ಕರ್ನಾಟಕಕ್ಕೆ 4ನೇ ಜಯ
ಕೊಲ್ಲಂ: ದಿಟ್ಟ ಪ್ರದರ್ಶನ ನೀಡಿದ ಕರ್ನಾಟಕ ತಂಡ ಸಂತೋಷ್ ಟ್ರೋಫಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬಿಹಾರ ತಂಡವನ್ನು 3-0 ಗೋಲುಗಳಿಂದ ಪರಾಭವಗೊಳಿಸಿತು. ಪಂದ್ಯದ 2ನೇ ನಿಮಿಷದಲ್ಲಿ ಕರ್ನಾಟದ ಪರ ರಾಜೇಶ್ ಮೊದಲ ಗೋಲು ದಾಖಲಿಸಿದರು. ಆಗ ಕರ್ನಾಟಕ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತು.
12ನೇ ನಿಮಿಷದಲ್ಲಿ ಸ್ಟೇಫೆನ್ ಮತ್ತೊಂದು ಗೋಲು ದಾಖಲಿಸಿದರು. 21ನೇ ನಿಮಿಷದಲ್ಲಿ ಆ್ಯಮೋಸ್ ಮತ್ತೊಂದು ಗೋಲು ದಾಖಲಿಸುವ ಮೂಲಕ ಮೊದಲಾರ್ಧ ಪಂದ್ಯದಲ್ಲೇ ಕರ್ನಾಟಕ 3-0 ಅಂತರದಿಂದ ಸಂಪೂರ್ಣ ಹಿಡಿತ ಸಾಧಿಸಿತು. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ಯಾವುದೇ ತಂಡಕ್ಕೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಪಂದ್ಯದಲ್ಲಿ ಗೋಲು ದಾಖಲಿಸಲು ಬಿಹಾರ್ ತಂಡ ಮಾಡಿದ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಕರ್ನಾಟಕದ ಆಟಗಾರರು ಯಶಸ್ವಿಯಾದರು.