ಕ್ರೀಡೆ

ಆಂಗ್ಲರಿಗೆ ಶಾಕಿಂಗ್ ಸೋಲು!

ಮುಂಬೈ: ಅಚ್ಚರಿಯ ಫಲಿತಾಂಶವೊಂದರಲ್ಲಿ ಶ್ರೀಲಂಕಾ ತಂಡ, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಆಂಗ್ಲರಿಗೆ ಸೋಲಿನ ಶಾಕ್ ನೀಡಿದೆ. ಶುಕ್ರವಾರ ನಡೆದ ಮಹಿಳಾ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಶ್ರೀಲಂಕಾ ತಂಡ, 1 ವಿಕೆಟ್ ಅಂತರದಿಂದ ಸೋಲಿಸಿತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 238 ರನ್ ಸೇರಿಸಿತು. ಈ ಮೊತ್ತವನ್ನು ಏದುಸಿರುವ ಬಿಡುತ್ತಾ ಬೆನ್ನಟ್ಟಿದ ಶ್ರೀಲಂಕಾ, 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿ, ಅಂತೂ ಇಂತೂ ಪಂದ್ಯದಲ್ಲಿ ಜಯ ಸಾಧಿಸಿತು.
ಆಂಗ್ಲರ ಸಾದಾರಣ ಮೊತ್ತ: ಟಾಸ್ ಗೆದ್ದಿದ್ದ ಶ್ರೀಲಂಕಾ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾದ ಎಡ್ವರ್ಡ್ಸ್ ಹಾಗೂ ವಾಯ್ಟ್ ಇಬ್ಬರೂ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಆದರೆ, ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ಬ್ರಿಂಡಲ್ (31), ಹೆತರ್ ನೈಟ್ (38), ಜೆನ್ನಿ ಗನ್ (51) ಹಾಗೂಬ್ರಂಟ್ ಅವರ ನೆರವಿನಿಂದಾಗಿ ಇಂಗ್ಲೆಂಡ್ ತಂಡ 238 ರನ್‌ಗಳ ಸಾಧಾರಣ ಮೊತ್ತವನ್ನು ದಾಖಲಿಸಿತು.
ಪ್ರಯಾಸದ ಗೆಲುವು: ಈ ಮೊತ್ತ ಬೆನ್ನಟ್ಟಿದ ಶ್ರೀಲಂಕಾಕ್ಕೆ ಜಯಂಗಾನಿ ಹಾಗೂ ಯಶೋದಾ ಮೆಂಡಿಸ್ ಇಬ್ಬರೂ ಭರ್ಜರಿ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 103 ರನ್‌ಗಳ ಜೊತೆಯಾಟವಾಡಿತು. ನಂತರ ಸಿರಿವರ್ಧನೆ, ಯಶೋದಾ ಅವರ ಜೊತೆ ಸೇರಿ 2ನೇ ವಿಕೆಟ್‌ಗೆ 39 ರನ್ ಸೇರಿಸಿದರು. 33ನೇ ಓವರ್‌ನಲ್ಲಿ ಯಶೋದಾ ಔಟಾದರು. ನಂತರ, ಸಿರಿವರ್ಧನೆ ಅವರೂ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಲಂಕಾ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೂ, ಅಂತಿಮ ಹಂತದಲ್ಲಿ ಜಯ ಗಳಿಸುವಲ್ಲಿ ಅದು ಯಶಸ್ವಿಯಾಯಿತು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 238/8 (50 ಓವರ್)
ಗನ್ 52 (71), ಜೋನ್ಸ್ 41 (49)
ಬೌಲಿಂಗ್: ಸಿರಿವರ್ಧನೆ 62/2, ಸೇನೆವಿತರಣ 35/2
ಶ್ರೀಲಂಕಾ: 244/9 (50 ಓವರ್)
ಜಯಂಗಾನಿ 62 (72), ಕೌಶಲ್ಯ 56 (41)
ಬೌಲಿಂಗ್: ಬ್ರಂಟ್ 36/2, ಬ್ರಿಂಡಲ್ 38/2
ಪಂದ್ಯ ಶ್ರೇಷ್ಠ: ಕೌಶಲ್ಯಾ (ಶ್ರೀಲಂಕಾ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