ಬೆಳ್ಳಿಯಪ್ಪ, ಮಾಚಮ್ಮ ಮತ್ತು ಬೋಪಯ್ಯ 
ವಿಶೇಷ

ಇಳಿವಯಸ್ಸಿನಲ್ಲಿ ಚಿನ್ನ: ಚಾಂಪಿಯನ್ ಆಗಿ ಕೊಡಗಿಗೆ ಮರಳಿದ ಪಾಲೇಕಂಡ ಸಹೋದರರು!

ಆಸ್ಟ್ರೇಲಿಯನ್ ಮಾಸ್ಟರ್ ಗೇಮ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು, ಪಾಲೇಕಂಡ ಸಹೋದರರು ಕೊಡಗಿನ ಕಾಡನೂರಿಗೆ ಮರಳಿದರು. ಚಿನ್ನದ ಪದಕವನ್ನು ಕೊರಳಿಗೆ ಧರಸಿದ್ದ ಅವರನ್ನು ಜೀಪ್ ನಲ್ಲಿ ಮೆರವಣಿಗೆ ಮಾಡಲಾಯಿತು. 95 ವರ್ಷದ ಪಾಳೇಕಂಡ ಬೋಪಯ್ಯ ಮತ್ತು 86 ವರ್ಷದ ಬೆಳ್ಳಿಯಪ್ಪ ತಲಾ ಎರಡು ಪದಕ ಗೆದಿದ್ದಾರೆ. 

ಮಡಿಕೇರಿ: ಆಸ್ಟ್ರೇಲಿಯನ್ ಮಾಸ್ಟರ್ ಗೇಮ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು, ಪಾಲೇಕಂಡ ಸಹೋದರರು ಕೊಡಗಿನ ಕಾಡನೂರಿಗೆ ಮರಳಿದರು. ಚಿನ್ನದ ಪದಕವನ್ನು ಕೊರಳಿಗೆ ಧರಸಿದ್ದ ಅವರನ್ನು ಜೀಪ್ ನಲ್ಲಿ ಮೆರವಣಿಗೆ ಮಾಡಲಾಯಿತು. 95 ವರ್ಷದ ಪಾಳೇಕಂಡ ಬೋಪಯ್ಯ ಮತ್ತು 86 ವರ್ಷದ ಬೆಳ್ಳಿಯಪ್ಪ ತಲಾ ಎರಡು ಪದಕ ಗೆದಿದ್ದಾರೆ. 

ಬೋಪಯ್ಯ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಮತ್ತು ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದರೆ, ಬೆಳ್ಳಿಯಪ್ಪ 1, 500 ಮೀಟರ್ ವಾಕಿಂಗ್ ರೇಸ್ ನಲ್ಲಿ ಚಿನ್ನ ಮತ್ತು 100 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದರು. “ನನ್ನ ಅಣ್ಣ ನಿಜವಾಗಿ ಜಾವೆಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಆದರೆ, ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ತೀರ್ಪುಗಾರರ ಮನವೊಲಿಸಲು ನಾವು ಪ್ರಯತ್ನಿಸಿದರೂ ಸರಿಪಡಿಸಲಾಗಲಿಲ್ಲ ಎಂದು ಬೆಳ್ಳಿಯಪ್ಪ ಹೇಳಿದರು.

ನೋಂದಣಿ ಪ್ರಕ್ರಿಯೆಯ ಮೂಲಕ ಪಡೆಯುವುದು ಕಠಿಣವಾಗಿತ್ತು, ಏಕೆಂದರೆ ಚಾಂಪಿಯನ್‌ಶಿಪ್ ರಾಷ್ಟ್ರದಿಂದ ಅಧಿಕೃತ ಪ್ರಾತಿನಿಧ್ಯವನ್ನು ಹೊಂದಿಲ್ಲ. ಅದೃಷ್ಟವಶಾತ್ ಚಿಕ್ಕಬಳ್ಳಾಪುರದ ಚಿಂತಾಮಣಿಯ ವಿಜ್ಞಾನಿ ಎಸ್ ಮೋಹನ್, ನಮಗೆ ಸಹಾಯ ಮಾಡಿದರು ಎಂದು ಬೆಳ್ಳಿಯಪ್ಪ ತಿಳಿಸಿದರು. 30 ವರ್ಷ ಮೇಲ್ಪಟ ವಿಭಾಗದಲ್ಲಿ ಲಾಂಗ್ ಜಂಪ್ (ಉದ್ದ ಎಸೆತ) ಮೋಹನ್ ಚಿನ್ನದ ಪದಕ ಗೆದ್ದಿದ್ದಾರೆ. ಮೋಹನ್ ಇಲ್ಲದಿದ್ದರೆ ಈ ಪದಕಗಳನ್ನು ಗೆಲ್ಲುತ್ತಿರಲಿಲ್ಲ. ದಾಖಲೆಗಳೊಂದಿಗೆ ನಮಗೆ ಸಹಾಯ ಮಾಡಿದರು. ಎಂದಿಗೂ ನಾವು ಅವರನ್ನು ಮರೆಯುವುದಿಲ್ಲ ಎಂದರು. 

ಇದೇ ವೇಳೆ 77 ವರ್ಷದ ಮಾಚಮ್ಮ ಕೂಡಾ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ  ಗೆದ್ದಿದ್ದಾರೆ. ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯುವ ಮಾಸ್ಟರ್ ಗೇಮ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಹೋದರರು ಈಗ ಎದುರು ನೋಡುತ್ತಿದ್ದಾರೆ. ಆದಾಗ್ಯೂ, ಹಣಕಾಸು ಹೊಂದಿಸುವುದು ಹೇಗೆ ಎಂಬದು ಅವರ ಚಿಂತೆಗೆ ಕಾರಣವಾಗಿದೆ. ಆಸ್ಟ್ರೇಲಿಯನ್ ಅಥ್ಲೀಟ್‌ಗಳನ್ನು ಅವರ ಸರ್ಕಾರವು ಬೆಂಬಲಿಸುತ್ತದೆ. ನಮ್ಮ ಸರ್ಕಾರವೂ ನಮಗೆ ಬೆಂಬಲ ನೀಡುತ್ತದೆ ಎಂದು ಭಾವಿಸುತ್ತೇವೆ ಎಂದು ಬೆಳ್ಳಿಯಪ್ಪ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT