ಪ್ಯಾರಿಸ್: ಪ್ಯಾರಿಸ್- ಸೇಂಟ್ ಜರ್ಮೇನ್ (ಪಿಎಸ್‌ಜಿ) ತಂಡಕ್ಕೆ ತರಬೇತುದಾರನಾಗಿ ನೇಮಕಗೊಂಡಿರುವ ಇಂಗ್ಲೆಂಡ್ ಪುಟ್ಬಾಲ್ ತಂಡದ ಮಾಜಿ ನಾಯಕ ಡೇವಿಡ್ ಬೆಕಂ ಅವರು, ತಮ್ಮ ಸಂಬಳವನ್ನು ಇಂಗ್ಲೆಂಡ್‌ನಲ್ಲಿನ ಮಕ್ಕಳ ಧರ್ಮಾರ್ಥ ಸಂಸ್ಥೆಗೆ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಹಲವಾರು ತಂಡಗಳಿಗೆ ತರಬೇತುದಾರರಾಗುವ ಆಫರ್‌ಗಳು ಬೆಕಂ ಮುಂದಿದ್ದರೂ, ಎಲ್ಲವನ್ನೂ ತಿರಸ್ಕರಿಸಿರುವ ಅವರು, ಪಿಎಸ್‌ಜಿ ತಂಡಕ್ಕೆ ತರಬೇತುದಾರರಾಗಲು ನಿರ್ಧರಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ, ಐದು ತಿಂಗಳ ಒಪ್ಪಂದವನ್ನೂ ಅವರು ಪಿಎಸ್‌ಜಿ ವ್ಯವಸ್ಥಾಪಕ ಮಂಡಳಿಯೊಂದಿಗೆ ಮಾಡಿಕೊಂಡಿದ್ದಾರೆ.
ಈ ಐದು ತಿಂಗಳ ಸಂಬಳವನ್ನು ಅವರು ಮಕ್ಕಳ ಧರ್ಮಾರ್ಥ ಸಂಸ್ಥೆಗೆ ನೀಡುವುದಾಗಿ ಬೆಕಂ, ಶುಕ್ರವಾರ ಘೋಷಿಸಿದ್ದಾರೆ.