ನವದೆಹಲಿ: ಇತ್ತೀಚೆಗೆ ಬಿಸಿಸಿಐನ ಕಾರ್ಪೊರೇಟ್ ಸರಣಿಯಲ್ಲಿ ಅಸಭ್ಯ ವರ್ತನೆ ತೋರಿದ್ದ ಭಾರತದ ವೇಗಿ ಪ್ರವಿಣ್ ಕುಮಾರ್ ಅವರನ್ನು ಬಿಸಿಸಿಐ ಅಮಾನತ್ತುಗೊಳಿಸಿದೆ.
ಮುಂಬರುವ ಅಂತಾರಾಜ್ಯಗಳ ನಡುವಿನ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸದಂತೆ ಪ್ರವಿಣ್ ಕುಮಾರ್ ಅವರಿಗೆ ತಿಳಿಸಿರುವ ಬಿಸಿಸಿಐ, ಶೋಕಾಸ್ ನೋಟಿಸ್ ನೀಡಿದೆ. ಬಿಸಿಸಿಐ ಪ್ರವಿಣ್ ಕುಮಾರ್ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಹಾಗೆಯೇ ಮುಂಬರುವ ಅಂತಾರಾಜ್ಯಗಳ ನಡುವಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸದಂತೆ ಅಮಾನತ್ತು ಮಾಡಲಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.