ಕ್ರೀಡೆ

ಪೋಲಾದ ಪೊಲಾರ್ಡ್ ಶತಕ; ಕಾಂಗರೂಗಳಿಗೆ 5 ವಿಕೆಟ್ ಜಯ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರು ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲೂ ವಿಂಡೀಸ್ ವಿರುದ್ಧ ಆಸ್ಟ್ರೇಲಿಯಾ ಜಯ ಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ವಿಂಡೀಸ್ ತಂಡ ಪೊಲಾರ್ಡ್ ಅವರ ಅಜೇಯ ಶತಕ (109)ದ ಸಹಾಯದಿಂದ 49.4 ಓವರ್‌ಗಳಲ್ಲಿ 220 ರನ್ ಗಳಿಸಿತು. ಇವರಿಗೆ ಸಾಧಾರಣವಾಗಿ ಸಾಥ್ ನೀಡಿದ ನಾಯಕ ಸಾಮಿ (25) ಹಾಗೂ ನಾರಾಯಣ್ (23) ರನ್‌ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್‌ಮನ್‌ಗಳು ಕ್ರಿಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಈ ಗುರಿಯನ್ನು ಬೆನ್ನಟಿದ ಆಸ್ಟ್ರೇಲಿಯಾ ತಂಡ ವ್ಯಾಟ್ಸನ್ ಅವರ ಉಪಯುಕ್ತ 76 ರನ್‌ಗಳ ಸಹಾಯದಿಂದ 44.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಉಳಿದಂತೆ ಫಿಂಚ್ 25, ಕ್ಲಾರ್ಕ್ 37, ವೊಗ್ಸ್ 28 ರನ್‌ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ವಿರೋಚಿತ ಹೋರಾಟ ನಡೆಸಿ ಶತಕಗಳಿಸಿದ ಕಿರನ್ ಪೊಲಾರ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.


ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 220/10 (49.4 ಓ.)
ಪೊಲಾರ್ಡ್ ಅಜೇಯ 109 (136), ಸಾಮಿ 25 (42); ಬೌಲಿಂಗ್: ಜಾನ್ಸನ್ 36/3, ಕಟಿಂಗ್ 45/3
ಆಸ್ಟ್ರೇಲಿಯಾ 221/5 (44.5 ಓ.); ವಾಟ್ಸನ್ 76 (84), ಕ್ಲಾರ್ಕ್ 37 (65); ಬೌಲಿಂಗ್: ನಾರಾಯಣ್ 34/2, ಬೆಸ್ಟ್ 37/2
            ಪಂದ್ಯಶ್ರೇಷ್ಠ: ಕಿರನ್ ಪೊಲಾರ್ಡ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!