ಪರ್ತ್: ಮಿಚೆಲ್ ಸ್ಟಾಕ್ (5 ವಿಕೆಟ್) ಮಾರಕ ಬೌಲಿಂಗ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 9 ವಿಕೆಟ್ ಅಂತರದಿಂದ ಹೀನಾಯ ಸೋಲನುಭವಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ 23.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 70 ರನ್ ಗಳಿಸಿತು. ನಂತರ ಆಸ್ಟ್ರೇಲಿಯಾ ಕೇವಲ 9.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿ ವಿಜಯ ಸಾಧಿಸಿತು.
ಐದು ಪಂದ್ಯಗಳ ಸಣಿಯ ಮೊದಲ ಹಣಾಹಣಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಕೇವಲ 20 ರನ್ ನೀಡಿದ ಸ್ಟಾರ್ಕ್ 5 ವಿಕೆಟ್ ಪಡೆದರು. ಕ್ಲಿಂಟ್ ಮೆಕಿ 3 ಮತ್ತು ಜೇಮ್ಸ್ ಫಾಲ್ಕೇನರ್ 2 ವಿಕೆಟ್ ಕಬಳಿಸಿದರು.
ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಇದು ಮೂರನೇ ಅತಿ ಕಡಿಮೆ ಮೊತ್ತವಾಗಿದೆ. ಪ್ರವಾಸಿ ವಿಂಡೀಸ್ ಇದೇ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ 1978ರಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ ನಡೆದ ಪಂದ್ಯದಲ್ಲಿ 91 ರನ್‌ಗಳಿಗೆ ಆಲೌಟ್ ಆಗಿತ್ತು. 2004ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ವಿಂಡೀಸ್ 54 ರನ್‌ಗಳಿಗೆ ಆಲೌಟ್ ಆಗಿತ್ತು. ಅದು ವಿಂಡೀಸ್ ಏಕದಿನ ಕ್ರಿಕೆಟ್‌ನ ಅತಿ ಕಡಿಮೆ ಮೊತ್ತವಾಗಿದೆ.
ಪಂದ್ಯದಲ್ಲಿ ವಿಂಡೀಸ್ ಪರ ಕೀರನ್ ಪಾವೆಲ್ (11), ಡಾರೆನ್ ಬ್ರಾವೋ (11), ಡಾರೆನ್ ಸಾಮಿ (16) ಮಾತ್ರ ಎರಡಂಕಿ ದಾಟಿದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ವೆಸ್ಟ್ ಇಂಡೀಸ್ 19 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ, ಸ್ಟಾರ್ಕ್ ತಮ್ಮ 4ನೇ ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ (ಅಜೇಯ 51) ಅರ್ಧ ಶತಕ ದಾಖಲಿಸಿದರು. ಆ್ಯರೋನ್ ಫಿಂಚ್ (10) ಹಾಗೂ ಉಸ್ಮಾನ್ ಕುವಾಜ್ (ಅಜೇಯ 8) ತಂಡವನ್ನು ಜಯದ ದಡಕ್ಕೆ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 70/10 (23.5 ಓ.)
ಡರೇನ್ ಸಾಮಿ 16, ಪಾವೆಲ್ 11
ಬೌಲಿಂಗ್: ಸ್ಟಾರ್ಕ್ 20/5, ಮೆಕೇ 10/3
ಆಸ್ಟ್ರೇಲಿಯಾ: 71/1
(9.2 ಓವರ್)
ಗ್ಲೆನ್ ಮ್ಯಾಕ್ಸ್ ಅಜೇಯ 51,
ಪಿಂಚ್ 10; ಬೌಲಿಂಗ್: ಹೋಲ್ಡರ್ 18/1, ರೋಚ್ 29/0
ಪಂದ್ಯಶ್ರೇಷ್ಠ: ಮಿಚೆಲ್ ಸ್ಟಾರ್ಕ್