, ಇದೀಗ ಕರ್ನಾಟಕದಲ್ಲಿ 2 ಹೊಸ ಏಡಿ ಪ್ರಭೇದ ಪತ್ತೆಯಾಗಿದ್ದು ಆ ಮೂಲಕ ಭಾರತದಲ್ಲಿನ ಏಡಿ ಪ್ರಬೇದಗಳ ಸಂಖ್ಯೆ 75ಕ್ಕೇರಿಕೆಯಾಗಿದೆ.

ಕಾರವಾರ: ಭಾರತದ ಜೈವಿಕ ವೈವಿಧ್ಯತೆಯ ಪಟ್ಟಿಗೆ ಹೊಸ ಜಾತಿಯ ಏಡಿಗಳು ಸೇರ್ಪಡೆಯಾಗುತ್ತಲೇ ಇದ್ದು, ಇದೀಗ ಕರ್ನಾಟಕದಲ್ಲಿ 2 ಹೊಸ ಏಡಿ ಪ್ರಭೇದ ಪತ್ತೆಯಾಗಿದ್ದು ಆ ಮೂಲಕ ಭಾರತದಲ್ಲಿನ ಏಡಿ ಪ್ರಭೇದಗಳ ಸಂಖ್ಯೆ 75ಕ್ಕೇರಿಕೆಯಾಗಿದೆ.

ಹೌದು.. ಭಾರತದ ಜೈವಿಕ ವೈವಿಧ್ಯತೆಯ ಪಟ್ಟಿಗೆ ಹೊಸ ಜಾತಿಯ ಏಡಿಗಳು ಸೇರ್ಪಡೆಯಾಗುತ್ತಿದ್ದು, ಪಶ್ಚಿಮ ಕರಾವಳಿಗೆ ಸಂಪೂರ್ಣವಾಗಿ ಹೊಸದಾದ ಸಿಹಿನೀರಿನ ಏಡಿ ಮತ್ತು ಸಮುದ್ರದ ಏಡಿ ಎಂಬ ಎರಡು ಜಾತಿಯ ಏಡಿಗಳು ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿವೆ. 

ಕರ್ನಾಟಕ ಮೂಲದ ಇಬ್ಬರು ಪರಿಸರ ತಜ್ಞರಾದ ಯಲ್ಲಾಪುರದ ಕೃಷಿಕ, ಪರಿಸರಾಸಕ್ತ ಗೋಪಾಲಕೃಷ್ಣ ಹೆಗಡೆ ಮತ್ತು ಅರಣ್ಯ ಸಿಬ್ಬಂದಿ ಪರಶುರಾಮ ಪ್ರಭು ಭಜಂತ್ರಿ ಅವರ ಜೋಡಿ ಸಮೀರ್ ಕುಮಾರ್ ಪತಿ ಅವರ ಜೊತೆಗೂಡಿ ಸಿಹಿನೀರಿನ ವಿಶಿಷ್ಟ ಏಡಿಯ ಗುರುತು ಪತ್ತೆಹಚ್ಚಿದ್ದಾರೆ. ಈ ಮೂಲಕ ಭಾರತದಲ್ಲಿನ ಏಡಿ ಪ್ರಬೇದಗಳ ಸಂಖ್ಯೆ 75ಕ್ಕೆ ಏರಿಕೆಯಾದಂತಾಗಿದೆ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ದೂರದ ಪ್ರದೇಶದಿಂದ ಕೆಲವು ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು Zootaxa ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ. "ಇವು 2007 ರಲ್ಲಿ ಬಹಿರ್ ಮತ್ತು ಯೆಯೊ ರೋಗನಿರ್ಣಯ ಮಾಡಿದಂತೆ ವೇಲಾದ ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದ್ದವು. ವೇಲಾದಲ್ಲಿ ನಾಲ್ಕು ಜಾತಿಗಳಿವೆ, ಇವೆಲ್ಲವೂ ಮಧ್ಯ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಪತ್ತೆಯಾಗಿವೆ. ವೇಲಾ ಕಾರ್ಲಿ, ವೇಲಾ ಪುಲ್ವಿನಾಟಾ ಮತ್ತು ವೇಲಾ ವಿರೂಪಾ ಇತರ ಮೂರು ಪ್ರಬೇದಗಳಾಗಿವೆ" ಎಂದು ಝೂಟಾಕ್ಸಾ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ.

ಅರಣ್ಯ ಸಿಬ್ಬಂದಿ ಪರಶುರಾಮ ಪ್ರಭು ಭಜಂತ್ರಿ ಮತ್ತು ಗೋಪಾಲಕೃಷ್ಣ ಹೆಗಡೆ

ಏಡಿಯ ಹೊಸ ಪ್ರಭೇದಕ್ಕೆ ಬಾಲಕಿ ಹೆಸರು!
ಹೊಸ ಪ್ರಭೇದದ ಈ ಏಡಿಗೆ ಪುಟ್ಟ ಬಾಲಕಿಯ ಹೆಸರಿಡಲಾಗಿದ್ದು, ಈ ಹೊಸ ಡಿಯ ಹೆಸರು “ವೇಲ ಬಾಂಧವ್ಯ”. ವೇಲ ಅಂದರೆ ಈ ಏಡಿಯ ತಳಿಯ ಹೆಸರು. ಏಡಿಯನ್ನು ಪತ್ತೆಹಚ್ಚಿದ ಗೋಪಾಲಕೃಷ್ಣ ಹೆಗಡೆಯವರ 5ನೇ ತರಗತಿಯಲ್ಲಿ ಓದುತ್ತಿರುವ ಮಗಳ ಹೆಸರು ಬಾಂಧವ್ಯ. ಈ ಏಡಿ ಕೃಷಿಕರಿಗೆ ಚಿರಪರಿಚಿತ. ಬುಡಕಟ್ಟು ಜನಾಂಗದವರು, ಕೃಷಿಕರ ಒಡನಾಡಿ ಸಂಬಂಧಿಯಂತೆ ಮಳೆಗಾಲದ ಆರಂಭದಲ್ಲಿ ತೋಟಗಳಲ್ಲಿ ಕಂಡುಬರುತ್ತೆ. ಈ ಸಂಬಂಧದ ಸೂಚಕವಾಗಿ "ಬಾಂಧವ್ಯ" ಎಂಬ ಹೆಸರಿಡಲಾಗಿದೆ.

ಈ ಏಡಿಯ ವಿಶೇಷತೆಗಳೇನು?
ಹೊಸ ಏಡಿ ಪ್ರಭೇದದ ಬಗ್ಗೆ ಮಾತನಾಡಿದ ಪರಿಸರ ಸಂಶೋಧಕ ಗೋಪಾಕೃಷ್ಣ ಹೆಗಡೆ, “ಮಳೆಗಾಲ ಶುರುವಾದ 10-15 ದಿನಗಳ ಕಾಲ ಮಾತ್ರ ಈ ಏಡಿ ಕಂಡುಬರುತ್ತೆ, ನೆಲದಲ್ಲಿ ಚಿಕ್ಕ ರಂಧ್ರ ಮಾಡಿ ಅದರಲ್ಲಿ ವಾಸವಿರುವ ಏಡಿಯಿದು. ಜೊತೆಗೆ ಈ ಏಡಿಯನ್ನು ಸ್ಥಳೀಯ ಬುಡಕಟ್ಟು ಜನಾಂಗಗಳು ಆಹಾರವಾಗಿ ಬಳಸುತ್ತಾರೆ. ಈ ಏಡಿಗೆ ಸ್ಥಳೀಯರು “ಹೋಟೆಕುರ್ಲಿ” ಎಂದು ಕರೆಯುತ್ತಾರೆ” ಎಂದು ಮಾಹಿತಿ ಹಂಚಿಕೊಂಡರು.

ಏಡಿ ಸಾಮಾನ್ಯವಾಗಿ ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ, ವೆಂಟ್ರಲ್ ಮೇಲ್ಮೈ ಹಳದಿಯಾಗಿರುತ್ತದೆ ಮತ್ತು ಗರ್ಭಕಂಠದ ಚಡಿಗಳ ನಡುವೆ ಡಾರ್ಸಲ್ ಮೇಲ್ಮೈ ಹೆಚ್ಚಾಗಿ ಗಾಢ ಕಂದು ಬಣ್ಣದ್ದಾಗಿರುತ್ತದೆ. ಈ ಏಡಿಗೆ ಬಾಂಧವ್ಯ ಗೋಪಾಲಕೃಷ್ಣ ಹೆಗ್ಡೆ ಅವರ ಹೆಸರನ್ನು ಇಡಲಾಗಿದೆ. ಇದನ್ನು ಸಾಮಾನ್ಯವಾಗಿ ಬಾಂಧವ್ಯ ಏಡಿ ಎಂದು ಕರೆಯಲಾಗುತ್ತದೆ. ಹಳದಿ ಮಿಶ್ರಿತ ಕೇಸರಿ ಬಣ್ಣದ ಈ ಏಡಿಯ ತಲೆ ಭಾಗದಲ್ಲಿ ಕಪ್ಪು ಬಣ್ಣದಲ್ಲಿ ಕಂಗೊಳಿಸುತ್ತೆ. ಒಟ್ಟಾರೆ ಈ ಹೊಸ ಪ್ರಬೇಧದ ಏಡಿಯ ಜೊತೆಗೆ ಅದಕ್ಕೆ ಇಟ್ಟ ಹೆಸರೂ ಸಹ ಅಷ್ಟೇ ಗಮನಸೆಳೆಯುವಂತಿದೆ.

ಮತ್ತೊಂದು ಘಟನೆಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಸಾಗರ ಜೀವಶಾಸ್ತ್ರ ವಿಭಾಗದ ಹಳೆ ವಿದ್ಯಾರ್ಥಿ ಕಿರಣ ವಾಸುದೇವ್ ಮೂರ್ತಿ ಅವರಿಗೆ ಕಾರವಾರದಲ್ಲಿ ಅಪರೂಪದ ಬಕ್ಲರ್ ಏಡಿ ದೊರೆತಿದೆ. ಕಿರಣ್ ಪ್ರಕಾರ, ಅವರು ಮಜಾಲಿ ಬೀಚ್‌ನಲ್ಲಿ ಹೆಣ್ಣು ಏಡಿಯ ಎರಡು ಮಾದರಿಗಳನ್ನು ಅವರು ಪತ್ತೆ ಮಾಡಿದ್ದಾರೆ. ಅಲ್ಲಿ ಒಂದು ಹಾನಿಗೊಳಗಾದ ಮತ್ತು ವಿರೂಪಗೊಂಡಿದ್ದರೆ, ಇನ್ನೊಂದು ಹಾಗೇ ಇತ್ತು. "ಅಂಚುಗಳು ಎಲ್ಲಾ ಕೋನಗಳಲ್ಲಿ ಮೊನಚಾದ ಮತ್ತು ವಕ್ರದಿಂದ ಕೂಡಿತ್ತು. ಕ್ಯಾರಪೇಸ್ನ ಬಣ್ಣವು ತಿಳಿ ಗುಲಾಬಿ ಬಣ್ಣದಿಂದ ಗುಲಾಬಿ ಕಂದು ಬಣ್ಣದ್ದಾಗಿತ್ತು. ಹೊಟ್ಟೆಯು ಕಿರಿದಾಗಿ ಮತ್ತು ಮುಂಭಾಗದ ಪ್ರದೇಶದ ಕಡೆಗೆ ಅಗಲವಾಗಿದೆ. ಮುಂಭಾಗದ ಜೋಡಿ ಕಾಲುಗಳು ಉದ್ದ, ತೆಳ್ಳಗಿನ ಮತ್ತು ನಯವಾಗಿದ್ದವು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

SCROLL FOR NEXT