ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಎಲ್ಲಾ ವಯೋಮಾನದ ಜನರಿಗೆ, ವಿಶೇಷವಾಗಿ ಗೃಹಿಣಿಯರಿಗೆ ನಗರ ತೋಟಗಾರಿಕೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. 
ವಿಶೇಷ

ಪುಟ್ಟ ಜಾಗದಲ್ಲಿ ಹಣ್ಣು-ತರಕಾರಿ ಬೆಳೆಯುವುದು ಹೇಗೆ? GKVK ಯಿಂದ ತರಬೇತಿ

ಜಿಕೆವಿಕೆಯ ಉಪ ಕುಲಪತಿ ಡಾ. ಎಸ್. ವಿ. ಸುರೇಶ್, ಮುಖ್ಯವಾಗಿ ನಮ್ಮ ಗ್ರಾಹಕರು ರೈತರಾಗಿದ್ದರೂ, ಈ ಬಾರಿ ಗೃಹಿಣಿಯರು ಮತ್ತು ಇತರರಿಗೆ ನಗರ ತೋಟಗಾರಿಕೆಯಲ್ಲಿ ತರಬೇತಿ ನೀಡುವ ಮೂಲಕ ನಮ್ಮ ಗ್ರಾಹಕರ ಪಟ್ಟಿಯನ್ನು ವಿಸ್ತರಿಸಬಹುದು ಎಂದು ನಾವು ಭಾವಿಸಿದ್ದೇವೆ ಎಂದರು.

ಬೆಂಗಳೂರು: ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಾಂಕ್ರಿಟೀಕರಣ ನಡುವೆ ತರಕಾರಿಗಳು, ಹಣ್ಣುಗಳು ಮತ್ತು ಯಾವುದೇ ಕೃಷಿ ಉತ್ಪನ್ನಗಳನ್ನು ಬೆಳೆಯಲು ಶುದ್ಧ ನೀರಿನ ಕೊರತೆ ಎದುರಾಗುತ್ತದೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ಎಲ್ಲಾ ವಯೋಮಾನದ ಜನರಿಗೆ, ವಿಶೇಷವಾಗಿ ಗೃಹಿಣಿಯರಿಗೆ ನಗರ ತೋಟಗಾರಿಕೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರಿಂದಾಗಿ ತೋಟಗಾರಿಕೆ ಕೇವಲ ಹವ್ಯಾಸವಾಗಿರದೆ ಕೀಟನಾಶಕಗಳನ್ನು ಬಳಸದೆ ಸಾವಯವವಾಗಿ ತರಕಾರಿಗಳನ್ನು ಬೆಳೆಯುವುದು ಹೇಗೆ ಎಂದು ಹೇಳಿಕೊಡಲಾಗುತ್ತದೆ.

ಜಿಕೆವಿಕೆಯ ಉಪ ಕುಲಪತಿ ಡಾ. ಎಸ್. ವಿ. ಸುರೇಶ್, ಮುಖ್ಯವಾಗಿ ನಮ್ಮ ಗ್ರಾಹಕರು ರೈತರಾಗಿದ್ದರೂ, ಈ ಬಾರಿ ಗೃಹಿಣಿಯರು ಮತ್ತು ಇತರರಿಗೆ ನಗರ ತೋಟಗಾರಿಕೆಯಲ್ಲಿ ತರಬೇತಿ ನೀಡುತ್ತಿದ್ದೇವೆ. ನಗರ ತೋಟಗಾರಿಕೆ ಕಾರ್ಯಕ್ರಮವು ಮುಖ್ಯವಾಗಿ ಗೃಹಿಣಿಯರ ಮೇಲೆ ಕೇಂದ್ರೀಕರಿಸುತ್ತದೆ.

