ಬೆಂಗಳೂರು: ಪ್ರಸಕ್ತ ವರ್ಷ ನಡೆಯಲಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಐ-ಲೀಗ್ 2ನೇ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಗೆ ಕರ್ನಾಟಕದ ಕೆಜಿಎಫ್ ಅಕಾಡೆಮಿ ಬೆಮಲ್ ತಂಡ ಅವಕಾಶ ಪಡೆದುಕೊಂಡಿದೆ. ಕಳೆದ ವರ್ಷವೂ ಈ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಆದರೆ, ತಂಡದ ಹೆಸರು ಬದಲಾಯಿಸಬೇಕು ಎಂಬ ಬಗ್ಗೆ ಕೆಜಿಎಫ್ ಅಕಾಡಿಮಿ ಮತ್ತು ಬೆಮಲ್ ನಡುವೆ ನಡೆದ ವಿವಾದದಿಂದ ಈ ಬಾರಿ ಪಂದ್ಯಾವಳಿಗೆ ಅವಕಾಶ ಪಡೆಯುವುದು ಅತಂತ್ರವಾಗಿತ್ತು. ಆದರೆ, ಐಲೀಗ್ ಮುಖ್ಯಸ್ಥರಾಗಿರುವ ಕರ್ನಾಟಕ ಫುಟ್ಬಾಲ್ ಫೆಡರೇಷನ್ (ಕೆಎಫ್‌ಎಫ್) ಅದ್ಯಕ್ಷ ಎ.ಆರ್ ಕಲೀಲ್ ಸಮಸ್ಯೆಯನ್ನು ಬಗೆಹರಿಸಿ ತಂಡಕ್ಕೆ ಅವಕಾಶ ಕೊಡಿಸಿದ್ದಾರೆ ಎಂದು ಕೆಎಫ್‌ಎಫ್ ಮೂಲಗಳು ತಿಳಿಸಿವೆ.