ವಿಶೇಷ

ಧಾರವಾಡ: ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನಿಗೆ ಅರ್ಪಣೆಯಾಗಲಿವೆ ವಿಶೇಷ ಕಂಬಳಿಗಳು!

Shilpa D

ಹುಬ್ಬಳ್ಳಿ: ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದ್ದಂತೆ ಭಕ್ತರು ಹೊಸ ದೇಗುಲಕ್ಕೆ ಉಡುಗೊರೆಗಳನ್ನು ನೀಡಲು ವಿಶಿಷ್ಟ ಉಪಾಯಗಳನ್ನು ಮಾಡುತ್ತಿದ್ದಾರೆ. ಧಾರವಾಡದಲ್ಲಿ ರೈತ ಕುಟುಂಬವೊಂದು ಕೈಯಿಂದ ನೇಯ್ದ ಎರಡು ಕಂಬಳಿಗಳನ್ನು ಸಿದ್ಧಪಡಿಸಿದ್ದು, ಉದ್ಘಾಟನಾ ಸಮಾರಂಭದಲ್ಲಿ ನೂತನ ದೇವಸ್ಥಾನಕ್ಕೆ ಅರ್ಪಿಸಲು ಮುಂದಾಗಿದೆ.

ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ದಿನದಂದು ಕೇಂದ್ರ ಸಚಿವ ಮತ್ತು ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರು ಕಂಬಳಿಗಳನ್ನು ಅಯೋಧ್ಯೆಯಲ್ಲಿ ಧಾರ್ಮಿಕ ಸಮಿತಿಗೆ ಹಸ್ತಾಂತರಿಸಲಿದ್ದಾರೆ. ಶನಿವಾರ ಧಾರವಾಡದ ಕಮಲಾಪುರ ಕ್ಷೇತ್ರದ ರೈತ ಸುಭಾಷ ರಾಯಣ್ಣ ಅವರು ಕೇಂದ್ರ ಸಚಿವ ಜೋಶಿ ಅವರಿಗೆ ಕಂಬಳಿ ಹಸ್ತಾಂತರಿಸಲಿದ್ದಾರೆ.

ದೇವಸ್ಥಾನ ಉದ್ಘಾಟನೆ ದಿನಾಂಕ ಘೋಷಿಸಿದಾಗಿನಿಂದ ನಾನು ನಮ್ಮ ಕಡೆಯಿಂದ ದೇವಸ್ಥಾನಕ್ಕೆ ಏನಾದರೂ ಕೊಡಬೇಕೆಂದು ಬಯಸಿದ್ದೆ. ನಾವು ನುರಿತ ಕಂಬಳಿ ನೇಕಾರರು ಮತ್ತು ನಾವು ಮೂರು ತಲೆಮಾರುಗಳಿಂದ ಕೆಲಸ ಮಾಡುತ್ತಿದ್ದೇವೆ. ಕಾರ್ಖಾನೆಯಲ್ಲಿ ತಯಾರಿಸಿದ ಕಂಬಳಿಗಳಿಗಿಂತ ಭಿನ್ನವಾಗಿ, ನಾವು ಕೈಯಿಂದ ತಯಾರಿಸುವ ಕಂಬಳಿಗಳನ್ನು ಸ್ಥಳೀಯವಾಗಿ ಕರಿ ಕಂಬಳಿ ಎಂದು ಕರೆಯಲಾಗುತ್ತದೆ ಮತ್ತು ಸಾಂಪ್ರದಾಯಿಕವಾಗಿ ಕಾಲಕಾಲಕ್ಕೆ ವಿವಿಧ ಮಠಗಳು ಮತ್ತು ದೇವಾಲಯಗಳಿಗೆ ಅರ್ಪಿಸಲಾಗುತ್ತದೆ ಎಂದು ಸುಭಾಷ್ ರಾಯಣ್ಣ ವಿವರಿಸಿದರು.

ಈ ಕಂಬಳಿಗಳು 54 ಇಂಚು ಅಗಲ 110 ಇಂಚು ಉದ್ದ ಇವೆ. ಒಟ್ಟು 14 ಉಂಡೆ ಕುರಿ ಉಣ್ಣೆಯಿಂದ ಇವುಗಳನ್ನು ಸಿದ್ಧಪಡಿಸಲಾಗಿದೆ. ಸಾಮಾನ್ಯವಾಗಿ ದೇವರು ಮತ್ತು ದೇವತೆಗಳಿಗೆ ಅರ್ಪಿಸುವ ಕಂಬಳಿಗಳನ್ನು ರೈತರು ನಿರ್ದಿಷ್ಟ ದೇವರ ಹೆಸರನ್ನ ಇಟ್ಟು ನೇಯುತ್ತಾರೆ ಈ ಸಂದರ್ಭದಲ್ಲಿ, ಕಂಬಳಿಗಳು ಅಯೋಧ್ಯೆಯ ದೇವಾಲಯವನ್ನು ಅಲಂಕರಿಸಬೇಕಾಗಿರುವುದರಿಂದ, ಹೊದಿಕೆಯ ಉದ್ದಕ್ಕೂ ಕೇಸರಿ ಬಣ್ಣದ ದಾರವನ್ನು ಕಟ್ಟಲಾಗುತ್ತದೆ, ಇದು ಸಾಮಾನ್ಯವಾದವುಗಳಿಗಿಂತ ಹೆಚ್ಚು ವಿಶೇಷವಾಗಿ ಕಾಣುತ್ತದೆ.

ನಾವು ಕೇಂದ್ರ ಸಚಿವ ಜೋಶಿ ಅವರೊಂದಿಗೆ ಚರ್ಚಿಸಿದೆವು. ಉಡುಗೊರೆಯನ್ನು ಸ್ವೀಕರಿಸಲಾಗುವುದು, ದೃಢೀಕರಣವನ್ನು ಪಡೆದ ನಂತರವೇ ನಾವು ಕಂಬಳಿಗಳನ್ನು ನೇಯಲು ಪ್ರಾರಂಭಿಸಿದ್ದೇವೆ ಎಂದು ರಾಯಣ್ಣ ಹೇಳಿದ್ದಾರೆ.

SCROLL FOR NEXT