ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತ ವನಿತೆಯರ ಶುಭಾರಂಭ

Srinivasa Murthy VN
Updated On : 19 Feb 2013, 12:37 pm

ನವದೆಹಲಿ: ಜಾಸ್‌ಪ್ರೀತ್ ಕೌರ್ ಮತ್ತು ರಾಣಿ ರಾಂಪಾಲ್ ಅವರು ಹ್ಯಾಟ್ರಿಕ್ ಸಾಧನೆ ಮಾಡುವುದರೊಂದಿಗೆ ವಿಶ್ವ ಹಾಕಿ ಲೀಗ್‌ನ 2ನೇ ಸುತ್ತಿನ, ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಕಜಕಿಸ್ತಾನವನ್ನು 8-0 ಗೋಲುಗಳ ಅಂತರದಿಂದ ಪರಾಭವಗೊಳಿಸಿತು.
ನಿರೀಕ್ಷೆಯಂತೆ 33ನೇ ರ್ಯಾಂಕಿಂಗ್ ಹೊಂದಿರುವ ಕಜಿಕಿಸ್ತಾನದ ವನಿತೆಯರ ತಂಡ, 11ನೇ ರ್ಯಾಂಕಿಂಗ್ ಹೊಂದಿರುವ ಅತಿಥೇಯ ತಂಡದೊಂದಿಗೆ ಸಮಾನ ಹೋರಾಟ ನಡೆಸಲು ಸಾಧ್ಯವಾಗಲಿಲ್ಲ. ಪಂದ್ಯದ ಮೇಲೆ ಆರಂಭದಿಂದಲೇ ಹಿಡಿತ ಸಾಧಿಸಿದ ಭಾರತದ ವನಿತೆಯರು 15 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರು. ಆದರೆ, ಎದುರಾಳಿ ಕಜಕಿಸ್ತಾನಕ್ಕೆ ಅವಕಾಶವೇ ದೊರಕಲಿಲ್ಲ.
ಆದರೆ, ಭಾರತದ ರಕ್ಷಣಾ ವಿಭಾಗಕ್ಕೆ ಅಡ್ಡಿಯುಂಟು ಮಾಡುವಲ್ಲಿ ಕಜಿಕಿಸ್ತಾನ ನಿರತವಾಗಿತ್ತು. ಪಂದ್ಯದಲ್ಲಿ ಅತಿಥೇಯ ತಂಡವನ್ನು ನಿಯಂತ್ರಿಸಲು ಕಜಕಿಸ್ತಾನ ಯತ್ನಿಸಿದ್ದೂ ಕಂಡುಬಂದಿತು.
ಡ್ರ್ಯಾಗ್ ಫ್ಲಿಕ್ಕರ್ ಜಾಸ್‌ಪ್ರೀತ್ 8ನೇ, 21, 54 ಹಾಗೂ 70ನೇ ನಿಮಿಷದಲ್ಲಿ ಗೋಲು ದಾಖಲಿಸಿ, ಹ್ಯಾಟ್ರಿಕ್ ಸಾಧಿಸುವುದೊಂದಿಗೆ ನಾಲ್ಕು ಗೋಲು ದಾಖಲಿಸಿದ ಅವರು ಭಾರತದ ಪರ ಸ್ಟಾರ್ ಆಟಗಾರ್ತಿ ಎನಿಸಿದರು. ಮೊದಲ ಮೂರು ಗೋಲುಗಳನ್ನು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಪೂರೈಸಿದ ಜಾಸ್‌ಪ್ರೀತ್, ನಾಲ್ಕನೇ ಗೋಲನ್ನು ಪಂದ್ಯದ ಅಂತಿಮ ಕ್ಷಣದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ದಾಖಲಿಸಿದರು.
ಭಾರತ ತಂಡದ ಇನ್ನೊಬ್ಬ ಆಟಗಾರ್ತಿ ರಾಂಪಾಲ್ ಸಹ ಹ್ಯಾಟ್ರಿಕ್ ಸಾಧಿಸಿ ಗಮನ ಸೆಳೆದರು. ಪಂದ್ಯದ 15ನೇ, 26ನೇ ಹಾಗೂ 41ನೇ ನಿಮಿಷದಲ್ಲಿ ಗೋಲು ದಾಖಲಿಸಿದ ರಾಂಪಾಲ್ ಹ್ಯಾಟ್ರಿಕ್ ಪೂರೈಸುವಲ್ಲಿ ಯಶಸ್ವಿಯಾದರು.
ಸೌದರ್ಯ ಯಾದವ್ ಅವರು ಪಂದ್ಯದ 48ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿ ತಂಡದ ಗೋಲು ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಂಡರು. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಭಾರತದ ವನಿತೆಯರು ಮಲೇಷ್ಯಾ ವಿರುದ್ಧ ಸೆಣಸಲಿದ್ದಾರೆ.
'ಪಂದ್ಯದ ಆರಂಭದಿಂದಲೂ ನಮ್ಮ ತಂಡ ನಿಯಂತ್ರಣ ಸಾಧಿಸಿತು. ಆದರೆ, ಕೆಲ ಬಾರಿ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಪಂದ್ಯದಲ್ಲಿ ನಾವು ಸಾಕಷ್ಟು ಬಾರಿ ಗೋಲು ದಾಖಲಿಸಲು ಯತ್ನಿಸದಿರುವುದು ನನಗೆ ಆತಂಕ ಉಂಟು ಮಾಡಿತು. ಏಕೆಂದರೆ ಪಂದ್ಯದಲ್ಲಿ ನಾವು ಇನ್ನೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿತ್ತು. ಮಂಗಳವಾರದ ಪಂದ್ಯದಲ್ಲಿ ನಾವು ಮಲೇಷ್ಯಾವನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ನೈಲ್ ಹಾಗೂಡ್ ಅವರು ಹೇಳಿದ್ದಾರೆ.
'ಮಲೇಷ್ಯಾ ಉತ್ತಮ ತಂಡವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಉತ್ತಮ ರ್ಯಾಂಕಿಂಗ್ ಹೊಂದುವುದು ಪ್ರಯಾಸದ ವಿಷಯವಾಗಿದೆ' ಎಂದು ಅವರು ಹೇಳಿದ್ದಾರೆ. 'ಕಜಕಿಸ್ತಾನದ ವಿರುದ್ಧ ನಮ್ಮ ಪ್ರದರ್ಶನ ಸಂತಸ ತಂದಿದೆ. ಆದರೆ, ಪಂದ್ಯದಲ್ಲಿ ನಾವು ಇನ್ನೂ ಹೆಚ್ಚಿನ ಗೋಲು ದಾಖಲಿಸಬಹುದಿತ್ತು ಎಂದು ನನಗೆ ಅನಿಸುತ್ತಿದೆ' ಎಂದು ತಂಡದ ನಾಯಕಿ ರೀತು ರಾಣಿ ಅಭಿಪ್ರಾಯಪಟ್ಟಿದ್ದಾರೆ.