ಕೀಟನಾಶಕಗಳನ್ನು ಮತ್ತು ಭಾರ ಲೋಹಗಳನ್ನು ಹೊಂದಿರುವ ನೀರನ್ನು ಬಳಸಿ ಬೆಳೆದ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸುವ ಸಂಶೋಧನಾ ಅಧ್ಯಯನಗಳನ್ನು ನಾವು ನೋಡಿದ್ದೇವೆ. ಆದ್ದರಿಂದ, ಈಗಾಗಲೇ ಅದರಲ್ಲಿ ತೊಡಗಿರುವ ತಜ್ಞರು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಭೆ ನಡೆಸಲು ಮತ್ತು ಗೃಹಿಣಿಯರು ಸ್ವಯಂ ಬಳಕೆಗಾಗಿ ಸಣ್ಣ ಪ್ರಮಾಣದಲ್ಲಿ ತರಕಾರಿಗಳನ್ನು ಬೆಳೆಸಲು ಸಹಾಯ ಮಾಡಲು ನಾವು ಯೋಚಿಸಿದ್ದೇವೆ ಎಂದರು.

ಜಿಕೆವಿಕೆಯಲ್ಲಿ ತರಬೇತಿ ಅವಧಿ ನಡೆಯುತ್ತಿದೆ

ನಾವು ಈ ಸೆಷನ್ ನ್ನು ನರ್ಸರಿಯಲ್ಲಿ ನಡೆಸುತ್ತೇವೆ. ಇದು ನಮ್ಮ ಕ್ಯಾಂಪಸ್‌ನಲ್ಲಿಯೇ ಇರುತ್ತದೆ. ಇಲ್ಲಿಯವರೆಗೆ, ನಾವು ಎಂಟು ಸೆಷನ್ ನಡೆಸಿದ್ದೇವೆ. ಪ್ರತಿ ಅವಧಿಯಲ್ಲಿ ನಿವೃತ್ತ ಉದ್ಯೋಗಿಗಳು, ಗೃಹಿಣಿಯರು ಭಾಗವಹಿಸುತ್ತಿದ್ದು, ಗೊಬ್ಬರವನ್ನು ಹೇಗೆ ತಯಾರಿಸುವುದು, ಮಡಿಕೆ ಮಾಡುವುದು ಮತ್ತು ಮರುಕುಂಡ ಮಾಡುವುದು, ಸಸ್ಯಗಳಿಗೆ ನೀರು ಒದಗಿಸುವ ಅವಧಿ ಮತ್ತು ಇನ್ನೂ ಹೆಚ್ಚಿನದನ್ನು ತಿಳಿದುಕೊಳ್ಳಲು ಕುತೂಹಲ ಹೊಂದಿರುವ ಕೆಲವು ಯುವಕರು ಸೇರಿದಂತೆ ವಿವಿಧ ಹಿನ್ನೆಲೆಗಳಿಂದ ಬಂದವರಿದ್ದಾರೆ ಎಂದರು.

ಮಡಿಕೆ ಮಾಡುವುದು, ಗೊಬ್ಬರ ತಯಾರಿಸುವುದನ್ನು ಯೂಟ್ಯೂಬ್‌ನಲ್ಲಿರುವ ವಿಡಿಯೊ ನೋಡಿ ಕಲಿಯಬಹುದಲ್ಲವೇ ಎಂದು ಕೇಳಿದಾಗ, ನಮ್ಮ ಸೆಷನ್ ಗಳಿಗೆ ಬರುವ ಅನೇಕ ಜನರು ಈ ವಿಡಿಯೊ ನೋಡಿದರೂ, ತರಕಾರಿಗಳು ಮತ್ತು ಹಣ್ಣುಗಳನ್ನು ಯಶಸ್ವಿಯಾಗಿ ಬೆಳೆಯಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅವರು ಗೊಬ್ಬರವನ್ನು ಹೇಗೆ ತಯಾರಿಸಬೇಕೆಂದು ಅರ್ಥಮಾಡಿಕೊಳ್ಳಲು ವಿಫಲರಾಗಿರಬಹುದು ಅಥವಾ ಸಸ್ಯಗಳಿಗೆ ಹೆಚ್ಚು ನೀರು ಹಾಕಿರಬಹುದು. ಇದರ ಪರಿಣಾಮವಾಗಿ ಅವು ಸಾಯಬಹುದು ಎಂದರು.

ಮರುಕುಂಡ ಹಾಕುವ ಪ್ರಾಮುಖ್ಯತೆ, ಸಂಯೋಜಿತ ಕೀಟ ಮತ್ತು ರೋಗ ನಿರ್ವಹಣೆ, ಹೂವು ಮತ್ತು ಒಳಾಂಗಣ ಸಸ್ಯಗಳನ್ನು ಬೆಳೆಸುವ ವಿಧಾನಗಳು ಮತ್ತು ಇನ್ನೂ ಹೆಚ್ಚಿನದನ್ನು ಅವರು ಅರ್ಥಮಾಡಿಕೊಳ್ಳಲು ವಿಫಲರಾಗಿರಬಹುದು ಇವುಗಳನ್ನು ನಾವು ತರಬೇತಿಯಲ್ಲಿ ಹೇಳಿಕೊಡುತ್ತೇವೆ ಎಂದರು.

ತರಬೇತಿಯ ಜೊತೆಗೆ, ಭಾಗವಹಿಸುವವರಿಗೆ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುವ ಕಿಟ್, ಮನೆಯಲ್ಲಿ ಗೊಬ್ಬರ ತಯಾರಿಸಲು ಮಡಿಕೆಗಳು, ನಗರ ತೋಟಗಾರರಿಗೆ ನಗರ ತೋಟಗಾರಿಕೆಯಲ್ಲಿನ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡಲು 100 ಕ್ಕೂ ಹೆಚ್ಚು ಸಲಹೆಗಳನ್ನು ಹೊಂದಿರುವ 'ಗಾರ್ಡನ್ ಟಿಪ್ಸ್' ಪುಸ್ತಕ ಮತ್ತು ಇತರ ವಸ್ತುಗಳನ್ನು ಸಹ ನೀಡಲಾಗುತ್ತದೆ.

ತಮ್ಮ ಸ್ವಂತ ಉದ್ಯಾನವನ್ನು ಮಾಡಲು ಸ್ಥಳಾವಕಾಶದ ಕೊರತೆಯ ಸಂದರ್ಭದಲ್ಲಿ, ಜನರು ಖಾಲಿ ಸ್ಥಳಗಳಲ್ಲಿ ಸಮುದಾಯ ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು ಅಥವಾ ಅವರ ಅಪಾರ್ಟ್ ಮೆಂಟ್ ಗಳಲ್ಲಿ ಟೆರೇಸ್ ಗಳ ಜಾಗದಲ್ಲಿ ಮಾಡಬೇಕೆಂದು ನಾವು ಸೂಚಿಸಿದ್ದೇವೆ ಎಂದು ಸುರೇಶ್ ಹೇಳಿದರು.

ಬೆಂಗಳೂರಿನಲ್ಲಿ ಯಶಸ್ಸಿನ ಕಥೆಗಳು

ಗೃಹಿಣಿ ಮತ್ತು ವಿಮಾ ಏಜೆಂಟ್ ರಾಜಲಕ್ಷ್ಮಿ ಕೆಎಸ್ (60ವ) ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ನಾನು ನಾಲ್ಕು ವರ್ಷಗಳಿಂದ ಮನೆ ತೋಟವನ್ನು ಹೊಂದಿದ್ದೇನೆ, ಇತ್ತೀಚೆಗೆ ನಾನು ಬೆಳೆಸಿದ ಸಸ್ಯಗಳನ್ನು ಪೋಷಿಸಬೇಕಾಗಿತ್ತು. ನಗರ ತೋಟಗಾರಿಕೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯಲು ತರಬೇತಿ ಕಾರ್ಯಕ್ರಮಗಳಿವೆಯೇ ಎಂದು ನಾನು ನೋಡಿದೆ. ಮರುಕುಂಡ ಹಾಕುವ ವಿಧಾನಗಳು ಮತ್ತು ಅದರ ಮಹತ್ವವನ್ನು ನಾನು ಕಲಿತಿದ್ದೇನೆ. ಈಗ, ನಾನು ಮರುಕುಂಡ ಹಾಕಲು ಪ್ರಾರಂಭಿಸಿದ್ದೇನೆ ಎಂದರು.

