ಮುಸ್ಲಿಂ ಕುಟುಂಬದ ಲಕ್ಷ್ಮಿ ಪೂಜೆ 
ವಿಶೇಷ

ಗದಗ: ಕೋಮು ಸೌಹಾರ್ದತೆ ಸಂದೇಶ; 35 ವರ್ಷಗಳಿಂದ ಲಕ್ಷ್ಮೀ ಪೂಜೆ ನೆರವೇರಿಸುತ್ತಿರುವ ಮುಸ್ಲಿಂ ಕುಟುಂಬ!

ಜಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಸೈಕಲ್ ಪಂಕ್ಚರ್ ಮತ್ತು ದುರಸ್ತಿ ಅಂಗಡಿಯನ್ನು ನಡೆಸುತ್ತಿರುವ ಕುತುಬುದ್ದೀನ್ ಗದದ್ ಅವರು, ಪ್ರತಿ ದೀಪಾವಳಿಯಂದು ತಮ್ಮ ಅಂಗಡಿಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ಕೋಮು ಸೌಹಾರ್ದತೆಯ ಸಂದೇಶವನ್ನು ಸಾರುತ್ತಿದ್ದಾರೆ.

ಗದಗ : ಜಿಲ್ಲೆಯ ಜಕ್ಕಲಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಕಳೆದ 35 ವರ್ಷಗಳಿಂದ ದೀಪಾವಳಿಯನ್ನು ಆಚರಿಸಿಕೊಂಡು ಬರುತ್ತಿದೆ. ಈ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ.

ಜಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಸೈಕಲ್ ಪಂಕ್ಚರ್ ಮತ್ತು ದುರಸ್ತಿ ಅಂಗಡಿಯನ್ನು ನಡೆಸುತ್ತಿರುವ ಕುತುಬುದ್ದೀನ್ ಗದದ್ ಅವರು, ಪ್ರತಿ ದೀಪಾವಳಿಯಂದು ತಮ್ಮ ಅಂಗಡಿಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ಕೋಮು ಸೌಹಾರ್ದತೆಯ ಸಂದೇಶವನ್ನು ಸಾರುತ್ತಿದ್ದಾರೆ.

ದೀಪಾವಳಿಗೆ ಎರಡು ದಿನಗಳ ಮುಂಚಿತವಾಗಿಯೇ ಕುತುಬುದ್ದೀನ್ ಅವರ ಕುಟುಂಬದವರು ತಮ್ಮ ಅಂಗಡಿಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಅವರು ಅಂಗಡಿಯನ್ನು ದೀಪಗಳಿಂದ ಅಲಂಕರಿಸಿ, ಲಕ್ಷ್ಮಿ ದೇವಿಯ ಮಂತ್ರಗಳನ್ನು ಪಠಿಸಲು ಅರ್ಚಕರನ್ನು ಆಹ್ವಾನಿಸುತ್ತಾರೆ . ಸಿಹಿ ಕಡುಬು ಮತ್ತು ಇತರ ಸಾಂಪ್ರದಾಯಿಕ ದೀಪಾವಳಿ ತಿನಿಸುಗಳನ್ನು ತಯಾರಿಸಿ ಹಬ್ಬದಂದು ತಮ್ಮ ನೆರೆಹೊರೆಯವರನ್ನೂ ಆಹ್ವಾನಿಸುತ್ತಾರೆ.

ಕುತುಬುದ್ದೀನ್ ಅವರ ಕುಟುಂಬವು ಎಲ್ಲಾ ಧರ್ಮಗಳ ಹಬ್ಬಗಳನ್ನು ಆಚರಿಸುವುದಕ್ಕೆ ಹೆಸರುವಾಸಿಯಾಗಿದೆ. ಜಾತಿ-ಮತದ ಭೇದವಿಲ್ಲದೆ ಜನರು ತಮ್ಮ ಅಂಗಡಿಗೆ ಬರುತ್ತಾರೆ ಎಂದು ಅವರು ಹೇಳುತ್ತಾರೆ. ನಾನು ಉತ್ತಮ ಜೀವನ ನಡೆಸಲು ಎಲ್ಲರೂ ಸಹಾಯ ಮಾಡುತ್ತಿದ್ದಾರೆ, ಎಂದು ಅವರು ನುಡಿಯುತ್ತಾರೆ. ಹೀಗಾಗಿ, ಎಲ್ಲಾ ಸಮುದಾಯಗಳ ದೇವರುಗಳನ್ನು ತಾನು ಪೂಜಿಸಬೇಕು ಎಂದು ಅವರು ನಂಬುತ್ತಾರೆ.

