ಶಿವಮೊಗ್ಗದ ಅಥ್ಲೀಟ್ ಬಿ. ಮಂಜಮ್ಮ 
ವಿಶೇಷ

ವಯಸ್ಸು ಕೇವಲ ಸಂಖ್ಯೆ ಅಷ್ಟೇ: 72ರ ಇಳಿವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಸಾಹಸ..!

ಇತ್ತೀಚೆಗೆ ಚೆನ್ನೈದಲ್ಲಿ ನಡೆದ 23ನೇ ಏಷಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ನಲ್ಲಿ 400 ಮೀಟರ್ ಓಟದಲ್ಲಿ ಮಂಜಮ್ಮ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಸಾಧನೆಗೆ ವಯಸ್ಸಿಲ್ಲ ಎಂದ ಮಾತಿಗೆ ನೈಜ ಉದಾಹರಣೆಯಾಗಿದ್ದಾರೆ.

ಶಿವಮೊಗ್ಗ: ಇಂದಿನ ಜಗತ್ತಿನಲ್ಲಿ ಬಹುತೇಕರು ಬೇಗ ನಿವೃತ್ತಿ ಹೊಂದಿ, ಆರಾಮದಾಯಕ ಜೀವನ ನಡೆಸಲು ಬಯಸುತ್ತಾರೆ. ಆದರೆ, ಶಿವಮೊಗ್ಗದ ಅಥ್ಲೀಟ್ ಬಿ. ಮಂಜಮ್ಮ ಅವರು 72 ವರ್ಷದ ಇಳಿವಯಸ್ಸಿನಲ್ಲೂ ಸಾಧನೆಗೆ ಹಾತೊರೆಯುತ್ತಿದ್ದಾರೆ.

ಇತ್ತೀಚೆಗೆ ಚೆನ್ನೈದಲ್ಲಿ ನಡೆದ 23ನೇ ಏಷಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ನಲ್ಲಿ 400 ಮೀಟರ್ ಓಟದಲ್ಲಿ ಮಂಜಮ್ಮ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಸಾಧನೆಗೆ ವಯಸ್ಸಿಲ್ಲ ಎಂದ ಮಾತಿಗೆ ನೈಜ ಉದಾಹರಣೆಯಾಗಿದ್ದಾರೆ.

ಏಳು ವರ್ಷಗಳ ಹಿಂದೆ ಅಥ್ಲೆಟಿಕ್ಸ್ ಆರಂಭಿಸಿದ ಮಂಜಮ್ಮ ಅವರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 110 ಪದಕಗಳನ್ನ ಜಯಿಸಿದ್ದಾರೆ.

2013 ರಲ್ಲಿ ಲೇಡಿ ಹೆಲ್ತ್ ವಿಸಿಟರ್ (LHV) ಮತ್ತು ನರ್ಸಿಂಗ್ ಅಧಿಕಾರಿಯಾಗಿ 36 ವರ್ಷ ಸೇವೆ ನಂತರ ಮಂಜಮ್ಮ ಅವರು ನಿವೃತ್ತರಾದರು. ಅವರ ಪತಿ ಹೆಚ್.ಟಿ. ದೇವರಾಜ್, ಕೊಡಗು ಮೂಲದವರು ಮತ್ತು ಕರ್ನಾಟಕ ಹ್ಯಾಂಡ್ಲೂಮ್ ಮತ್ತು ವುಲನ್ ಸೊಸೈಟಿಯಲ್ಲಿ ಕೆಲಸ ಮಾಡಿದವರು, 2013 ರಲ್ಲಿ ನಿಧನರಾದರು. ಪತಿಯ ಅಗಲಿಕೆಯಿಂದ ಖಿನ್ನತೆಗೊಳಗಾಗಿದ್ದರು. ನಂತರ ಮಾನಸಿಕ ಸಮಸ್ಯೆಯಿಂದ ಹೊರಬರಲು 2018ರಲ್ಲಿ 65 ವರ್ಷ ವಯಸ್ಸಿನಲ್ಲಿ ಜಾಗಿಂಗ್ ಆರಂಭಿಸಿದ್ದರು. ಬಳಿಕ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು.

27 ವರ್ಷದ ನನ್ನ ಮಗಳು ಬೆಂಗಳೂರಿನಲ್ಲಿ ವೈದ್ಯ ವೃತ್ತಿಯಲ್ಲಿದ್ದಾಳೆ. ನನ್ನ ಸಾಧನೆ ಹಿಂದೆ ಆಕೆಯ ಪರಿಶ್ರಮ ಕೂಡ ಇದೆ. ನನ್ನ ಮಗಳು ನನಗೆ ಬೆಂಬಲಿಗಳಾಗಿದ್ದಾಳೆ. ನನ್ನನ್ನು ಸದಾ ಕಾಲ ಪ್ರೇರೇಪಿಸುತ್ತಾಳೆ, 72 ನೇ ವಯಸ್ಸಿನಲ್ಲಿಯೂ ಸಹ ನನಗೆ ಬೆಂಬಲ ನೀಡುವ ಮತ್ತು ನನ್ನ ಕ್ರೀಡಾ ಮನೋಭಾವವನ್ನು ಮೆಚ್ಚುವ ಸ್ನೇಹಿತರಿದ್ದಾರೆ. ಮೈಸೂರು ಮತ್ತು ಮಂಗಳೂರಿನ ಕ್ರೀಡಾ ಸಂಘಗಳು ನನ್ನನ್ನು ಅವರ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಮೂಲಕ ನನ್ನನ್ನು ಪ್ರೇರೇಪಿಸುತ್ತಾರೆಂದು ಮಂಜಮ್ಮ ಅವರು ಹೇಳಿದ್ದಾರೆ.

ಕ್ರೀಡೆ ಮತ್ತು ಆಟಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ. ಜನರು, ವಿಶೇಷವಾಗಿ ವೃದ್ಧರು ಸಕ್ರಿಯರಾಗಿ ಮತ್ತು ಗಮನಹರಿಸಲು ಸಹಾಯ ಮಾಡುತ್ತವೆ. ಯೋಗ, ನಡಿಗೆ, ಧ್ಯಾನ ಮತ್ತು ಕ್ರೀಡೆಗಳು ಇದರ ಅತ್ಯಗತ್ಯ ಭಾಗವಾಗಿದೆ.

2018 ರಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಶಾಟ್‌ಪುಟ್‌ನಲ್ಲಿ ನಾನು ಮೊದಲ ಬಹುಮಾನವನ್ನು ಪಡೆದಿದ್ದೆ. "ಇದು ನನ್ನ ಕ್ರೀಡಾ ಪ್ರಯಾಣವನ್ನು ಮುಂದುವರಿಸಲು ನನ್ನನ್ನು ಪ್ರೇರೇಪಿಸಿತು. ಪ್ರತಿಭೆ ಮತ್ತು ಕೌಶಲ್ಯಗಳನ್ನು ಅನ್ವೇಷಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಆತ್ಮವಿಶ್ವಾಸ ಮುಖ್ಯವಾಗುತ್ತದೆ, ಅದು ಹೆಚ್ಚಿನದನ್ನು ಸಾಧಿಸಲು ಸಹಾಯ ಮಾಡುತ್ತದೆ. ಯಾವುದೂ ಅಸಾಧ್ಯವಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಕ್ರೀಡಾಕೂಟ ಅಷ್ಟೇ ಅಲ್ಲದೆ, ಮಂಜಮ್ಮ ಅವರು, ನಾಸಿಕ್, ಹೈದರಾಬಾದ್, ಗೋವಾ, ಪುಣೆ ಮತ್ತು ಕೊಚ್ಚಿಯಲ್ಲಿ ನಡೆದ ಕ್ರೀಡಾಕೂಟದಲ್ಲಿಯೂ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಬ್ರೂನಿಯಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಯಕ್ರಮಗಳು, ಶ್ರೀಲಂಕಾ ಮಾಸ್ಟರ್ ಅಥ್ಲೆಟಿಕ್ಸ್ ಇಂಟರ್ನ್ಯಾಷನಲ್, ಮಂಗಳೂರಿನಲ್ಲಿ ನಡೆದ ದಕ್ಷಿಣ ಏಷ್ಯಾ ಟೂರ್ನಮೆಂಟ್ ಮತ್ತು ಉಡುಪಿಯಲ್ಲಿ ನಡೆದ ದಕ್ಷಿಣ ಭಾರತ ಟೂರ್ನಮೆಂಟ್‌ನಲ್ಲಿಯೂ ಭಾಗವಹಿಸಿದ್ದಾರೆ.

ಈ ಇಳಿ ವಯಸ್ಸಿನಲ್ಲೂ ತಮ್ಮನ್ನು ತಾವು ಚುರುಕಾಗಿರಿಸಿಕೊಂಡು, ಯುವ ಪೀಳಿಗೆಗೆ ಮಂಜಮ್ಮ ಅವರು ಒಂದು ಸಂದೇಶವನ್ನು ನೀಡುತ್ತಿದ್ದಾರೆ.

ಯುವಕರು ತಮ್ಮ ದೇಹ ಮತ್ತು ಮನಸ್ಸನ್ನು ಸಕ್ರಿಯವಾಗಿರಿಸಿಕೊಳ್ಳಬೇಕು. ತಡವಾಗಿ ಮಲಗುವುದು ಮತ್ತು ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಬೇಕು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಬೊಜ್ಜು ಸಮಸ್ಯೆಯಿಂದ ದೂರವಿರಬೇಕು. ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳಲು ಜಾಗಿಂಗ್, ನಡಿಗೆ, ಧ್ಯಾನ ಮಾಡುವುದು, ಯೋಗವನ್ನು ಅಭ್ಯಾಸ ಮತ್ತು ಆಟಗಳನ್ನು ಆಡಬೇಕು. ಅಂತಹ ಚಟುವಟಿಕೆಗಳು ಅವರಿಗೆ ಶೈಕ್ಷಣಿಕವಾಗಿ ಗಮನಹರಿಸಲು ಸಹಾಯ ಮಾಡುತ್ತದೆ.

ಈ ಮೊದಲು ನಾನು 100 ಮೀ ಮತ್ತು 200 ಮೀ ಓಟಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದೆ. ಆದರೆ, ಈಗ ಶಾಟ್ ಪುಟ್, ಡಿಸ್ಕಸ್ ಥ್ರೋ, 1 ಕಿಮೀ ನಡಿಗೆ, 60 ಮೀ ಓಟ ಮತ್ತು ಜಾವೆಲಿನ್ ಥ್ರೋಗಳಲ್ಲಿ ಭಾಗವಹಿಸುತ್ತೇನೆಂದು ಮಂಜಮ್ಮ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿ.26ರಿಂದ ರೈಲ್ವೆ ಪ್ರಯಾಣ ದರ ಏರಿಕೆ; 500 ಕಿ.ಮೀವರೆಗಿನ ಪ್ರಯಾಣಕ್ಕೆ ನಾನ್ ಎಸಿ ರೈಲುಗಳಲ್ಲಿ 10 ರೂ. ಹೆಚ್ಚಳ!

U-19 Asia Cup ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಹೀನಾಯ ಸೋಲು!

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ನೇತೃತ್ವದ ಮಹಾಯುತಿ ಮ್ಯಾಜಿಕ್; ಅಘಾಡಿ ಗಾಡಿ ಪಂಕ್ಚರ್!

Pakistan: 17 ವರ್ಷ ಜೈಲು ಶಿಕ್ಷೆ ಹಿನ್ನೆಲೆ, ದೇಶಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿ, ಇಮ್ರಾನ್ ಖಾನ್ ಕರೆ!

ಬೆಂಗಳೂರು: ರಾಷ್ಟ್ರೀಯ 'ಪಲ್ಸ್ ಪೋಲಿಯೊ ಲಸಿಕಾ' ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

SCROLL FOR NEXT