ರಾಜಲಕ್ಷ್ಮಿ ತಮ್ಮ ತೋಟದಲ್ಲಿ ಪ್ಯಾಶನ್ ಫ್ರೂಟ್ ಬೆಳೆಯುತ್ತಿದ್ದಾರೆ. ನಾನು ಪ್ರತಿ ವರ್ಷ 100 ರಿಂದ 150 ಪ್ಯಾಶನ್ ಫ್ರೂಟ್ ಬೆಳೆಯಲು ಸಾಧ್ಯವಾಗಿದೆ. ನಾವು ಮನೆಗೆ ಬಳಸಿ ಸ್ನೇಹಿತರಿಗೆ ನೀಡುತ್ತೇವೆ. ಸಾಮಾನ್ಯವಾಗಿ, ಜೂನ್‌ನಲ್ಲಿ ಹೂವು ಬಿಡಲು ಪ್ರಾರಂಭವಾಗಿ ಜುಲೈನಲ್ಲಿ ನಮಗೆ ಉತ್ತಮ ಇಳುವರಿ ಬರುತ್ತದೆ. ನಾನು ಬೆಂಡೆಕಾಯಿ, ಮಲಬಾರ್ ಪಾಲಕ್ (ಬಸಲೆ ಸೊಪ್ಪು), ಬದನೆಕಾಯಿ ಮತ್ತು ಕೊಲೊಕಾಸಿಯಾ ಎಲೆಗಳು (ಕೆಸುವೆ) ಗಳನ್ನು ಸಹ ಬೆಳೆದಿದ್ದೇನೆ. ಇವುಗಳಿಂದ ನಾವು ರುಚಿಕರವಾದ ಪತ್ರೋಡೆ ತಯಾರಿಸುತ್ತೇವೆ. ನಗರ ತೋಟಗಾರಿಕೆಯಲ್ಲಿ ಯಶಸ್ವಿಯಾಗಿರುವ ಜನರ ಮನೆಗಳಿಗೆ ಭೇಟಿ ನೀಡುವ ಅವಕಾಶವೂ ನಮಗೆ ಸಿಗುತ್ತದೆ ಎಂದರು.

ಇಂದಿರಾನಗರದ ನಿವಾಸಿ ಶ್ರೀನಿವಾಸ್ ಮೂರ್ತಿ ಅವರು ತಮ್ಮ ಟೆರೇಸ್‌ನಲ್ಲಿ ಪೂರ್ಣ ಪ್ರಮಾಣದ ನಗರ ಉದ್ಯಾನವನ್ನು ಬೆಳೆಸಿದ್ದಾರೆ. ನಾನು ಮನೆಯಲ್ಲಿ ಉದ್ಯಾನವನ್ನು ಬೆಳೆಸಲು ಪ್ರಾರಂಭಿಸಿ ನಾಲ್ಕು ವರ್ಷಗಳಾಗಿವೆ. ನಾನು ಮತ್ತು ನನ್ನ ಪತ್ನಿ ಸಸ್ಯಗಳನ್ನು ಬೆಳೆಸಲು ಹೊಸ ವಿಧಾನಗಳನ್ನು ಪ್ರಯತ್ನಿಸುತ್ತಲೇ ಇದ್ದೇನೆ. ಅದಕ್ಕಾಗಿಯೇ ನಾನು ನಗರ ತೋಟಗಾರಿಕೆಯ ಸೆಷನ್ ಗಳಿಗೆ ಹಾಜರಾಗುತ್ತೇನೆ, ಇದು ಸಲಹೆಗಳನ್ನು ಕಲಿಯಲು ಸಹಾಯ ಮಾಡುತ್ತದೆ. ಎಲೆಕೋಸು, ಹೂಕೋಸು, ಬದನೆಕಾಯಿ, ಪಾಲಕ್, ಮೂಲಂಗಿ, ರಿಡ್ಜ್ ಸೋರೆಕಾಯಿ ಮತ್ತು ಇತರ ಎಲ್ಲಾ ರೀತಿಯ ತರಕಾರಿಗಳನ್ನು ಬೆಳೆಸಿದ್ದೇನೆ.

ಕನಕಾಂಬರ ಹೂವನ್ನು ಸಹ ಬೆಳೆದಿದ್ದೇನೆ, ಇದನ್ನು ಜನಪ್ರಿಯವಾಗಿ 'ಪಟಾಕಿ' ಎಂದು ಕರೆಯಲಾಗುತ್ತದೆ. ಮಳೆ ಅಥವಾ ಬರಗಾಲದಿಂದಾಗಿ ತಮ್ಮ ಬೆಳೆಗಳು ನಾಶವಾದಾಗ ರೈತರು ಅನುಭವಿಸುವ ಭಾವನೆಗಳು ನಮಗೆ ಈಗ ಅರ್ಥವಾಗುತ್ತದೆ. ನಗರ ತೋಟಗಾರಿಕೆಯ ಸಂದರ್ಭದಲ್ಲಿ, ನಾವು ಮಡಕೆಗಳಲ್ಲಿ ಸಸ್ಯಗಳನ್ನು ಬೆಳೆಸುವುದರಿಂದ, ಅವುಗಳಿಗೆ ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ನೀರುಣಿಸಲು ಸಾಧ್ಯವಿಲ್ಲ. ನಗರದಲ್ಲಿ ನಿರಂತರ ಮಳೆಯಾದಾಗ, ಹೆಚ್ಚಿನ ಹೂವು- ಹಣ್ಣು ಮತ್ತು ತರಕಾರಿಗಳು ಸಹ ಸಾಯುತ್ತವೆ. ಆಗ ಹೊಸದಾಗಿ ನೆಡುತ್ತೇನೆ ಎಂದು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ: ಮಸೀದಿ ಬಳಿ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ; FIR ದಾಖಲು, ಐವರು ಆರೋಪಿಗಳ ಬಂಧನ; Video

ಹುಬ್ಬಳ್ಳಿ: ಪೊಲೀಸರು ವಶಕ್ಕೆ ಪಡೆದಾಗ ಆಕೆ ವಿವಸ್ತ್ರಳಾಗಿರಲಿಲ್ಲ; ವ್ಯಾನ್‌ ಹತ್ತಿದ ಮೇಲೆ ತಾನೇ ಬಟ್ಟೆ ಬಿಚ್ಚಿ ಸೀನ್‌ ಕ್ರಿಯೇಟ್‌ - ಶಶಿಕುಮಾರ್

ತಮಿಳುನಾಡು ಚುನಾವಣೆ: ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ಪಿಎಂಕೆ ಸೇರ್ಪಡೆ

ಬಳ್ಳಾರಿ ಗಲಭೆ ಸಂಬಂಧ ಮತ್ತೊಬ್ಬ ಅಧಿಕಾರಿ ತಲೆ ದಂಡ: IG ವರ್ತಿಕಾ ಕಟಿಯಾರ್‌ ವರ್ಗಾವಣೆ; P. S ಹರ್ಷ ನೇಮಕ

ಸಿಂಗಪುರದಲ್ಲಿ ಸೇನಾ ತರಬೇತಿಗೆ ಸೇರಿದ ಲಾಲೂ ಮೊಮ್ಮಗ: ರೋಹಿಣಿ ಆಚಾರ್ಯ ಹಿರಿಯ ಪುತ್ರನ ಹೊಸ ಸಾಹಸ!

SCROLL FOR NEXT