ತಮ್ಮ ದೈನಂದಿನ ದುಡಿಮೆಯ ಒತ್ತಡದ ನಡುವೆಯೂ, ಕಳೆದ 35 ವರ್ಷಗಳಿಂದ ಲಕ್ಷ್ಮಿ ದೇವಿಯನ್ನು ಪೂಜಿಸುವ ಸಂಪ್ರದಾಯವನ್ನು ಅವರು ನಿರಂತರವಾಗಿ ಪಾಲಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. 'ಗಾಂಧಿ ಗ್ರಾಮ' ಎಂದೇ ಕರೆಯಲ್ಪಡುವ ನಮ್ಮ ಊರಿನಲ್ಲಿ, ಕುತುಬುದ್ದೀನ್ ಅವರಂತಹ ವ್ಯಕ್ತಿಗಳಿಂದಾಗಿ ಯಾವುದೇ ಕೋಮು ಘರ್ಷಣೆಗಳು ನಡೆದಿಲ್ಲ ಎಂದು ಜಕ್ಕಲಿ ಗ್ರಾಮದ ನಿವಾಸಿ ಸಂಗಮೇಶ ಮೆಣಸಗಿ ತಿಳಿಸಿದರು.

ಹಬ್ಬದ ದಿನದಂದು, ಸಾಂಪ್ರದಾಯಿಕ ಪದ್ಧತಿಗಳ ಪ್ರಕಾರ ಲಕ್ಷ್ಮಿ ದೇವಿಯನ್ನು ಪೂಜಿಸಲು ಹಿಂದೂ ಅರ್ಚಕರನ್ನು ಆಹ್ವಾನಿಸುತ್ತೇವೆ. ಇದರಲ್ಲಿ ಮಂತ್ರ ಪಠಣ ಮತ್ತು ಆರತಿ ಬೆಳಗುವುದು ಸೇರಿರುತ್ತದೆ. ನಾವೆಲ್ಲರೂ ಒಟ್ಟಾಗಿ ಪೂಜೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಕುತುಬುದ್ದೀನ್ ಹೇಳಿದರು.

ನಾವು ನಮ್ಮ ಕುಟುಂಬದ ಏಳಿಗೆ ಮತ್ತು ಒಳಿತಿಗಾಗಿ, ಹಾಗೆಯೇ ಗ್ರಾಮಸ್ಥರೆಲ್ಲರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ. ಪೂಜೆಯ ನಂತರ, ನನ್ನ ಪತ್ನಿ ಮನೆಯಲ್ಲಿ ಕಡುಬು ಮತ್ತು ಇತರ ಖಾದ್ಯಗಳನ್ನು ತಯಾರಿಸುತ್ತಾರೆ. ಆರಂಭದಲ್ಲಿ 10 ಜನರು ಮಾತ್ರ ಸೇರುತ್ತಿದ್ದೆವು, ಆದರೆ ಈಗ ಆ ಸಂಖ್ಯೆ 50ಕ್ಕೂ ಹೆಚ್ಚಾಗಿದೆ. ಈ ಹಬ್ಬದ ಭಾಗವಾಗಿರುವುದಕ್ಕೆ ನಮಗೆ ಸಂತೋಷವಿದೆ ಮತ್ತು ನಮ್ಮ ಗ್ರಾಮಸ್ಥರೆಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

West Asia war: 'ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ, ಇಲ್ಲದಿದ್ದರೆ ನರಕ ಸೃಷ್ಟಿಸುತ್ತೇವೆ': ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಇರಾನ್ ಖಡಕ್ ಎಚ್ಚರಿಕೆ..!

DC ಹುದ್ದೆಯಲ್ಲಿ ಮುಂದುವರಿಯಲು 75 ಲಕ್ಷ ರೂ. ಲಂಚ?: ಹಾಸನ ಜಿಲ್ಲಾಡಳಿತದಲ್ಲಿ ಸಂಚಲನ ಸೃಷ್ಟಿಸಿದ ವಾಟ್ಸ್‌ಆ್ಯಪ್ ಚಾಟ್, ತನಿಖೆಗೆ HDK ಒತ್ತಾಯ..!

ವಾಹನ ಸವಾರರೇ ಗಮನಿಸಿ: ಮೇಖ್ರಿ ಸರ್ಕಲ್ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಆರಂಭ; ಮುಂದಿನ 18 ತಿಂಗಳು ಸಂಚಾರ ಬದಲಾವಣೆ..!

ರಾಜ್ಯದಲ್ಲಿ ತಾರಕಕ್ಕೇರಿದ ಪೋಸ್ಟರ್ ವಾರ್: ಕಾಂಗ್ರೆಸ್-BJP ನಡುವೆ ತೀವ್ರ ವಾಕ್ಸಮರ..!

NCP ಬಣಗಳ ವಿಲೀನದ ಸುಳಿವು: INDIA ಗೆ ಕೈ ಕೊಟ್ಟು NDA ಸೇರ್ತಾರಾ ಶರದ್ ಪವಾರ್, ಸುಪ್ರಿಯಾ?