ಬೆಂಗಳೂರು: ಕರ್ನಾಟಕದ ವಿಜಯ ಬ್ಯಾಂಕ್ ತಂಡ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಡೆದ ಎರಡೂ ಪಂದ್ಯಗಳಲ್ಲಿ ಕೈಚೆಲ್ಲಿದೆ.ಪಂಜಾಬ್ ಪೊಲೀಸ್ ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 72-61 ಅಂಕಗಳಿಂದ ಮೊದಲ ಪಂದ್ಯದಲ್ಲಿ ಕೈಚೆಲ್ಲಿದ ವಿಜಯ ಬ್ಯಾಂಕ್, ಸಂಜೆ ನಡೆದ ಎರಡನೇ ಪಂದ್ಯದಲ್ಲಿ ಕ್ಯಾಪ್ಟನ್ ಕ್ಲಬ್ ಡೆಲ್ಲಿ ತಂಡದ ವಿರುದ್ಧ 82-72 ಅಂಕಗಳಿಂದ ಪರಾಭವಗೊಂಡಿತು.ಐಎಎಫ್ ತಂಡ ಸಹ ತನ್ನ ಜಯದ ಹಾದಿಯನ್ನು ಮುಂದುವರಿಸಿದೆ. ಐಎಎಫ್ ಶುಕ್ರವಾರ ಸೆಂಟ್ರಲ್ ಎಕ್ಸ್‌ಸೈಜ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 92-82 ಅಂಕಗಳಿಂದ ಜಯ ಸಾಧಿಸಿತು.ಸಂಜೆ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಸೌಥ್ ಸೆಂಟ್ರಲ್ ರೇಲ್ವೆ ತಂಡ ಹರ್ಯಾಣ ತಂಡವನ್ನು 87-72ಅಂಕಗಳಿಂದ ಪರಾಭವಗೊಳಿಸಿತು.ಇನ್ನು ಮಹಿಳೆಯರ ವಿಭಾಗದಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಕೇರಳ ತಂಡ ಡೆಲ್ಲಿ ವಿರುದ್ಧ 66-42 ಅಂಕಗಳಿಂದ ಜಯ ಸಾಧಿಸಿತು. ಬೆಳಗ್ಗೆ ನಡೆದ ಪಂದ್ಯದಲ್ಲಿ ಸೌಥ್ ಈಸ್ಟ್ ಸೆಂಟ್ರಲ್ ರೇಲ್ವೆ ತಂಡ ಕರ್ನಾಟಕ ವನಿತೆಯರ ತಂಡವನ್ನು 73-55 ಅಂಕಗಳಿಂದ ಪರಾಭವಗೊಳಿಸಿತು. ಸಂಜೆ ನಡೆದ ಪಂದ್ಯದಲ್ಲಿ ಅದೇ ಸೌಥ್ ಈಸ್ಟ್ ಸೆಂಟ್ರಲ್ ರೇಲ್ವೆ ತಂಡ ಡೆಲ್ಲಿಯನ್ನು 64-38 ಅಂಕಗಳಿಂದ ಸೋಲಿಸಿತು.