ಜಪಾನ್‌ಗೆ ಜಯ
ನವದೆಹಲಿ:
ಶಿಹೋ ಸಕಾಯ್ ಬಾರಿಸಿದ ಮೂರು ಗೋಲುಗಳ ನೆರವಿನಿಂದಾಗಿ ಜಪಾನ್ ವನಿತೆಯರ ಹಾಕಿ ತಂಡ, ಸೋಮವಾರ ನಡೆದ ವಿಶ್ವ ಹಾಕಿ ಸರಣಿಯ ಪಂದ್ಯದಲ್ಲಿ ಫಿಜಿ ವನಿತೆಯರ ತಂಡವನ್ನು 14-0 ಭರ್ಜರಿ ಅಂತರದಿಂದ ಸೋಲಿಸಿತು.
ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಪಾನ್ ತಂಡ, ಪಂದ್ಯದ ಮೊದಲಾರ್ಧದಲ್ಲೇ 8 ಗೋಲುಗಳನ್ನು ದಾಖಲಿಸಿತ್ತು. ಈ ಮೂಲಕ ಎದುರಾಳಿಗಳ ಮೇಲೆ ಹಿಡಿತ ಸಾಧಿಸಿದ ಜಪಾನ್, ಅಂತಿಮವಾಗಿ ಪ್ರಚಂಡ ಜಯ ಗಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement