ಅವಳಿ ಮಕ್ಕಳು, ಆದರೆ ಇಬ್ಬರ ತಂದೆಯರೂ ಬೇರೆ ಬೇರೆ (ಸಾಂದರ್ಭಿಕ ಚಿತ್ರ) 
ವಿಶೇಷ

19 ವರ್ಷದ ತಾಯಿಗೆ ಅವಳಿ ಮಕ್ಕಳು, ಆದರೆ ಇಬ್ಬರ ತಂದೆಯರೂ ಬೇರೆ ಬೇರೆ! ಇದು ವೈದ್ಯ ಲೋಕದ ಅಚ್ಚರಿ ಪ್ರಕರಣ

ವೈದ್ಯಕೀಯ ಲೋಕವನ್ನೇ ಅಚ್ಚರಿಗೆಡವಿದ ಸಂಗತಿ ಇದು. ಹದಿಹರೆಯದ ಹುಡುಗಿ ಹೊಟ್ಟೆಯಲ್ಲಿ ಹುಟ್ಟಿದ ಅವಳಿಗಳ ತಂದೆ ಬೇರೆ ಬೇರೆ. ಇದು ಹೇಗೆ ಸಾಧ್ಯ.... ವೈದ್ಯ ಲೋಕದ ಅಚ್ಚರಿ ಪ್ರಕರಣ ಇದಾಗಿದೆ.

ವೈದ್ಯಕೀಯ ಲೋಕವನ್ನೇ ಅಚ್ಚರಿಗೆಡವಿದ ಸಂಗತಿ ಇದು. ಹದಿಹರೆಯದ ಹುಡುಗಿ ಹೊಟ್ಟೆಯಲ್ಲಿ ಹುಟ್ಟಿದ ಅವಳಿಗಳ ತಂದೆ ಬೇರೆ ಬೇರೆ. ಇದು ಹೇಗೆ ಸಾಧ್ಯ.... ವೈದ್ಯ ಲೋಕದ ಅಚ್ಚರಿ ಪ್ರಕರಣ ಇದಾಗಿದೆ.

ಇವಳ ಹೆಸರು ಲೂಸಿಯಾನ (ಹೆಸರು ಬದಲಿಸಲಾಗಿದೆ).... ಇನ್ನೂ ಹತ್ತೊಂಭತ್ತರ ಹರೆಯ. ಈಕೆಗೆ ಎರಡು ವರ್ಷದ ಕೆಳಗೆ ಅವಳಿ ಮಕ್ಕಳು ಹುಟ್ಟಿದ್ದಾರೆ. ಈ ಅವಳಿಗಳು ಸಹೋದರರಿಬೇಕು ಎಂದು ಕೊಂಡರೆ ನಿಮ್ಮ ಊಹೆ ತಪ್ಪು.. ಈ ಅವಳಿಗಳ ತಾಯಿ ಒಬ್ಬರೇ ಆದರೂ ತಂದೆಯರು ಮಾತ್ರ ಬೇರೆ ಬೇರೆ.. ಇದೇ ಕಾರಣಕ್ಕೆ ಈ ಪ್ರಕರಣ ವೈದ್ಯಕೀಯ ಲೋಕದ ಅಚ್ಚರಿ ಎನ್ನಲಾಗಿದೆ. ಈ  ಕುರಿತು ಫಸ್ಟ್ ಪೋಸ್ಟ್ ವರದಿ ಮಾಡಿದ್ದು, ಇದೀಗ ಈ ಸುದ್ದಿ ವೈರಲ್ ಆಗುತ್ತಿದೆ.

ವಿದೇಶದಲ್ಲಿ ಲೈಂಗಿಕತೆಗೆ ಮುಕ್ತ ಅವಕಾಶ ಇದೆ. ಪ್ರಾಪ್ತ ವಯಸ್ಸಿಗೆ ಬರುತ್ತಿದ್ದಂತೆಯೇ ಬಾಯ್‌ಫ್ರೆಂಡ್, ಗರ್ಲ್ ಫ್ರೆಂಡ್ ಜೊತೆ ಓಡಾಡೋದು, ಡೇಟಿಂಗ್ ಮಾಡೋದು, ರಿಲೇಶನ್‌ಶಿಪ್‌ನಲ್ಲಿರೋದು.. ಇವೆಲ್ಲಾ ಕಾಮನ್. ಟೀನೇಜ್‌ನಲ್ಲಿ ಸೆಕ್ಸ್‌ ಅನ್ನೋದು ಇಲ್ಲೆಲ್ಲ ಅಂಥಹ ದೊಡ್ಡ ವಿಷಯವೇ ಅಲ್ಲ ತೀರಾ ಕಾಮನ್ ಅನಿಸೋ ವಿಚಾರ. ಲೂಸಿಯಾನ ವಿಷಯದಲ್ಲೂ ಆಗಿದ್ದೂ ಇದೇ... ಒಂದೇ ಗರ್ಭದಲ್ಲಿ ಎರಡೆರೆಡು ಅಂಡಾಣುವಿನೊಂದಿಗೆ ಇಬ್ಬರು ಮಕ್ಕಳು ಜನಿಸಿದ್ದಾರೆ. ಅದರೆ ಈ ಎರಡು ಶಿಶುಗಳ ತಂದೆಯರು ಬೇರೆ ಬೇರೆ. ಇಂತಹ ಅಪರೂಪದಲ್ಲಿ ಅಪರೂಪದ ಸಂಗತಿಗೆ ಈ ಯುವತಿ ಸಾಕ್ಷಿಯಾಗಿದ್ದಾಳೆ. ಅಷ್ಟಕ್ಕೂ ಈ ಎಳೆಯ ತಾಯಿಯ ಕಥೆ ಏನು..

ಈ ಘಟನೆ ನಡೆದದ್ದು ಬ್ರೆಜಿಲ್ ದೇಶದಲ್ಲಿ.. ತನ್ನ ಜೀವನದಲ್ಲಾದ ಘಟನೆಯನ್ನು ಸ್ವತಃ ಲೂಸಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ. ಬ್ರೆಜಿಲಿನ ಈ ಹುಡುಗಿಗೆ ಆಗಲೇ ಹೇಳಿದಂತೆ ಇಬ್ಬರು ಬಾಯ್‌ಫ್ರೆಂಡ್‌ಗಳು. 2021ರಲ್ಲಿ ಈಕೆ ಅವಳಿಗಳಿಗೆ ಜನ್ಮ ನೀಡ್ತಾಳೆ. ಈ ಇಬ್ಬರು ಮಕ್ಕಳ ತಂದೆ ಬೇರೆ ಬೇರೆ. ಲೂಸಿಯಾನ ಒಂದೇ ದಿನ ಇಬ್ಬರು ಹುಡುಗರ ಜೊತೆಗೆ ಸೆಕ್ಸ್ ಮಾಡಿದ್ದಾಳೆ. ಅವರಿಬ್ಬರಿಂದಲೂ ಈಕೆ ಗರ್ಭವತಿಯಾಗಿದ್ದಾಳೆ. ಹೀಗಾಗಿ ಅವಳಿ ಮಕ್ಕಳನ್ನ ಹಡೆದಿದ್ದಾಳೆ. ಈ ಮಕ್ಕಳಿಗೆ ಎಂಟು ತಿಂಗಳಾಗುತ್ತಿದ್ದ ಹಾಗೆ ಲೂಸಿಯಾನಗೆ ಯಾಕೋ ಡೌಟ್ ಬಂದಿದೆ. ಈ ಮಕ್ಕಳ ತಂದೆ ಯಾರು ಅಂತ.. 

ಏಕೆಂದರೆ ಇಬ್ಬರು ಮಕ್ಕಳ ನಡುವೆ ದೈಹಿಕ ಭಿನ್ನತೆಗಳಿದ್ದವು. ಹೀಗಾಗಿ ಈ ಮಕ್ಕಳ ತಂದೆ ಅಂತ ಅವಳ ಭಾವಿಸಿದ ವ್ಯಕ್ತಿಯ ಡಿಎನ್‌ಎ ಟೆಸ್ಟ್ ಮಾಡಿಸಿದಳು. ಆಗ ಬಂದ ರಿಸಲ್ಟ್‌ ನೋಡಿ ಅವಳು ಮಾತ್ರ ಅಲ್ಲ ವೈದ್ಯಕೀಯ ಲೋಕವೇ ಅಚ್ಚರಿ ಪಟ್ಟಿತು. ಏಕೆಂದರೆ ಅವಳು ತನ್ನ ಮಗುವಿನ ತಂದೆ ಅಂದುಕೊಂಡಿದ್ದ ವ್ಯಕ್ತಿ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಮಾತ್ರ ತಂದೆಯಾಗಿದ್ದ.  ಕೂಡಲೇ ಈ ಹುಡುಗಿ ತಾನು ಸಂಬಂಧದಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿ ಆತನ ಡಿಎನ್ಎ ಟೆಸ್ಟ್ ಮಾಡಿಸಿದಳು. ರಿಸಲ್ಟ್‌ ಬಂದಾಗ ಆತ ಈಕೆಯ ಅವಳಿಗಳಲ್ಲಿ ಮತ್ತೊಂದು ಮಗುವಿಗೆ ತಂದೆಯಾಗಿದ್ದ. ಈಗ ಈ ಮಕ್ಕಳಿಗೆ ಹದಿನಾರು ತಿಂಗಳು ಕಳೆದಿದೆ. ಈಕೆಯ ಜೊತೆಗಿರುವ ಒಬ್ಬ ತಂದೆ ಕಾನೂನು ಪ್ರಕಾರ ಇಬ್ಬರ ತಂದೆಯೂ ಆಗಿದ್ದಾನೆ. ಈಕೆಯ ಬೆಂಬಲಕ್ಕೆ ನಿಂತು ಮಕ್ಕಳನ್ನು ಬೆಳೆಸಲು ಆತ ಸಹಾಯವನ್ನೂ ಮಾಡುತ್ತಿದ್ದಾನೆ. ಈಕೆಯ ಇಬ್ಬರು ಮಕ್ಕಳು ಅಂದರೆ ಅವಳಿಗಳು ಈಗ ಆರೋಗ್ಯಕರವಾಗಿದ್ದಾರೆ. ಲೂಸಿಯಾನ ಮತ್ತವಳ ಸಂಗಾತಿಯ ಜೊತೆಗೆ ಖುಷಿಯಿಂದ ಬದುಕುತ್ತಿವೆ. ಲೂಸಿಯಾನ ಪ್ರಕರಣ ವೈದ್ಯಕೀಯ ಲೋಕದ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.

ಈ ವಿಚಿತ್ರ ಘಟನೆಗೆ ವೈದ್ಯಕೀಯ ಜಗತ್ತು ಹೇಟೆರೊಪೊಟೆರ್‌ನಲ್‌ ಸೂಪರ್‌ಫೆಕೆಂಡೇಶನ್‌ (Heteropoternal superfecondation) ಎಂದು ಕರೆಯುತ್ತದೆ. ಒಬ್ಬ ಹೆಣ್ಣಿನ ಅಂಡಾಣು ಇಬ್ಬರು ಗಂಡಸರ ವೀರ್ಯಾಣು ಜೊತೆ ಫಲಿತವಾದಾಗ ಇಂಥ ಅಚ್ಚರಿ ನಡೆಯುತ್ತದೆ. ಆದರೆ ಇಂಥ ಪ್ರಕರಣಗಳು ಅಪರೂಪದಲ್ಲಿ ಅಪರೂಪ. ಒಂದು ಮಿಲಿಯನ್‌ ಜನರಲ್ಲಿ ಒಬ್ಬ ತಾಯಿಗೆ ಹೀಗಾಗಬಹುದು. ಲೂಸಿಯಾನ ವಿಚಾರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಈಕೆಯ ಡಾಕ್ಟರ್‌, ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ವಿಚಿತ್ರ ಕೇಸ್ ವೈದ್ಯಕೀಯ ಜಗತ್ತಿಗೂ ಕುತೂಹಲ ಹೆಚ್ಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT