ಗೀತಾಂಜಲಿಯ ಅಜ್ಜ-ಅಜ್ಜಿ 1962 ರಲ್ಲಿ ನಿರ್ಮಿಸಿದ ಮನೆ Photo | Special Arrangement
ವಿಶೇಷ

1962ರ ಪೂರ್ವಜರ ಮನೆಗೆ ಹೊಸ ರೂಪ ಕೊಟ್ಟ ಮಂಗಳೂರಿನ ವಾಸ್ತುಶಿಲ್ಪಿ: ಕುಂಬಾರಿಕೆಯ "ಸ್ಟುಡಿಯೋ ಕ್ಯಾಸಿನೊ" ಆಗಿ ಪರಿವರ್ತಿಸಿದ್ದು ಹೇಗೆ?

ವಾಸ್ತುಶಿಲ್ಪಿಯಾಗಿರುವ ಗೀತಾಂಜಲಿಯವರು 1962 ರಲ್ಲಿ ನಿರ್ಮಿಸಲಾದ ತಮ್ಮ ಅಜ್ಜಿಯ ಮನೆಯನ್ನು ಕುಂಬಾರಿಕೆ ಸ್ಟುಡಿಯೋ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ "ಸ್ಟುಡಿಯೋ ಕ್ಯಾಸಿನೊ" ಎಂದೂ ಹೆಸರಿಸಿದ್ದಾರೆ.

ಮಂಗಳೂರು: ಪೂರ್ವಜರ ಮನೆ ಎಂದರೆ ಅದನ್ನು ತಾತ್ಸಾರವಾಗಿ ನೋಡುವವರೇ ಹೆಚ್ಚು. ಸಾಕಷ್ಟು ಮಂದಿ ಅಂತಹ ಮನೆಗಳನ್ನು ಮಾರಾಟ ಮಾಡಿಬಿಡುತ್ತಾರೆ. ಆದರೆ, ಮಂಗಳೂರಿನ 24 ವರ್ಷದ ವಾಸ್ತುಶಿಲ್ಪ ಪದವೀಧರೆಯೊಬ್ಬರು ತಮ್ಮ ಅಜ್ಜಿಯ ಮನೆಯನ್ನು ಸ್ಟುಡಿಯೋ ಆಗಿ ಬದಲಿಸಿದ್ದು, ಹಳೆಯ ಮನೆಗೆ ಹೊಸ ರೂಪ ನೀಡಿದ್ದಾರೆ.

ವಾಸ್ತುಶಿಲ್ಪಿಯಾಗಿರುವ ಗೀತಾಂಜಲಿಯವರು 1962 ರಲ್ಲಿ ನಿರ್ಮಿಸಲಾದ ತಮ್ಮ ಅಜ್ಜಿಯ ಮನೆಯನ್ನು ಕುಂಬಾರಿಕೆ ಸ್ಟುಡಿಯೋ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ "ಸ್ಟುಡಿಯೋ ಕ್ಯಾಸಿನೊ" ಎಂದೂ ಹೆಸರಿಸಿದ್ದಾರೆ.

ಹಳೆಯ ಮನೆಗಳಿಂದ ನಾನು ಯಾವಾಗಲೂ ಆಕರ್ಷಿತಳಾಗಿದ್ದೇನೆ. ಸಾಮಾನ್ಯವಾಗಿ ಹಳೆಯ ಮನೆಗಳನ್ನು ನಿರ್ವಹಿಸಲು ಸಾಧ್ಯವಾಗದೆ ಕೆಡವುದುಂಟು. ಆದರೆ, ನನಗೆ ಇಂತಹ ಮನೆಗಳು ಸಾಕಷ್ಟು ನೆನಪುಗಳನ್ನು ನೀಡುತ್ತವೆ. ಕಥೆಗಳು, ನೆನಪುಗಳನ್ನು ಈ ಮನೆಗಳು ನೀಡುತ್ತವೆ. ಈ ಮನೆಗಳ ಪರಂಪರೆಯನ್ನು ಕಾಪಾಡುವುದು ನನ್ನ ಉದ್ದೇಶ. ಹಳೆಯ ನೆನಪುಗಳನ್ನು ನಾವು ಕಳೆದುಕೊಳ್ಳಬಾರದು. ಅಜ್ಜಿಯ ಮನೆಯನ್ನು ಸ್ಟುಡಿಯೋ ಆಗಿ ಪರಿವರ್ತಿಸುವ ಮೂಲಕ ಅವರ ನೆನಪನ್ನು ಜೀವಂತವಾಗಿರುವುದು ನನ್ನ ಉದ್ದೇಶವಾಗಿತ್ತು. ಇದು ನನ್ನ ಅಜ್ಜಿಗೆ ಅರ್ಥಪೂರ್ಣ ಉಡುಗೊರೆಯಾಗಿತ್ತು ಎಂದು ಗೀತಾಂಜಲಿಯವರು ಹೇಳಿದ್ದಾರೆ.

ಎಲ್ಲಾ ಪದವೀಧರರಂತೆ ನಾನೂ 9-5 ಕೆಲಸ ಮಾಡುತ್ತಿದ್ದೆ. ಆದರೆ, ಅದು ನನಗೆ ಸ್ವಾತಂತ್ರ್ಯವನ್ನು ನೀಡಲಿಲ್ಲ. ಈ ನಡುವೆ ಯೂಟ್ಯೂಬ್‌ನಲ್ಲಿ ಕುಂಬಾರಿಕೆ ವೀಡಿಯೋವೊಂದು ನನ್ನನ್ನು ಸಾಕಷ್ಟು ಆಕರ್ಷಿಸಿತು. ಆ ವಿಡಿಯೋ ನನ್ನ ಆಲೋಚನೆಗಳನ್ನು ಬದಲಾಯಿಸಿತು. ಮಂಗಳೂರಿನಲ್ಲಿ ಕ್ಲೇಮೌರ್‌ನಲ್ಲಿ ಕುಂಬಾರಿಕೆ ಕೋರ್ಸ್‌ಗೆ ಸೇರ್ಪಡೆಗೊಂಡೆ. ಬಳಿಕ ನನ್ನ ಕಲ್ಪನೆಗಳು ಮತ್ತಷ್ಟು ಬೆಳೆಯಲು ಆರಂಭವಾಯಿತು. ನಂತರ ಅಜ್ಜಿಯ ಮನೆಯನ್ನು ಸ್ಟುಡಿಯೋ ಆಗಿ ಪರಿವರ್ತಿಸುವ ನನ್ನ ನಿರ್ಧಾರ ದೃಢವಾಯಿತು. ಆದರೆ, ಈ ಯೋಜನೆಗೆ ಸಾಕಷ್ಟು ಸಂಕಷ್ಟಗಳು ಎದುರಾಯಿತು.

ಮನೆ ಗೆದ್ದಲು ಹಿಡಿದಿತ್ತು. ವಾಸ್ತು ದೋಷ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ಮಣ್ಣಿನ ಗೋಡೆಯಾಗಿದ್ದರಿಂದ ಅದು ಕುಡಿಯುವ ಅಪಾಯ ಕೂಡ ಇತ್ತು. ಆದರೆ, ಪ್ರತಿಯೊಂದು ಅಡಚಣೆಯೂ ನನ್ನ ಸಂಕಲ್ಪವನ್ನು ಬಲಪಡಿಸಿತು. ನಿಧಾನಗತಿಯಲ್ಲಿ ಮನೆಗೆ ಸ್ಟುಡಿಯೋ ಆಕಾರ ನೀಡಲು ಆರಂಭಿಸಿದೆ. ಆರಂಭದಲ್ಲಿ ನನ್ನ ಯೋಜನೆಯನ್ನು ಕುಟುಂಬಕ್ಕೆ ಮನವರಿಕೆ ಮಾಡುವುದೇ ದೊಡ್ಡ ಸವಾಲಾಗಿತ್ತು.

ವಾಸ್ತುಶಿಲ್ಪಿಯಾಗಿಯೇ ಮುಂದುವರೆಯಬೇಕೆಂದು ಎಲ್ಲರೂ ನಿರೀಕ್ಷಿಸಿದ್ದರು. ಬದಲಾವಣೆ ಬಯಸುವುದನ್ನು ಅವರಿಗೆ ವಿವರಿಸುವುದು ಸುಲಭವಾಗಿರಲಿಲ್ಲ. ನನ್ನ ದೃಷ್ಟಿಕೋನವನ್ನು ಅರ್ಥಮಾಡಿಸಲು ಪಿಪಿಟಿ ಕೂಡ ಮಾಡಿದ್ದೆ. ಮನವರಿಕೆಯಾದ ನಂತರ, ನನ್ನ ತಾಯಿ ನನ್ನ ಪರವಾಗಿ ನಿಂತರು. ಅವರ ಬೆಂಬಲದಿಂದ, ನಾನು ಯಾರನ್ನಾದರೂ ಎದುರಿಸಬಲ್ಲೆ ಎಂಬ ಧೈರ್ಯ ನನಗೆ ಸಿಕ್ಕಿತು. ಅವರು ನನ್ನ ಅಜ್ಜನನ್ನೂ ಮನವೊಲಿಸಿದರು. ಪ್ರಾಮಾಣಿಕವಾಗಿ ಹೇಳುವುದಾದರೆ, ಅವರಿಲ್ಲದಿದ್ದರೆ, ಇದು ಕೇವಲ ಕನಸಾಗಿಯೇ ಉಳಿಯುತ್ತಿತ್ತು ಎಂದು ಗೀತಾಂಜಲಿ ತಿಳಿಸಿದ್ದಾರೆ.

"ಚಿತ್ರಕಲೆ, ನೆಲಹಾಸು ಮತ್ತು ರಚನಾತ್ಮಕ ಕೆಲಸಗಳು ಪೂರ್ಣಗೊಂಡ ನಂತರ ಗಣೇಶ ಚತುರ್ಥಿಯ ನಂತರ ಸ್ಟುಡಿಯೋ ಉದ್ಘಾಟನೆಗೆ ನಿರ್ಧರಿಸಲಾಗಿತ್ತು. ಆದರೆ ಮರಗೆಲಸ ಮತ್ತು ತೋಟಗಾರಿಕೆಯಂತಹ ಕೆಲಸಗಳು ವಿಳಂಬವಾದ ಕಾರಣ ಅದು ಸಾಧ್ಯವಾಗಲಿಲ್ಲ. ಇದೀಗ ವರ್ಕ್ ಶಾಪ್ (ಕಾರ್ಯಾಗಾರ) ನಡೆಸಲು ನಿರ್ಧರಿಸಲಾಗಿದ್ದು, ಜನರು 2 ಅಥವಾ ಹೆಚ್ಟಿನ ಗಂಟೆಗಳ ಕಾಲ ಇಲ್ಲಿ ಕಾಲ ಕಳೆದು, ಕುಂಬಾರಿಕೆಯನ್ನು ಕಲಿಯಬಹುದು.

ಮನೆಯೊಳಗಿನ ದೃಶ್ಯ

ಕುಂಬಾರಿಕೆಯಲ್ಲಿ ಯಾವುದೇ ಮಿತಿಗಳಿಲ್ಲ. ಅದು ನನಗೆ ಸಂಪೂರ್ಣ ಸೃಜನಶೀಲ ಸ್ವಾತಂತ್ರ್ಯವನ್ನು ನೀಡುತ್ತದೆ. ಈ ಸ್ಟುಡಿಯೋದಿಂದ ನಾನು ಪ್ರತಿದಿನ ಕಲೆಯನ್ನು ನಿಜವಾಗಿಯೂ ಅನುಭವಿಸಬಹುದು. ಇಲ್ಲಿನ ಜ್ಞಾನ ಮತ್ತು ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಬಹುದು ಎಂದು ಹೇಳಿದ್ದಾರೆ.

"ಕುಂಬಾರಿಕೆ ಅತ್ಯಂತ ಹಳೆಯ ಕಲಾ ಪ್ರಕಾರಗಳಲ್ಲಿ ಒಂದಾಗಿದೆ. ಸ್ಟುಡಿಯೋ ಮನೆಯ ಇತಿಹಾಸ ಮತ್ತು ಕರಕುಶಲತೆಯ ಸಂಪ್ರದಾಯವನ್ನು ತಿಳಿಸುತ್ತದೆ. ಅವುಗಳಿಗೆ ಆಧುನಿಕ ವೇದಿಕೆಯನ್ನು ನೀಡುತ್ತದೆ. ಈ ಸ್ಟುಡಿಯೋ ಸಮುದಾಯ ಕೇಂದ್ರವಾಗಿ ಬೆಳೆಯಬೇಕೆಂಬುದು ನನ್ನ ಬಯಕೆ.

ಮಂಗಳೂರು ಐಟಿ ಕೇಂದ್ರವಾಗುತ್ತಿದೆ, ದೈನಂದಿನ ಜೀವನದ ಜಂಜಾಟದಲ್ಲಿ ಜನರು ಹೆಚ್ಚಾಗಿ ತಮಗಾಗಿ ಸಮಯ ತೆಗೆದುಕೊಳ್ಳುವುದನ್ನು ಮರೆಯುತ್ತಿದ್ದಾರೆ. ಈ ಸ್ಟುಡಿಯೋ ಅವರಿಗೆ ಶಾಂತ, ಆಹ್ಲಾಕರ ಸಮಯವನ್ನು ನೀಡಲಿದೆ ಇದು ಕುಂಬಾರಿಕೆಯ ಬಗ್ಗೆ ಮಾತ್ರವಲ್ಲ, ಅವರ ಆಲೋಚನೆಗಳು ಮತ್ತು ಭಾವನೆಗಳನ್ನು ರೂಪಿಸುವ ಬಗ್ಗೆಯೂ ಆಗಿದೆ" ಈ ಯೋಜನೆಯು ನನ್ನ ವೃತ್ತಿಜೀವನದ ನಡೆಗಿಂತ ಹೆಚ್ಚಿನದಾಗಿದೆ. ಇದರಿಂದ ಪರಂಪರೆಯನ್ನೂ ಸಂರಕ್ಷಿಸಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ಶೇ. 8.5 ರಷ್ಟು ಬೆಳವಣಿಗೆಯೊಂದಿಗೆ ಮುಂಬೈ, ದೆಹಲಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ! ಇಲ್ಲಿದೆ ವರದಿ...

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಿದ್ದರಾಮಯ್ಯ 'ಫೇಸ್ ಬುಕ್ 'ನಲ್ಲಿ ಲೈವ್ ಬಂದರೆ ಹೇಗಿರುತ್ತದೆ? ಈ Video ನೋಡಿ..

ರಾಜ್ಯಪಾಲರು ಮಸೂದೆಗಳನ್ನು ಅನಿರ್ದಿಷ್ಟವಾಗಿ ವಿಳಂಬ ಮಾಡಲು ಸಾಧ್ಯವಿಲ್ಲ; ಹಾಗೆಂದು ಅನುಮೋದನೆಗೆ ನಾವು ಕಾಲಮಿತಿ ನಿಗದಿಪಡಿಸಲಾಗದು: ಸುಪ್ರೀಂ ಕೋರ್ಟ್

ಕುನೋದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಭಾರತದಲ್ಲಿ ಜನಿಸಿದ ಚೀತಾ; Video

ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್; ಮೋದಿ ಭಾಗಿ; Video

SCROLL FOR NEXT