ಮುಂಬೈ: ಕಿವೀಸ್ ಬೌಲರ್ಗಳ ಕರಾರುವಾಕ್ ದಾಳಿಯಿಂದಾಗಿ, ಶ್ರೀಲಂಕಾ ತಂಡ, ಶುಕ್ರವಾರ ನಡೆದ ಮಹಿಳಾ ವಿಶ್ವಕಪ್ನ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ, ಕಿವೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಗಿ 103 ರನ್ಗೆ ಆಲೌಟ್ ಆಯಿತು.
ಲಂಕಾ ನೀಡಿದ್ದ ಸುಲಭ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ಗೆ ಗೆಲುವು ಸಾಧಿಸುವುದೇನೂ ಕಷ್ಟವಾಗಲಿಲ್ಲ. ಮೊದಲ ವಿಕೆಟ್ಗೆ ಆರಂಭಿಕರಾದ ಮೆಕೇ, ಬೇಟ್ಸ್ ಜೋಡಿ 71 ರನ್ ಕಲೆಹಾಕಿತು. ಅದೇ ಮೊತ್ತಕ್ಕೆ ಬೇಟ್ಸ್ ಹಾಗೂ ಮೂರನೇ ಕ್ರಮಾಂಕದ ಸ್ಯಾಟರ್ತ್ವೇಯ್ಟ್ ಅವರ ವಿಕೆಟ್ ಉರುಳಿದರೂ, ನಾಲ್ಕನೇ ಕ್ರಮಾಂಕದ ಡಿವೈನ್ ಹಾಗೂ ಆರಂಭಿಕರಾದ ಮೆಕೇ ಇಬ್ಬರೂ ತಂಡವನ್ನು ಜಯದ ದಡ ಮುಟ್ಟಿಸುವಲ್ಲಿ ಸಫಲರಾದರು.